ಮೈಸೂರು,ಜನವರಿ,5,2021(www.justkannada.in): ಕೊರೋನಾ ಮಹಾಮಾರಿ ಮತ್ತು ಲಾಕ್ ಡೌನ್, ನಂತರದ ಕೆಲ ದಿನಗಳಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿನ ಟ್ರಿಣ್ ಟ್ರಿಣ್ ಸೈಕಲ್ ಸೇವೆಗೆ ಡಿಮ್ಯಾಂಡ್ ಕುಸಿದಿತ್ತು. ಇದೀಗ ಶಾಲೆ ಕಾಲೇಜು ಆರಂಭವಾದ ಬೆನ್ನಲ್ಲೆ ಟ್ರಿಣ್ ಟ್ರಿಣ್ ಸೈಕಲ್ ಬಳಕೆ ಹೆಚ್ಚಾಗಿದೆ.
ಕೊರೊನಾದಿಂದಾಗಿ ಟ್ರಿಣ್ ಟ್ರಿಣ್ ಸೈಕಲ್ ಬಳಕೆಯಿಂದ ಜನ ಹಿಂದೆ ಸರಿದಿದ್ದರು. ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಲ್ಲದೆ ಟ್ರಿಣ್ ಟ್ರಿಣ್ ಸೇವೆಗೆ ನಿರೀಕ್ಷಿತ ಪ್ರತಿಕ್ರಿಯೆ ದೊರೆತಿರಲಿಲ್ಲ. ಇದೀಗ ಟ್ರಿಣ್ ಟ್ರಿಣ್ ಸೈಕಲ್ ಬಳಕೆದಾರರು ಯಥಾಸ್ಥಿತಿಗೆ ಮರಳುತ್ತಿದ್ದು, ಟ್ರಿಣ್ ಟ್ರಿಣ್ ಬೈಸಿಕಲ್ ಬಳಕೆ 70%ನಷ್ಟು ಚೇತರಿಕೆ ಕಂಡಿದೆ.
ಹೌದು ಇದೀಗ ಶಾಲೆ ಕಾಲೇಜು ಆರಂಭವಾಗಿದ್ದು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಿರುವ ಹಿನ್ನೆಲೆ ಟ್ರಿಣ್ ಟ್ರಿಣ್ ಸೈಕಲ್ ಬಳಕೆ ಸೇವೆ ಎಂದಿನಂತೆ ಯಥಾಸ್ಥಿತಿಗೆ ಮರಳಿದೆ.
ಮೈಸೂರಿನಲ್ಲಿ 52 ಸ್ಟ್ಯಾಂಡ್ ಗಳಿದ್ದು, 450 ಬೈಸಿಕಲ್ ಗಳಿವೆ. ಇದುವರೆಗೂ ಒಟ್ಟು 14641 ನೋಂದಣಿಯಾಗಿದ್ದು , ರೈಲು ನಿಲ್ದಾಣದ ಟ್ರಿಣ್ ಟ್ರಿಣ್ ಸ್ಟ್ಯಾಂಡ್, ಯುನಿವರ್ಸಿಟಿ ಸ್ಟ್ಯಾಂಡ್ ಹೊರತು ಪಡಿಸಿ ಉಳಿದೆಲ್ಲಾ ಸ್ಟ್ಯಾಂಡ್ ಗಳಲ್ಲಿ ಟ್ರಿಣ್ ಟ್ರಿಣ್ ಬಳಕೆ ಹೆಚ್ಚಾಗಿದೆ.
Key words: Mysore -increased – demand – Trinh Trin- Cycle.