ಮುಕ್ತ ವಿವಿ ಹಗರಣದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಮೌನವಹಿಸಿರುವುದೇಕೆ..? : ರಾಜ್ಯಪಾಲರಿಗೆ ಪತ್ರ.

 

ಮೈಸೂರು, ಆ.10, 2021 : (www.justkannada.in news ) ಕರಾಮುವಿಯಲ್ಲಿ ಯುಜಿಸಿ ನಿಯಮ 2018 ವಿರುದ್ಧವಾಗಿ ಹಾಗೂ ಮುಕ್ತ ವಿವಿ ಆಕ್ಟ್ 1992 ಮತ್ತು ರಾಜ್ಯದ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಿ ಹುದ್ದೆಯ ಸಂಖ್ಯೆ, ಮೀಸಲಾತಿ, ಗುತ್ತಿಗೆ ಅವಧಿ, ವೇತನ ನಿಗಧಿಪಡಿಸದೇ, ತರಾತುರಿಯಲ್ಲಿ ನೇರ ಸಂದರ್ಶನ ಮೂಲಕ 28 ಶೈಕ್ಷಣಿಕ ವಿಭಾಗಗಳಿಗೆ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರ (Assistant Professors )ಹುದ್ದೆಗಳ ನೇಮಕ ಮಾಡಲಾಗುತ್ತದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ.

ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮುಖಂಡ ಹಾಗೂ ಕೆ.ಎಸ್.ಒ.ಯು. ವ್ಯವಸ್ಥಾಪನ ಮಂಡಳಿ ಮಾಜಿ ಸದಸ್ಯ ಕೆ.ಎಸ್.ಶಿವರಾಮು ಈ ಪತ್ರ ಬರೆದಿದ್ದು, ಕರಾಮುವಿಯ ಕುಲಪತಿಗಳು, ಕುಲಸಚಿವರು ಮತ್ತು ವ್ಯವಸ್ಥಾಪನಾ ಮಂಡಳಿಗೆ ತಕ್ಷಣ ಆದೇಶ ನೀಡಿ ಈ ನೇಮಕಾತಿಯ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಘನತೆವೆತ್ತ ರಾಜ್ಯಪಾಲರು/ಕುಲಾಧಿಪತಿಗಳು ಮತ್ತು ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್,ಶಿವರಾಮು ಅವರು ಈ ಪತ್ರ ಬಿಡುಗಡೆ ಮಾಡಿದರು. ರಾಜ್ಯಪಾಲರಿಗೆ ಬರೆದಿರುವ ಪತ್ರದ ವಿವರ ಹೀಗಿದೆ….

ಕೋವಿಡ್ ಲಾಕ್ ಡೌನ್ ನಡುವೆಯೇ ಕರಾಮುವಿಯಲ್ಲಿ ಹೆಚ್ಚಿನ ಪ್ರಕಟಣೆ ಮತ್ತು ಅರ್ಜಿ ಸಲ್ಲಿಸಲು ಸಾಕಷ್ಟು ಸಮಯಾವಕಾಶ ನೀಡದೇ ತರಾತರಿಯಲ್ಲಿ ನೇರ ಸಂದರ್ಶನ ( WALK IN INTERVIEW) ಮೂಲಕ 28 ಶೈಕ್ಷಣಿಕ ವಿಭಾಗಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರು (Assistant Professors) ಹುದ್ದೆಗಳ ನೇಮಕಾತಿ ಮಾಡಲು ಹೊರಟಿದ್ದು, ಇದು U.G.C ನಿಯಮಾವಳಿ 2018 ಮತ್ತು U.G.C ಸುತ್ತೋಲೆ ಸಂಖ್ಯೆ: -25-1/2018 (ps/misc) dated 29-08-2019ಗಳಿಗೆ ವಿರುದ್ಧವಾಗಿ ಹಾಗೂ KSOU Act 1992 ಮತ್ತು ರಾಜ್ಯದ Reservation Policy ಗಳನ್ನು ಉಲ್ಲಂಘನೆಯಾಗಿರುತ್ತದೆ.
ಗುತ್ತಿಗೆ ಆಧಾರಿತ ಅಥವಾ ಅತಿ ಉಪನ್ಯಾಸಕರ ನೇಮಕಾತಿಯಾಗಲೂ ಖಾಯಂ Assistant Professors ಹುದ್ದೆಗಳಿಗೆ ನಿಗಧಿಪಡಿಸಿರುವ ಅರ್ಹತಾ ಮಾನದಂಡ ಮತ್ತು ನೇಮಕಾತಿ ಕ್ರಮಗಳನ್ನು ಅನುಸರಿಸಬೇಕೆಂದು U.G.C Regulation 2018ರ ನಿಯಮಾವ 3 ಮತ್ತು 13 ರಲ್ಲಿ ಸ್ಪಷ್ಟಪಡಿಸಲಾಗಿದೆ. ಮುಂದುವರೆದು ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನಕ್ಕೆ ಕರೆಯತಕ್ಕದ್ದೆಂದೂ ಸಹ ನಿಯಮವಿರುತ್ತದೆ.

covid-treatment-decision-one-day-salary-cut-ksou-all-employees

ಮಾನ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ W.P 56101 of 2014(5RS) PIL ಪ್ರಕರಣ: ತನ್ನ 14.07.2015 ತೀರ್ಪಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ರಾಜ್ಯ ಸರ್ಕಾರದ ಮೀಸಲಾತಿ ನಿಯಮಗಳು ಮತ್ತು ಮೆರಿಟ್ ಆಧಾರದಲ್ಲಿಯೇ ಮಾಡತಕ್ಕದೆಂದು ಆದೇಶಿಸಿರುತ್ತದೆ.

ಆದಾಗ್ಯೂ ರಾಜ್ಯ ಮಟ್ಟದಲ್ಲಿ ವಿತೃತ ಜಾಹಿರಾತನ್ನು ನೀಡದೇ, ಅರ್ಜಿ ಸಲ್ಲಿಸಲು ಸಾಕಷ್ಟು ಸಮಯಾವಕಾಶ ನೀಡದೇ ಹುದ್ದೆಯ ಸಂಖ್ಯೆ ಮೀಸಲಾತಿ, ಗುತ್ತಿಗೆ ಅವದಿ, ವೇತನ ನಿಗಧಿಪಡಿಸದೇ ತರಾತುರಿಯಲ್ಲಿ ತಾತ್ಕಾಲಿಕ ಗುತ್ತಿಗೆ ಆಧಾರಿತ ಉಪನ್ಯಾಸಕರ ನೇಮಕಾತಿ ಮಾಡಲು ಹೊರಟಿರುವುದರ ಹಿಂದಿನ ಉದ್ದೇಶವೇನು?

ಕೆ.ಎಸ್.ಒಯುವಿನ ಈ ಹಿಂದಿನ ಕುಲಪತಿಗಳಾದ ಪ್ರೊ.ಎನ್.ಎನ್.ರಾಮೇಗೌಡ, ಪ್ರೊ.ಕೆ.ಎಸ್.ರಂಗಪ್ಪ ಮತ್ತು ಪ್ರೊ.ಡಿ.ಶಿವಲಿಂಗಯ್ಯನವರು ಪ್ರವೇಶಾತಿ ಗಣನೀಯವಾಗಿ ಕುಸಿತವಾಗಿರುವ ಈಗಿನ ಪರಿಸ್ಥಿತಿಯಲ್ಲಿ ಮೀಸಲಾತಿ ಪ್ರಕಟಸದೇ ಈ ತರಾತುರಿ ನೇಮಕಾತಿಗಳ ಅವಶ್ಯಕತೆಯೇನೆಂದು ಮಾಧ್ಯಮಗಳ ಮೂಲಕ ಪ್ರಶ್ನಿಸಿರುತ್ತಾರೆ.

ಕರಾಮುವಿಗೆ 1998 ರಲ್ಲಿ ಮೈಸೂರು ವಿವಿಯಿಂದ 72 ಉಪನ್ಯಾಸಕರ ಹಾಗೂ 7 ರೀಡರ್ ಹುದ್ದೆಗಳು ವರ್ಗಾವಣೆಗೊಂಡಿದ್ದು, 2017-8ರಲ್ಲಿ ಪ್ರೊ.ಡಿ.ಶಿವಲಿಂಗಯ್ಯನವರು ಕರಾಮುವಿ ಕುಲಪತಿಯಾಗಿದ್ದ ಅವಧಿಯಲ್ಲಿ ಹಾಗೂ ನಾನು ಅಲ್ಲಿ ವ್ಯವಸ್ಥಾಪನಾ ಮಂಡಳಿಯ ಸದಸ್ಯನಾಗಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ 7 Professors ಹಾಗೂ 23 Associate professors ಹುದ್ದೆಗಳನ್ನು ಮಂಜೂರು ಮಾಡಿಸಿಕೊಳ್ಳಲು ಯಶಸ್ವಿ ಆಗಿರುತ್ತೇವೆ.

ಪ್ರೊ.ಕೆ.ಎಸ್.ರಂಗಪ್ಪ ಮತ್ತು ಪ್ರೊ.ಎಂ.ಜಿ.ಕೃಷ್ಣನ್ ಅವಧಿಯಲ್ಲಿ KSOU (Creation of posts and absorption of temporary teachers) Statute 2012ಮೂಲಕ ಸೃಷ್ಟಿಯಾದ 28 ಬೋಧಕ ಹುದ್ದೆಗಳನ್ನು ಬಗ್ಗೆ ಜಸ್ಟೀಸ್ ಭಕ್ತವತ್ಸಲ ವರದಿಯಂತೆ ರಾಜ್ಯಪಾಲರ/ಕುಲಾಧಿಪತಿಗಳ ಆದೇಶವನ್ನು ಮತ್ತು ಕರಾಮುವಿಯ ಕ್ರಮವನ್ನು ಪ್ರಶ್ನಿಸಿ ಸದರಿ ಹುದ್ದೆಗಳ ಫಲಾನುಭವಿಗಳು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಟ್ ಅರ್ಜಿ 36509/2019 ಪೆಂಡಿಂಗ್ ಇರುತ್ತದೆ.

ಮಾನ್ಯತೆ ರದ್ದುಗೊಂಡು ಸರ್ಕಾರದ ಯಾವುದೇ ಅನುದಾನವಿಲ್ಲದೇ ಅರ್ಥಕವಾಗಿ ಗಣನೀಯವಾಗಿ ಕುಸಿದಿರುವ ಕರಾಮುವಿವಿ, ಮಾನ್ಯತೆ ನವೀಕರಣಗೊಂಡ 2 ವರ್ಷಗಳ ಪ್ರವೇಶಾತಿ ವಾರ್ಷಿಕ 15 ಸಾವಿರವನ್ನು ದಾಟಿರುವುದಿಲ್ಲ, ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿರುವ ತೆಲುಗು, ಉರ್ದು, ಹಿಂದಿ, ಸಂಸ್ಕೃತ, ಬಯೋಟೆಕ್ನಾಲಜಿ, ಮಾನವಶಾಸ್ತ್ರ ಮುಂತಾದ ವಿಭಾಗಗಳಲ್ಲಿ ಪ್ರವೇಶಾತಿ ದ್ವಿ ಸಂಖ್ಯೆ ದಾಟಿರುವುದಿಲ್ಲ. ಆ ವಿಭಾಗದಲ್ಲಿ ಈಗಾಗಲೇ ಉಪನ್ಯಾಸಕರು ಇರುತ್ತಾರೆ. ಇನ್ನು ಕೆಲವು ಪ್ರಾರಂಭಗೊಳ್ಳದ ವಿಭಾಗಗಳಗೆ ಗುತ್ತಿಗೆ ಆಧಾರಿತ ಉಪನ್ಯಾಸಕರ ನೇಮಕಾತಿ ಮಾಡುತ್ತಿರುವುದರ ಹಿಂದಿನ ಹುನ್ನಾರವೇನು..?

ಮೈಸೂರಿನಲ್ಲಿ ವಾರಾಂತ್ಯ ಕೋವಿಡ್ ಲಾಕ್ ಡೌನ್ ಇದ್ದರೂ 11.08.201B ಅಂದ 14.08.2018(ಶನಿವಾರ)ದ ವರೆಗೆ WALK IN INTERVIEW ಗೆ ವೇಳಾಪಟ್ಟ ಪ್ರಕಟಿಸಲಾಗಿದ್ದು, ಈ ತರಾತುರಿಯ ನೇಮಕಾತಿ ಹಿಂದಿನ ಹುನ್ನಾರಗಳಿಗೆ ಮತ್ತೇನು ಸಾಕ್ಷಿ ಬೇಕು..?

ಜಸ್ಟೀಸ್ ಭಕ್ತವತ್ಸಲ ವರದಿಯ ಅನುಷ್ಠಾನದಲ್ಲಿ ವಿಫಲರಾಗಿರುವುದಕ್ಕೆ W.P.17068/2018 ನ ರಿಟ್ ಅರ್ಜಿದಾರರಿಂದ 02.07.2021ರಲ್ಲಿಯೇ ನ್ಯಾಯಾಂಗ ನಿಂದನೆ ಜಾರಿಯಾಗಿದ್ದರೂ ಸಹ ಯಾವುದೇ ಎಗ್ಗಿಲ್ಲದೇ ಅವೇ ಹಗರಣಗಳನ್ನು ಮುಂದುವರೆಸಿರುತ್ತಾರೆ.

ಜಸ್ಟೀಸ್ ಭಕ್ತವತ್ಸಲ ವರದಿಯಲ್ಲಿನ ಹಗರಣಗಳ ಅವಧಿಯಲ್ಲಿ ಹಾಗೂ ನಂತರದ ಸತತ 2 ಅವಧಿಗೆ ಕರಾಮುವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿದ್ದ ಹಾಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಅಶ್ವಥ್‌ನಾರಾಯಣ್ ಮತ್ತು ಕರಾಮುವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರೂ ಆಗಿರುವ ಉನ್ನತ ಶಿಕ್ಷಣ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕರಾಮುನಿ ಇತ್ತಿಚಿನ ಎಲ್ಲಾ ವಿದ್ಯಮಾನಗಳೂ ಬಂದರೆ ನನ್ನ ದೂರು ಹಾಗೂ ತಮ್ಮ ವರದಿಗಳ ಮೂಲಕ ತಲುಪುತ್ತಿದ್ದರೂ ಆ ಬಗ್ಗೆ ಕ್ರಮ ಕೈಗೊಳ್ಳದೇ ಅವು ಮೌನವಾಗುವುದರ ಹಿಂದಿನ ಹುನ್ನಾರವೇನು?

ಕರಾಮುವಿವಿಯ ಎಲ್ಲಾ ಉನ್ನತ ಅಧಿಕಾರಿಗಳು, ಅದನ್ನು ವಿರೋಧಿಸಬೇಕಿರುವ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ Dr.P.S. ಯಡಪಡಿತ್ತಾಯ, ಪ್ರೊ.ಯಶಸ್ವಿನಿ, ಡಾ.ಲಾವಣ್ಯ ಮತ್ತು ಮತ್ತು 2ನೇ ಬಾರಿಗೆ ಸದಸ್ಯರಾಗಿರುವ Dr. ರಘು.H. ಅಕ್ಮಂಜಿ ಮುಂತಾದ ಉನ್ನತ ಶಿಕ್ಷಣ ತಜ್ಞರೂ ಕೂಡ ಈ ಮೇಲೆ ಹೇಳಿದ ಕರಾಮುವಿಯ ಮತ್ತೊಂದು ಉದ್ದೇಶಿತ ನೇಮಕಾತಿಗೆ ಪರೋಕ್ಷವಾಗಿ ಕೈ ಜೋಡಿಸಿರುತ್ತಾರೆ ಎಂದರೆ ತಪ್ಪಾಗುವುದಿಲ್ಲ,

 

key words : mysore-karnataka-open-university-oppointment-governor-complaint-letter-ksou