ಮೈಸೂರು, ಏ.18, 2020 : (www.justkannada.in news) : ಕೋವಿಡ್ 19 ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಪೊಲೀಸ್ ಪೇದೆ, ಪತ್ರಕರ್ತನನ್ನು ತಡೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಕರ್ತವ್ಯದ ಸಲುವಾಗಿ ಕುವೆಂಪುನಗರದ ಜ್ಞಾನಗಂಗಾ ಶಾಲೆ ಬಳಿ ತೆರಳುತ್ತಿದ್ದ ಸ್ಥಳೀಯ ಖಾಸಗಿ ನ್ಯೂಸ್ 1 ಚಾನೆಲ್ ನ ವರದಿಗಾರ ಯಶ್ ಅವರನ್ನು ತಡೆದ ಪೊಲೀಸ್ ಪೇದೆ, ಅವಾಚ್ಯವಾಗಿ ನಿಂಧಿಸಿ ಬಳಿಕ ಠಾಣೆಗೆ ಕರೆದುಕೊಂಡು ಹೋಗಿ ಮೂರು ಗಂಟೆಗಳ ಕಾಲ ಕೂರಿಸಿಕೊಂಡಿದ್ದಾರೆ.
ಪತ್ರಕರ್ತರ ಕರ್ತವ್ಯಕ್ಕೆ ಲೋಪವಾಗದಂತೆ ನೋಡಿಕೊಳ್ಳಿ ಎಂದು ಕೇಂದ್ರ, ರಾಜ್ಯ ಸರ್ಕಾರಗಳು ಹೇಳಿವೆ. ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ. ಆದರೂ ಹೀಗೆ ಪೊಲೀಸರು ದುಂಡಾ ವರ್ತನೆ ತೋರಿರುವುದು ಖಂಡನೀಯ.

ಖಂಡನೆ :
ಮೈಸೂರು ನಗರ ಪೊಲೀಸ್ ಪೇದೆಯ ಈ ದುಂಡಾವರ್ತನೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಂದ್ರ ಖಂಡಿಸಿದ್ದಾರೆ. ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದಾರೆ.
JUSTKANNADA. IN
key words : mysore-journalist-assulted-by-police