ಮೈಸೂರು,ಮಾ,12,2020(www.justkannada.in): ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪೆಂಜಳ್ಳಿ ಗ್ರಾಮಕ್ಕೆ ಆನೆ ಲಗ್ಗೆಯಿಟ್ಟಿದ್ದು ಈ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಎಂಟ್ರಿ.
ಪೆಂಜಳ್ಳಿ ಗ್ರಾಮಕ್ಕೆ ಬರೋಬ್ಬರಿ 5 ಆನೆಗಳು ಎಂಟ್ರಿ ಕೊಟ್ಟಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ . ಪದೇ ಪದೇ ಕಾಡಾನೆಗಳು ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಗ್ರಾಮಸ್ಥರು ಭಯಭೀತರಾಗಿದ್ದು ಈ ಬಗ್ಗೆ ದೂರು ನೀಡಿದರೂ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆನೆಗಳ ಕಾರ್ಯಾಚರಣೆಗೆ ಆಗಮಿಸಿದ ಅರಣ್ಯಸಿಬ್ಬಂದಿಗಳಿಗೆ ಗ್ರಾಮಸ್ಥರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಆನೆಗಳನ್ನ ಕಾಡಿಗಟ್ಟುವಂತೆ ಆಗ್ರಹಿಸಿದರು.
Key words: mysore-hunsur-elephants-attack-villegers