KSOU ಮತ್ತೆ ಗೊಂದಲದ ಗೂಡು : ಅಂಕಪಟ್ಟಿ ವಿತರಣೆ ಸಂಬಂಧ ಪರೀಕ್ಷಾಂಗ ಕುಲಸಚಿವರ ಅದೇಶ ಹಿಂದಪಡೆದ ಕುಲಸಚಿವ (ಆಡಳಿತ).!

 

ಮೈಸೂರು, ಆ.20, 2021 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಅಂಕಪಟ್ಟಿ ವಿತರಿಸುವುದಾಗಿ ಹೇಳಿಕೆ ನೀಡಿ ಹೊರಡಿಸಿದ್ದ ಪ್ರಕಟಣೆಯನ್ನು ಇದೀಗ ಹಿಂಪಡೆದುಕೊಂಡಿರುವುದು ವಿದ್ಯಾರ್ಥಿಗಳಲ್ಲಿ ಮತ್ತೆ ಗೊಂದಲ ಮೂಡಿಸಿದೆ.

ಕುಲಪತಿಗಳ ಅನುಮೋದನೆ ಮೇರೆಗೆ 2012-13 ಕ್ಕೂ ಮೊದಲು ನೊಂದಣಿ ಮಾಡಿಸಿರುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲು ಪರೀಕ್ಷಾಂಗ ಕುಲಸಚಿವರು ಈ ವರ್ಷದ ಏ.08 ರಂದು ಪ್ರಕಟಣೆ ಹೊರಡಿಸಿದ್ದರು. ಇದರಲ್ಲಿ  ಸಹಭಾಗಿತ್ವ ಸಂಸ್ಥೆ ( ಕೋಲಾಬ್ರೇಟ್ ಸಂಸ್ಥೆ) ಗಳಲ್ಲಿ 2012 -13 ಕ್ಕೂ ಮೊದಲು ನೊಂದಣಿ ( ಎನ್ರೋಲ್ ) ಮಾಡಿಸಿರುವ ಪದವಿ, ಸ್ನಾತಕೋತ್ತರ ಪದವಿ , ಡಿಪ್ಲೋಮಾ(ನಾನ್ ಟೆಕ್ನಿಕಲ್) ವಿದ್ಯಾರ್ಥಿಗಳು ಈ ಕಾನ್ವೋಕೇಷನ್ ಸರ್ಟಿಫಿಕೇಟ್ ಪಡೆಯಲು ಅರ್ಹರು. ಸಂಬಂಧಿಸಿದ ಕೋಲಾಬ್ರೇಟ್ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆಯಲು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಜತೆಗೆ ಒಂದು ವೇಳೆ ಕೋಲಾಬ್ರೇಟ್ ಸಂಸ್ಥೆಗಳು ಕಾರ್ಯ ನಿರ್ವಹಿಸದಿದ್ದರೇ ಅಂಥ ವಿದ್ಯಾರ್ಥಿಗಳು ನೇರವಾಗಿಯೇ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಇದರಂತೆ ಸಾವಿರಾರು ವಿದ್ಯಾರ್ಥಿಗಳು ಅಂಕಪಟ್ಟಿ ಪಡೆಯುವ ಉದ್ದೇಶದಿಂದ ಶುಲ್ಕ ಪಾವತಿಸಿ ಘಟಿಕೋತ್ಸವಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು.

ಇದೀಗ ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಸಚಿವರು (ಆಡಳಿತ) ಆ.08 ರಂದು ಆದೇಶ ಹೊರಡಿಸಿ, ಏ.08 ರಂದು ಪರೀಕ್ಷಾಂಗ ಕುಲಸಚಿವರು ಹೊರಡಿಸಿರುವ ಪ್ರಕಟಣೆ ಆದೇಶವನ್ನು ಹಿಂಪಡೆಯುತ್ತಿರುವುದಾಗಿ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಇದು ಈಗ ವಿದ್ಯಾರ್ಥಿಗಳಲ್ಲಿ ಮತ್ತೆ ಆತಂಕ, ಗೊಂದಲ ಸೃಷ್ಠಿಸಿದೆ.

ಈ ನಡುವೆ ಕರ್ನಾಟಕ ರಾಜ್ಯ ಮುಕ್ತ ವಿವಿ 2012-13 ಕ್ಕೂ ಮೊದಲು ನೊಂದಣಿ ಮಾಡಿಸಿರುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲು ಮುಂದಾಗಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ರಾಜ್ಯಪಾಲರಿಗೂ ಪತ್ರ ಬರೆದು ದೂರು ನೀಡಲಾಗಿತ್ತು.
ನಿಯಮ ಮತ್ತು ರಾಜ್ಯವ್ಯಾಪಿಯ ಉಲ್ಲಂಘನೆಯ ಕಾರಣಕ್ಕೆ ಡಿಸ್ಟೆನ್ಸ್ ಎಜುಕೇಜನ್ ಕೌನ್ಸಿಲ್ (Distance Education Council, New Delhi ) ಮತ್ತು ಯು.ಜಿ.ಸಿ. ಗಳ ತೀವ್ರ ವಿರೋಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿವಿ ಗುರಿಯಾಗಿತ್ತು. ಇದೀಗ, ದೇಶಾದ್ಯಂತ ಮತ್ತು ಹೊರದೇಶಗಳ ಕೆಎಸ್‌ಓಯು ಕೋಲಾಬ್ರೇಟಿವ್ ಸಂಸ್ಥೆ (Collabrative Institute) ಗಳ ಮೂಲಕ 2012-13ನೇ ಸಾಲಿನ ಸುಮಾರು 77 ಸಾವಿರ ವಿದ್ಯಾರ್ಥಿಗಳಿಗೆ ತರಾತುರಿಯಲ್ಲಿ ಪದವಿ ಪ್ರಮಾಣಪತ್ರಗಳನ್ನು ನಿಯಮ ಬಾಹಿರವಾಗಿ ಹಂಚುವ ಕೆಲಸಕ್ಕೆ ಕೆಎಸ್‌ಓಯು ಕೈಹಾಕಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಆಗಸ್ಟ್ ಮೊದಲ ವಾರದಲ್ಲಿ ದೂರು ನೀಡಲಾಗಿತ್ತು.

ಇದೀಗ, ಖುದ್ದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಸಚಿವರೇ, ಪರೀಕ್ಷಾಂಗ ಕುಲಸಚಿವರ ಆದೇಶವನ್ನು ಹಿಂಡಪಡೆದಿರುವುದು, ಪದವಿ ಪ್ರಮಾಣಪತ್ರಗಳನ್ನು ನಿಯಮ ಬಾಹಿರವಾಗಿ ನೀಡಲಾಗುತ್ತಿದೆ ಎಂಬ ಆರೋಪಗಳಿಗೆ ಪುಷ್ಠಿ ನೀಡುವಂತಿದೆ.

ಈ ನಡುವೆ, ಪರೀಕ್ಷಾಂಗ ಕುಲಸಚಿವರ ಸುತ್ತೋಲೆ ಸಂಖೆಯನ್ನು ( 8.4.2021) ಮಾತ್ರ ಕುಲಸಚಿವರು ಹಿಂಪಡೆದಿದ್ದು, ನಂತರ ನಾಲ್ಕು ತಿಂಗಳ ನಂತರ ಆ ಸುತ್ತೋಲೆ ಹಿಂಪಡೆದಿದ್ದು, ಈ ಆದೇಶದಲ್ಲಿ ಕುಲಪತಿಗಳ ಅನುಮೋದನೆಯ ಯಾವುದೇ ಉಲ್ಲೇಖವಿಲ್ಲ. ಜತೆಗೆ 6.3.2021 ರಲ್ಲಿ ಹೊರಡಿಸಿದ್ದ ಕಚೇರಿ ಆದೇಶವನ್ನು ಹಿಂಪಡೆದಿರುವುದಿಲ್ಲ. ಇದು ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿದೆ.

ENGLISH SUMMARY…

KSOU again in confusion: VC (Admin) withdraws Examination Reigstrar’s orders related to distribution of marks cards
Mysuru, August 20, 2021 (www.justkannada.in): The students of the Karnataka State Open University (KSOU) are in a confusion following the withdrawal of orders regarding distribution of marks cards.
On April 8, the KSOU Registrar (Exams) had issued a notification mentioning that the marks cards of the students who had registered before 2012-13 will be distributed as per the approval of the Vice-Chancellor of KSOU. Degree, Post Graduate, Diploma (non-technical) students who had enrolled earlier to 2012-13 in the collaborated institutes are eligible to get the convocation certificates. They can get the certificates through the collaborated institutions. In case if the collaborated institutions are not functioning students can apply directly, according to the notification.
Thousands of students had paid the fees and applied to get the marks card and were waiting. But now the KSOU Registrar (Admin) issued another order on August 8, mentioning that the notification which was issued on April 8 by the Registrar (Exams) is withdrawn, triggering confusion among the students.
Keywords: KSOU/ students/ confusion/ notification/ marks cards distribution

key words : mysore-karnataka-open-university-marks-card-convocation-withdrawn-vc-KSOU