ಮೈಸೂರು, ಜು26, 2020 : (www.justkannada.in news ) ಜಿಲ್ಲೆಯ ಕೆ. ಆರ್. ನಗರ ತಾಲ್ಲೂಕಿನ ಮತ್ತೊಂದು ದೇಗುಲದಲ್ಲಿ ಕಳ್ಳತನ. ಕೆಲವೇ ದಿನಗಳ ಅಂತರದಲ್ಲಿ ತಾಲ್ಲೂಕಿನ ಮೂರು ಪ್ರಮುಖ ದೇಗುಲಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಕಳ್ಳರು.
ಇದೀಗ ಇತಿಹಾಸ ಪ್ರಸಿದ್ದ ಮೀನಾಕ್ಷಮ್ಮ ಸಮೇತನಾಗಿರುವ ಅರ್ಕೆಶ್ವರಸ್ವಾಮಿ ದೇಗುಲ ಕಳ್ಳರ ಕಣ್ಣಿಗೆ.ಅರ್ಕೇಶ್ವರ ಸ್ವಾಮಿಯ ದೇವಾಲಯದ ಲಿಂಗದ ಮೇಲಿರುವ ನೀರು ಬೀಳುವ ತಾಮ್ರದ 1 ಧಾರಾ ಪಾತ್ರೆ, ಮಿನಾಕ್ಷಮ್ಮ ದೇವರ 1.5 ಅಡಿ ಎತ್ತರದ ತ್ರಿಶೂಲ ಹಾಗೂ ಸಣ್ಣ ಪುಟ್ಟ ತಾಮ್ರ ಮತ್ತು ಬೆಳ್ಳಿಯ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಕಳ್ಳರು.
ಕೆ. ಆರ್. ನಗರ ಪಟ್ಟಣದ ಸಮೀಪದ ಕಾವೇರಿ ನದಿ ತೀರದಲ್ಲಿರುವ ಅರ್ಕೇಶ್ವರ ಸ್ವಾಮಿ ದೇವಾಲಯದಲ್ಲೀಗ ನವೀಕರಣ ಕಾಮಗಾರಿ ಕೆಲಸ ಪ್ರಗತಿಯಲ್ಲಿತ್ತು. ದೇವಾಲಯದ ಸುತ್ತಮುತ್ತ ಕಾಂಪೌಂಡ್ ಹಾಗೂ ಭದ್ರತೆ ಇಲ್ಲದಿರುವುದರ ಜೊತೆಗೆ, ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಭೀತಿಯಿಂದಾಗಿ ದೇವಾಲಯದ ಜೀರ್ಣೋದ್ದಾರದಲ್ಲಿ ತೊಡಗಿರುವ ಕಾರ್ಮಿಕರು ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು.
ಕಳ್ಳತನದ ಮಾಹಿತಿ ತಿಳಿಯುತ್ತಿದ್ದಂತೆ ಡಿ.ವೈ.ಎಸ್.ಪಿ ಸುಮಿತ್ ಹಾಗೂ ವೃತ್ತ ನಿರೀಕ್ಷಕ ಪಿ. ಕೆ. ರಾಜು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ.
ದೇವಾಲಯದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ.ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿ ಪರಿಶೀಲನೆ ನಡೆಸಿ, ಕಳ್ಳರ ಶೋಧ ಕಾರ್ಯಕ್ಕೆ ಮುಂದಾಗಿರುವ ಪೊಲೀಸರು.
ಇದು ಮೂರನೇ ದೇಗುಲ :
ಇತ್ತೀಚೆಗೆ ಕೆ. ಆರ್. ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ಕಾವೇರಿ ನದಿ ತೀರದಲ್ಲಿರುವ ಪುರಾಣಪ್ರಸಿದ್ದ ಶ್ರೀರಾಮ ದೇಗುಲದಲ್ಲಿ ಕಳ್ಳತನವಾಗಿತ್ತು. ಅದಾದ ಬಳಿಕ ಭೇರ್ಯ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಕರಿಯಮ್ಮ ದೇಗುಲದಲ್ಲಿ ಕಳ್ಳತನವಾಗಿತ್ತು. ಇದೀಗ ಕಾವೇರಿ ನದಿ ತೀರದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಅರ್ಕೇಶ್ವರ ಸ್ವಾಮಿ ದೇಗುಲದಲ್ಲಿ ತಮ್ಮ ಕೈಚಳಕ ತೋರಿರುವ ಕಳ್ಳರು.
oooo
key words : mysore-k.r.nagara-theft-temple-police-covid