ಮೈಸೂರು,ಮಾರ್ಚ್,23,2021(www.justkannada.in): ದೇಶಿ ಹಾಗೂ ವಿದೇಶಿ ಹಕ್ಕಿಗಳನ್ನು ಆಕರ್ಷಿಸುವ ನಂಜನಗೂಡು ತಾಲ್ಲೂಕು ಹದಿನಾರು ಕೆರೆ ಸ್ವಚ್ಚತೆಗೆ ರೋಟರಿ ಹಾಗೂ ಇನ್ನರ್ ವೀಲ್ ಸಂಸ್ಥೆಗಳು ಮುಂದಾಗಿದ್ದು, ಮಾರ್ಚ್ 25ರ ಗುರುವಾರ ಕಾರ್ಯಕ್ರಮ ನಿಗದಿಯಾಗಿದೆ.
ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆ ಹಾಗೂ ಅದರ ಅಂಗಸಂಸ್ಥೆಗಳಾದ ಇನ್ನರ್ ವೀಲ್ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಇವರು ಹದಿನಾರು ಗ್ರಾಮ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯತ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ , ಸರ್ಕಾರಿ ಪ್ರೌಢ ಶಾಲೆ ಹದಿನಾರು ಇವರೆಲ್ಲರ ಸಹಯೋಗದಲ್ಲಿ ಹದಿನಾರು ಕೆರೆಯ ಸುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಮೈಸೂರು ಸೌತ್ ಈಸ್ಟ್ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶುಭಾ ಮುರಳೀಧರ್ ತಿಳಿಸಿದ್ದಾರೆ.
ಇದರೊಂದಿಗೆ ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಹದಿನಾರು ಗ್ರಾಮದ ರೋಟರಿ ಸಮುದಾಯ ದಳ(ಆರ್ ಸಿಸಿ) ಸದಸ್ಯರೂ ಭಾಗವಹಿಸಲಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದ ಜೊತೆಗೆ “ಹದಿನಾರು ಕೆರೆ” ಯಲ್ಲಿ ಪ್ರತಿವರ್ಷವೂ ಬರುವ ವಲಸೆ ಹಕ್ಕಿಗಳ ಬಗ್ಗೆ ಉಪ ಯುಕ್ತ ಮಾಹಿತಿಯನ್ನು ಮೈಸೂರಿನ ಪಕ್ಷಿ ತಜ್ಞ ಡಾ. ಅಭಿಜಿತ್ ಎಪಿಸಿ ನೀಡಲಿದ್ದಾರೆ. ಹದಿನಾರು ಗ್ರಾಮದ ಸಮುದಾಯ ಕೇಂದ್ರದಲ್ಲಿ ಸಭಾ ಕಾರ್ಯಕ್ರಮವೂ ಇರಲಿದೆ.
ತಹಶೀಲ್ದಾರ್ ಭೇಟಿ:
ಹದಿನಾರು ಕೆರೆ ಪಕ್ಷಿ ವೀಕ್ಷಣೆಯ ತಾಣವಾಗಿ ರೂಪುಗೊಳಿಸಲು ಹದಿನಾರಿನ ‘”ನೇಚರ್ ಕ್ಲಬ್” ತಂಡ ಉತ್ಸುಕವಾಗಿದ್ದು ಈ ಬಗ್ಗೆ ತಮ್ಮ ಅನಿಸಿಕೆಯನ್ನು ತಂಡದವರಾದ ಡಾ. ರವೀಂದ್ರ ಅವರು ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಿಳಿಸಿದರು.
ರೋಟರಿ ಮೈಸೂರ್ ಸೌತ್ ಈಸ್ಟ್ ನ ಆರ್. ಸಿ.ಸಿ ಕೊ-ಆರ್ಡಿನೇಟರ್ ಮುರಳೀಧರ್ ವೈ.ವಿ ಹಾಗೂ ಇನ್ನರ್ ವೀಲ್ ಸಂಸ್ಥೆಯ ಪರವಾಗಿ ಅಧ್ಯಕ್ಷೆ ಶುಭಾ ಮುರಳೀಧರ್ ಅವರು ತಮ್ಮ ಕ್ಲಬ್ ಮಾ. 25 ರ ಗುರುವಾರ ನಡೆಸಲು ಉದ್ದೇಶಿಸಿದ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಕೆರೆಯನ್ನು ವೀಕ್ಷಿಸಿದ ತಹಶೀಲ್ದಾರ್ ಮೋಹನ ಕುಮಾರಿ ಅವರು ಈ ಕಾಯಕ್ರಮದಲ್ಲಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಗಳು ಸೇರಿ ಸ್ವಚ್ಛತೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.
Key words: Mysore- Inner Wheel –hadinaru lake-cleanliness-program -March 25.