ಮೈಸೂರು: ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ

ಮೈಸೂರು,ಡಿಸೆಂಬರ್,2,2024 (www.justkannada.in): ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಸುವರ್ಣ ಕರ್ನಾಟಕ ಕನ್ನಡ ಹಬ್ಬವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ಮ.ನ. ಲತಾಮೋಹನ್ , ಹಲವಾರು ಪ್ರಥಮಗಳಿಗೆ ಕನ್ನಡ ಹಾಗೂ ಕರುನಾಡು ಸಾಕ್ಷಿಯಾಗಿದೆ. ಭಾರತದಲ್ಲಿ ಅತಿಹೆಚ್ಚು ಜ್ನಾನಪೀಠ ಪ್ರಶಸ್ತಿ ಪಡೆದ ರಾಜ್ಯ ನಮ್ಮದು ಆದರೆ ಇಂದು ಮನೆಗಳಲ್ಲಿ ಹಾಗೂ ಶಾಲೆಗಳಲ್ಲಿ ನಾವು ಮಕ್ಕಳೊಂದಿಗೆ ಕೇವಲ ಇಂಗ್ಲಿಷ್ ನಲ್ಲೆ ಮಾತನಾಡುತ್ತೇವೆ. ಮಕ್ಕಳು ಕನ್ನಡ ಬಳಸಬೇಕು, ಕನ್ನಡದ ಇತಿಹಾಸ, ಸಾಹಿತ್ಯ ಎಲ್ಲವನ್ನೂ ತಿಳಿಯ ಬೇಕು ಹಾಗಾದರೆ ಮಾತ್ರ ಮುಂದಿನ ಪೀಳಿಗೆಗೆ ಕನ್ನಡದ ಮಹತ್ವದ ಅರಿವಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಸುರೇಶ್ ಋಗ್ವೇದಿ ಮಾತನಾಡಿ ಮೈಸೂರು ಮಹಾರಾಜರ ಕೊಡುಗೆ ಅಪಾರವಾದುದು.  ಅವರು ಮಾಡಿದ ಅಭಿವೃದ್ಧಿ, ಆಡಳಿತದಿಂದ ನಾವು ಇಷ್ಟು ಮುಂದುವರೆದಿದ್ದೇವೆ. ಹಲವಾರು ರಾಷ್ಟ್ರ ಪುರುಷರ ತ್ಯಾಗ ಬಲಿದಾನದಿಂದ ನಾವು ಇಂದು ನೆಮ್ಮದಿಯಾಗಿ ಇದ್ದೇವೆ. ಕರ್ನಾಟಕದ ಕುಲಪುರೋಹಿತ ಆಲೂರು ವೆಂಕಟರಾಯರು ಅಂದು ಮಾಡಿದ ಏಕೀ ಕರಣದ ಹೋರಾಟದ ಫಲ ಇಂದು ನಾವು ನೋಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೈಸೂರಿನ ಗೌರವ ಕಾರ್ಯದರ್ಶಿ ಮ.ನ ಲತಾ ಮೋಹನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಹೆಜ್ಜಿಗೆ, ಇತಿಹಾಸ ತಜ್ಞ ಸುರೇಶ್ ಋಗ್ವೇದಿ, ಸಾಲುಮರದ‌ ವೆಂಕಟೇಶ್, ಸಮಿತಿಯ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣ ಆಚಾರ್, ಪುನೀತ್, ಪಾರ್ಶ್ವನಾಥ ಜೈನ್, KEB ಮಂಜುನಾಥ್, ಮೋಹನ್, ರಚನಾ, ಪೂಜಾ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.

Key words: Mysore,  Kannada Rajyotsava, Mookambika Samruddhi Layout