ಮೈಸೂರು,ಸೆ,29,2019(www.justkannada.in): ಪತಿಯ ಸಾವಿನ ಆಘಾತ ತಾಳದೆ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ನೇತ್ರಾವತಿ ನದಿಗೆ ಹಾರಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮೈಸೂರಿನ ವಿಜಯನಗರದ 4ನೇ ಹಂತದ ನಿವಾಸಿಯಾದ ಕಿಶನ್ ಮಂದಣ್ಣ ಅವರ ಪತ್ನಿ ಕವಿತ (57), ಮಗ ಕೌಶಿಕ್ (29) ಹಾಗೂ ಮಗಳು ಕಲ್ಪಿತ (27)ಆತ್ಮಹತ್ಯೆಗೆ ಶರಣಾದವರು. ಕಳೆದ 2 ದಿನಗಳ ಹಿಂದೆ ಕಿಶನ್ ಮಂದಣ್ಣ (65) ಹೃದಯಾಘಾತದಿಂದ ಮೃತಪಟ್ಟರು . ಇದರಿಂದ ತೀವ್ರ ಆಘಾತದಿಂದ ಮನನೊಂದ ಇಡೀ ಕುಟುಂಬ ಮುಂದೆ ದಿಕ್ಕು ತೋಚದಂತಾಗಿದೆ. ಮೃತರ ದೇಹವನ್ನು ಮನೆಯಲ್ಲಿಯೇ ಬಿಟ್ಟು, ಅದರ ಪಕ್ಕದಲ್ಲಿ ಚೀಟಿಯೊಂದನ್ನು ಬರೆದಿಟ್ಟು, ಕುಟುಂಬದ ಯಜಮಾನ ಸಾವು ನಮಗೆ ತೀವ್ರ ನೋವುಂಟು ಮಾಡಿದೆ. ಅವರನ್ನು ಬಿಟ್ಟು ಬದುಕುವ ಶಕ್ತಿ ನಮಗೆ ಇಲ್ಲ, ಹಾಗಾಗಿ ನಾವು ಕೂಡ ಅವರೊಂದಿಗೆ ಹೋಗುತ್ತಿದ್ದೇವೆ ಎಂದು ಬರೆದಿದ್ದಾರೆ.
ಮನೆಯ ಬಾಗಿಲನ್ನು ಹಾಕಿ, ಅದರ ಕೀ ಯನ್ನು ಹೊರಗೆ ಇಟ್ಟು ಹೋಗಿದ್ದಾರೆ. ಅಲ್ಲದೆ ಈ ವಿಷಯವನ್ನು ತಮ್ಮಲ್ಲಿ ಇದ್ದ ವಾಟ್ಸಾಪ್ ಗ್ರೂಪ್ ಗೆ ಹಾಕಿದ್ದಾರೆ. ದುರದೃಷ್ಟ ಎಂದರೆ ಗ್ರೂಪ್ ನಲ್ಲಿದ್ದವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ, ಕಾರಿನಲ್ಲಿ ಬಂಟ್ವಾಳ ಕ್ಕೆ ತೆರಳಿದ ಕುಟುಂಬ, ಅಲ್ಲಿ ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ, ವಿಷಯವನ್ನು ತಿಳಿಸಿದ್ದಾರೆ. ತಾವೆಲ್ಲಾ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ, ಕರೆ ಕಟ್ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ, ಗಾಬರಿಯಾದ ಆ ಸಂಬಂಧಿಕರು, ಮೈಸೂರಿನಲ್ಲಿರುವ ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಅವರು ಕಿಶನ್ ಮಂದಣ್ಣರ ಮನೆಗೆ ಧಾವಿಸಿ, ಪೊಲೀಸ್ ರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೋಲಿಸ್ ರು, ಮನೆ ಬಾಗಿಲು ತೆರೆದಾಗ ಕಿಶನ್ ಮಂದಣ್ಣ ಮೃತ ದೇಹದಿಂದ ದುರ್ವಾಸನೆ ಬರುತ್ತಿತ್ತು, ದೇಹವನ್ನು ಶವಗಾರಕ್ಕೆ ಸಾಗಿಸಿದ ಪೊಲೀಸರು, ಕುಟುಂಬದವರ ಪತ್ತೆಗಾಗಿ ಮೊಬೈಲ್ ಲೋಕೋಷನ್ ಪತ್ತೆ ಹಚ್ಚಲು ಪ್ರಯತ್ನಿಸಿದಾಗ, ಅದು ಅದು ಬಂಟ್ವಾಳವನ್ನು ತೋರಿಸಿದೆ. ಉದ್ಯಮಿ ಕಾಫಿ ಡೇ ಕಂಪನಿಯ ಮಾಲೀಕ ಸಿದ್ಧಾರ್ಥ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಕಿಶನ್ ಮಂದಣ್ಣರ ಪತ್ನಿ ಕವಿತ ಅವರ ಶವ ಇಂದು ಪತ್ತೆಯಾಗಿದೆ. ಅವರ ಇಬ್ಬರು ಮಕ್ಕಳ ಶವ ಪತ್ತೆಗಾಗಿ ನದಿಯಲ್ಲಿ ಶೋಧನೆ ನಡೆಯುತ್ತಿದೆ.
summary….
It is reported that Kavitha Mandanna and her 2 children Jumped to Nethravathi
River yesterday evening. They travelled from Mysore yesterday Morning. Husband Kalmadanda Kishen Mandanna also died Yesterday in his Vijayanagar 4th Stage Mysore house.
It is believed that Wife and children locked the body in the house and latter took the tragic Decision. It seems they’ve left behind a death note.Wife Kavitha’s body recovered and search for bodies of Kaushik and Kalpitha are going on.
Key words: mysore- husband –dead-wife- commits -suicide – river-with-children