ಎರಡು ಸಾವಿರ ವರ್ಷಗಳ ಇತಿಹಾಸವಿರುವ ‘ಕನ್ನಡ’ ರಾಷ್ಟ್ರಭಾಷೆಯಾಗಲಿ : ಕರವೇ ನಾರಾಯಣಗೌಡ ಆಗ್ರಹ.

 

ಮೈಸೂರು, ನ.29, 2020 : ( www.justkannada.in news ) ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಹೀಗಾಗಿ ಕನ್ನಡ ಭಾಷೆಯನ್ನ ರಾಷ್ಟ್ರ ಭಾಷೆಯನ್ನಾಗಿ ಮಾಡಿ. ಇಲ್ಲವಾದರೇ ದೇಶದ ಎಲ್ಲಾ ಭಾಷೆಗಳಿಗೂ ಸರಿಸಮನವಾದ ಮನ್ನಣೆ ನೀಡಿ. ಹಿಂದೆ ಭಾಷೆಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಬಲವಂತವಾಗಿ ನಮ್ಮ ಮೇಲೆ ಹೇರಬೇಡಿ. ಮೈಸೂರಿನಲ್ಲಿ ಕರವೇ ರಾಜ್ಯಧ್ಯಕ್ಷ ಟಿ ಎ ನಾರಾಯಣಗೌಡ ಹೇಳಿಕೆ.

logo-justkannada-mysore

ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಹೇಳಿಕೆ

ಮರಾಠಿಗರಿಗೆ ಪ್ರಾಧಿಕಾರ ಮಾಡಿರುವುದು ಸರಿಯಲ್ಲ. ಇದು ಚುನಾವಣೆ ಗಿಮಿಕ್ ಅಷ್ಟೇ. ರಾಜ್ಯದ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವು ಇಲ್ಲ. ಬಸವ ಕಲ್ಯಾಣದಲ್ಲಿ ಚುನಾವಣೆ ಗೆಲ್ಲುವುದಕ್ಕೆ ಸರ್ಕಾರ ಈ ಪ್ರಾಧಿಕಾರವನ್ನ ರಚನೆ ಮಾಡಿದೆ.
ಈ ರೀತಿ ಜಾತಿ ಹೆಸರನಲ್ಲಿ, ಧರ್ಮದ ಹೆಸರಿನಲ್ಲಿ ರಾಜ್ಯ ಮತ್ತು ದೇಶವನ್ನ ಒಡೆಯುವ ಕೆಲಸವನ್ನ ಸರ್ಕಾರಗಳು ಮಾಡುತ್ತಿವೆ. ಇವರಿಗೆ ಕನ್ನಡ ಭಾಷೆ ಬೇಕಾಗಿಲ್ಲ. ಚುನಾವಣೆ ಗೆಲ್ಲುವುದೇ ಇವರ ಗುರಿಯಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಟಿ ಎ ನಾರಾಯಣಗೌಡ.

mysore-kannada-rakshna-vedike-national-language-kannada-demand

000

key words : mysore-kannada-rakshna-vedike-national-language-kannada-demand