ಮೈಸೂರು, ಅ.22, 2020 : (www.justkannada.in news ) ನಗರದ ಜ್ಞಾನಬುತ್ತಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಅ. 24 ರಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ಸಿದ್ಧಪಡಿಸಿರುವ ‘ಸಮಗ್ರ ಕನ್ನಡ ವ್ಯಾಕರಣ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸಂಜೆ 6 ಗಂಟೆಗೆ ಲಕ್ಷಿಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಉಪನ್ಯಾಸಕ ಡಾ. ಎಸ್. ನಾಗಾಚಾರಿ ಅವರು ಈ ಪುಸ್ತಕದ ಕತೃ. ಈ ಪುಸ್ತಕವನ್ನು ಅಬಕಾರಿ ಇಲಾಖೆ ಉಪ ಆಯುಕ್ತ ಡಾ. ಮಹಾದೇವಿ ಬಾಯಿ ಬಿಡುಗಡೆ ಮಾಡುವರು. ಪುಸ್ತಕ ಕುರಿತು ಬೆಂಗಳೂರಿನ ಅಕ್ಕ ಐಎಎಸ್ ಅಕಾಡಮಿಯ ನಿರ್ದೇಶಕ ಡಾ. ಶಿವಕುಮಾರ್ ಮಾತನಾಡುವರು,
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ಶಂಕರೇಗೌಡ ವಹಿಸುವರು. ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಉಪಸ್ಥಿತರಿರುವರು ಎಂದು ಜ್ಞಾನಬುತ್ತಿ ಸಂಸ್ಥೆಯ ಕಾರ್ಯದರ್ಶಿ ಹಚ್, ಬಾಲಕೃಷ್ಣ ತಿಳಿಸಿದ್ದಾರೆ.
key words : mysore-jnanabuthi-book-release-mysore