‘ಭಾರತ ಸಿಂಧೂರಿ’ ಬಯೋಪಿಕ್ ಸಿನಿಮಾ ; ದಾಸರಿ ರೋಹಿಣಿ ಫಸ್ಟ್ ರಿಯಾಕ್ಷನ್..!

 

ಮೈಸೂರು, ಜೂ.08, 2021 : (www.justkannada.in news ) ರಾಜ್ಯದ ದಕ್ಷ ಐಎಎಸ್ ಅಧಿಕಾರಿ ದಾಸರಿ ರೋಹಿಣಿ ಸಿಂಧೂರಿ ಅವರ ಕಾಯಕ ಆಧಾರಿತ ‘ಭಾರತಸಿಂಧೂರಿ’ ಬಯೋಪಿಕ್ ಸಿನಿಮಾಗೆ ಪೂರ್ವ ತಯಾರಿ ನಡೆದಿದೆ.

ಲಾಕ್ ಡೌನ್ ಬಳಿಕ ಈ ಸಿನಿಮಾ ಸೆಟ್ಟೇರಲಿದೆ. ಮಹಿಳಾ ಪ್ರಧಾನ ಚಿತ್ರಕ್ಕೆ ಮಂಡ್ಯದ ಹುಡುಗಿ ಅಕ್ಷತಾ ಪಾಂಡುಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸಂಬಂಧ ಈಗಾಗಲೇ ಸಿನಿಮಾದ ಟೈಟಲ್ ನೋಂದಣಿಯಾಗಿದೆ. ಕಸಾಪ ಚುನಾವಣೆ ಮತ್ತು ಲಾಕ್ ಡೌನ್ ನಂತರ ಸಿನಿಮಾ ಸೆಟ್ಟೇರಲಿದೆ.

jk

ಈ ಸಿನಿಮಾದ ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ ಹಾಗೂ ನಿರ್ದೇಶನವನ್ನು ಮಂಡ್ಯದವರೇ ಆದ ಕವಿ, ಪತ್ರಕರ್ತ, ಸಂಘಟಕ ಎಸ್. ಕೃಷ್ಣಸ್ವರ್ಣಸಂದ್ರ ಮಾಡಲಿದ್ದಾರೆ.

ರೋಹಿಣಿ ರಿಯಾಕ್ಷನ್ :

ಈಗಾಗಲೇ ನಾಡಿನ ಹಲವಾರು ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ , ಐಪಿಎಸ್ ಅಧಿಕಾರಿಗಳಿಗೆ ಫ್ಯಾನ್ ಫಾಲೋವರ್ಸ್ ಇರೋದು ಕಂಡಿದ್ದೇವೆ ಈ ಕಾರಣಕ್ಕೆ ಇಂಥ ಅಧಿಕಾರಿಗಳ ಜೀವನ ಆಧಾರಿತ ಸಿನಿಮಾಗಳು ತಯಾರಾಗಿ ಅವು ಗಲ್ಲಾ ಪೆಟ್ಟಿಗೆಯಲ್ಲೂ ಯಶಸ್ವಿಯಾದ ಇತಿಹಾಸವಿದೆ.

ಈ ಸಾಲಿನಲ್ಲಿ ಇದೀಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸೇರ್ಪಡೆ. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್ ಹೊಂದಿರುವ ಸಿಂಧೂರಿ ಅವರ ಕಾಯಕ ಆಧಾರಿತ ‘ ಭಾರತಸಿಂಧೂರಿ’ ಸಿನಿಮಾ ಸೆಟ್ಟಿರುತ್ತಿರುವ ಸುದ್ದಿ ಬಂದಿದೆ.
ಈ ಸಂಬಂಧ ‘ಜಸ್ಟ್ ಕನ್ನಡ’ ಸಂಪರ್ಕಿಸಿದಾಗ, ತಮ್ಮ ಬಯೋಪಿಕ್ ಆಧಾರಿತ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ರೋಹಿಣಿ ಸಿಂಧೂರಿ ಹೇಳಿದರು.

 

key words : mysore-kannada-film-rohini.sindhoori-bio.pick-sandalwood