ಮೈಸೂರು,ಮೇ,13,2019(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಗಾರಿಗೂ ಮುಂಚೆಯೇ ಹಾವುಗಳ ಕಾಟ ಹೆಚ್ಚಾಗಿದ್ದು, ಬೇಸಿಗೆ ಮಳೆಗೆ ಉರಗಗಳು ಬಿಲ ಬಿಟ್ಟು ಹೊರ ಬರುತ್ತಿವೆ…
ಈ ಹಿಂದೆ ಬೀದಿ ನಾಯಿಗಳ ಹಾವಳಿಯಿಂದ ಕಂಗೆಟ್ಟಿದ್ದ ಮೈಸೂರು ಮಹಾನಗರ ಪಾಲಿಕೆ ಆದ್ರೇ ಇದೀಗ ಹಾವುಗಳ ಹಾವಳಿಯಿಂದ ಕಂಗೆಟ್ಟಿದೆ. ಮುಂಗಾರು ಸಂದರ್ಭದಲ್ಲಿಯೂ ಹಾವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಾಜಕಾಲುವೆ ಈಗಾಗಲೇ ಅಲ್ಲಲ್ಲಿನ ಗಿಡಗಂಟೆಗಳಿಂದ ಮುಚ್ಚಿ ಹೋಗಿದ್ದು, ಇದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾವುಗಳು ಹೊರ ಬರುವ ಸಾಧ್ಯತೆ ಇದೆ.
ಇನ್ನು ಇಂದು ಗಾಂಧಿನಗರ ಹಾಗೂ ಇತರೆ ಭಾಗಗಳಲ್ಲಿ ಹಾವುಗಳು ಕಾಣಿಸಿಕೊಂಡಿದ್ದು, ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಹಾವುಗಳಿಂದ ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದಾರೆ. ಉರಗ ಪ್ರೇಮಿಗಳು ಹೊರ ಬರುತ್ತಿರುವ ಹಾವುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ.
Key words: Mysore –increase- snakes -before –Rainy season