ಬೇವಿನ ಮರದಲ್ಲಿ ಸುರಿಯುತ್ತಿದೆ ನೊರೆ ಹಾಲು…!

 

ಮೈಸೂರು, ಅ.13, 2021 : (www.justkannada.in news ) ಕರ್ನಾಟಕ ತಮಿಳುನಾಡು ಗಡಿ ಪ್ರದೇಶ ತಾಳವಾಡಿಯ ಬೈಯನಪುರ ಹಾಗೂ ಕೊಂಗಳ್ಳಿ ಬೆಟ್ಟದ ಸಮೀಪ ಕುತೂಹಲಕಾರಿ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಬೇವಿನ ಮರದ ಕೊಂಬೆಯ ಮಧ್ಯದಿಂದ ನೊರೆನೊರೆಯಾಗಿ ಹಾಲು ಉಕ್ಕಿ ಹರಿದು ಭೂಮಿ ಸೇರುತ್ತಿದೆ.

ನಾಗಮಲ್ಲಪ್ಪ ಎಂಬುವರ ಜಮೀನಿನಲ್ಲಿ ಬೆಳೆದ ಬೇವಿನ ಮರದಲ್ಲಿ ಇದು ಕಂಡು ಬಂದಿದೆ. ಬೇವಿನ ಮರದಲ್ಲಿ ಉಕ್ಕುತ್ತಿರುವ ನೊರೆ ಹಾಲನ್ನ ಕಂಡ ಗ್ರಾಮಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ಹಾಲು ಮಾರಮ್ಮ ಅಥವಾ ಜೇನು ಮಾರಮ್ಮನ ಮಹಿಮೆ ಎಂಬುದು ಗ್ರಾಮಸ್ಥರು ನಂಬುಗೆ.

ಈ ಮಾಹಿತಿ ಅರಿತ ಸುತ್ತಮುತ್ತಲಿನ ಗ್ರಾಮಸ್ಥರು ಬೇವಿನ ಮರಕ್ಕೆ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ.  ಇದೊಂದು ಶುಭ ಸಂಕೇತವೆಂದು ನಂಬಿದ್ದಾರೆ. ಅಲ್ಲದೆ ಹೇರಳವಾಗಿ ಹಾಲು ಉಕ್ಕಿ ಹರಿಯುತ್ತಿರುವ ದೃಶ್ಯ ನೋಡಲು ಕುತೂಹಲದಿಂದ ಬರುತ್ತಿದ್ದಾರೆ. ಕೆಲ ಗ್ರಾಮಸ್ಥರು ಪ್ರಸಾದದಂತೆ ಸ್ವೀಕರಿಸುತ್ತಿದ್ದಾರೆ.

ವೈಜ್ಞಾನಿಕ ಯುಗದಲ್ಲಿ ಅಚ್ಚರಿಯ ಬೆಳವಣಿ ಸಾಕಷ್ಟು ಕುತೂಹಲಕ್ಕೆ ನಾಂದಿಯಾಗಿದೆ.

 


key words : Mysore-Karnataka-chamarajanagara-talavadi-neem-tree-milk-produce