ಮೈಸೂರು, ಜುಲೈ 13, 2020: ಮೈಸೂರು ಲಾಕ್ ಡೌನ್ ಗೊಂದಲಕ್ಕೆ ತೆರೆ ಬಿದ್ದಿದೆ. ಮೈಸೂರು ಸಂಪೂರ್ಣ ಲಾಕ್ ಡೌನ್ ಇಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ.
ಇಡೀ ಮೈಸೂರು ಲಾಕ್ಡೌನ್ ಮಾಡಲ್ಲ. N.R.ಕ್ಷೇತ್ರದ ಕೆಲವು ಭಾಗ ಮಾತ್ರ ಲಾಕ್ಡೌನ್ ಮಾಡ್ತಿವಿ. ಲಾಕ್ಡೌನ್ ತೋರಿಸೋಕೆ ಅಥವ ಅವೈಜ್ಞಾನಿಕವಾಗಿ ಮಾಡಬಾರದು. ಲಾಕ್ಡೌನ್ನಿಂದ ಕೇಸುಗಳೇನು ಕಡಿಮೆ ಆಗೋಲ್ಲ ಎಂದು ಡಿಸಿ ತಿಳಿಸಿದ್ದಾರೆ.
ನಮ್ಮ ಉದ್ದೇಶ ಸಾವು ಕಡಿಮೆ ಮಾಡೋದು. ಅದಕ್ಕಾಗಿ ಲಾಕ್ಡೌನ್ ಮಾಡಿ ಸರ್ವೇ ಮಾಡ್ತಿವಿ. ಸರ್ವೆ ಸಂದರ್ಭದಲ್ಲಿ ಆಂಟಿಜೆನ್ ಟೆಸ್ಟ್ ಮಾಡಿ ಸ್ಥಳದಲ್ಲೆ ರಿಸಲ್ಟ್ ಪಡೆಯುತ್ತೇವೆ. ಮುಂಬೈನ್ ಧಾರಾವಿ ಮಾಡೆಲ್ನಲ್ಲಿ ಚೇಜಿಂಗ್ ವೈರಸ್ ಮಾಡೆಲ್ ಪ್ರಯತ್ನ ಮಾಡ್ತಿವಿ. ಆ ಮೂಲಕ ನಿಗದಿತ ಕಂಟೈನ್ಮೆಂಟ್ ಜೋನ್ನಲ್ಲಿ ಸೋಂಕು ನಿಯಂತ್ರಣಕ್ಕೆ ಪ್ರಯತ್ನ ಮಾಡ್ತಿವಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.
ಸದ್ಯಕ್ಕೆ ಲಾಕ್ಡೌನ್ ಇಲ್ಲ. ಭವಿಷ್ಯದಲ್ಲಿ ಅಗತ್ಯವಿದ್ದರೆ ಮಾತ್ರ ಲಾಕ್ಡೌನ್ ಮಾಡ್ತಿವಿ. ಸ್ವಯಂ ಲಾಕ್ಡೌನ್ ನಾವು ಬೆಂಬಲ ಕೊಡ್ತಿವಿ. ಕೆಲವು ಕಡೆ ಸ್ಥಳಿಯರ ಸಹಾಯದಿಂದ ನಾವು ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ಪಡ್ತಿದ್ದೀವಿ. ಇಂದಿನ ಸಿಎಂ ಸಭೆಯಲ್ಲು ಅದನ್ನೆ ಹೇಳಿದ್ದೇವೆ. ಮೈಸೂರಿಗೆ ಲಾಕ್ಡೌನ್ ಅವಶ್ಯಕತೆ ಇಲ್ಲ ಅಂತ ಸಿಎಂಗು ಹೇಳಿದ್ದೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.
ಸುಭಾಷ್ ನಗರ, ಮಂಡಿ ಮೊಹಲ್ಲ , ಉದಯಗಿರಿ, ಕಲ್ಯಾಣ ಗಿರಿ ಮಾತ್ರ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ.