ಮೈಸೂರು,ಸೆ,9,2019(www.justkannada.in): ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ರಸ್ತೆಗಿಳಿದಿದ್ದು, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದಾರೆ.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಮೈಸೂರಿನ ಯರಗನಹಳ್ಳಿ ಸರ್ಕಲ್ ಬಳಿ ಜೆಡಿಎಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಜಿಪಂ ಸದಸ್ಯ ಮಾದೇಗೌಡ, ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಹೋರಾಟ ರೂಪಿಸಲಾಗಿದೆ. ಡಿಕೆಶಿ ಬಿಡುಗಡೆ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತೆ. ಮುಂದಿನ ಭಾರಿ ಸಿಎಂ ಆದ್ರೆ ಡಿ.ಕೆ ಶಿವಕುಮಾರ್ ಅವರೇ ಸಿಎಂ ಆಗ್ಲಿ. ಅವರಿಗೆ ನಮ್ಮ ಬೆಂಬಲ ಇದೆ ಎಂದು ಜೆಡಿಎಸ್ ಜಿಪಂ ಸದಸ್ಯ ಮಾದೇಗೌಡ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಇದೇ ರೀತಿ ಕೇಂದ್ರ ಸರ್ಕಾರ ಒಕ್ಕಲಿಗ ಸಮುದಾಯದ ಮುಂಚಿಣಿ ನಾಯಕರನ್ನ ಹಣಿಯುವ ಕೆಲಸ ನಡೆಯುತ್ತಿದೆ. ಇದು ನಿಲ್ಲದಿದ್ದರೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ನಿರಂತರ ಹೋರಾಟ ಮಾಡ್ತಿವಿ. ಬಿಜೆಪಿ ಸೇರಿದ್ರ ಸೇಫ್ ಅನ್ನೊ ಮನಸ್ಥಿತಿ ಸೃಷ್ಠಿಸಲು ಕೇಂದ್ರ ಬಿಜೆಪಿ ನಾಯಕರು ಪ್ರಯತ್ನ ಮಾಡ್ತಿದ್ದಾರೆ. ಡಿಕೆಶಿ ಹುಲಿ ಆ ಹುಲಿ ಬಂದ ಮುಕ್ತವಾದ್ರೆ ಬಿಜೆಪಿಗೆ ಕಂಟಕ ಕಾದಿದೆ ಎಂದು ಮಾದೇಗೌಡ ಹೇಳಿದರು.
Key words: mysore-JDS activists –protest -arrest -former minister -DK Sivakumar.