ಮುಜರಾಯಿ ದೇವಾಲಯಗಳ ಹಣ ಹಿಂದೂ ದೇವಾಲಯಗಳಿಗೆ ಮಾತ್ರ ಬಳಕೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ.

 

ಮೈಸೂರು, ಫೆ.2, 2020 : (www.justkannada.in news) : ಹಿಂದೂ ದೇವಾಲಯಗಳಿಂದ ಬರುವ ಆರ್ಥಿಕ ಸಂಪನ್ಮೂಲಗಳನ್ನು ಹಿಂದೂ ದೇವಾಲಯಗಳು ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ. ಮೈಸೂರಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ಧಾರ್ಮಿಕ ದತ್ತಿ ವತಿಯಿಂದ ಬರುವ ಆರ್ಥಿಕ ಸಂಪನ್ಮೂಲವನ್ನು ಕ್ರೂಡಿಕರಿಸಿ ಅದೇ ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದೆವೆ. ಇತರೆ ಯಾವುದೆ ಧರ್ಮದ ದೇವಾಲಯಗಳ ಅಭಿವೃದ್ಧಿಗೆ ಈ ಹಣ ಬಳಕೆ ಮಾಡುವುದಿಲ್ಲ.

ಅಲ್ಪ ಸಂಖ್ಯಾತ ದೇವಾಲಯದ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಿಡುಗಡೆಗೊಳಿಸಲಿದ್ದೆವೆ. ಈಗಾಗಲೇ ಸಾರ್ವಜನಿಕರಲ್ಲಿ ಗೊಂದಲ ನಿರ್ಮಾಣಗೊಂಡಿದ್ದು ಈ ಮೂಲಕ ಈ ಗೊಂದಲವನ್ನು ನಿವಾರಿಸಿದ್ದವೆ. ಸಚಿವ ಕೋಟಿ ಶ್ರೀನಿವಾಸ್ ಪೂಜಾರಿ ಹೇಳಿಕೆ.

ರಾಜ್ಯದಲ್ಲಿನ ಬಡವರಿಗೆ ಅನುಕೂಲವಾಗಲೆಂದೇ ರಾಜ್ಯದ ಪ್ರಮುಖ ದೇವಾಲಗಳಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಇದರಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಹಿನ್ನಿತರ ಸಮಸ್ಯೆಗಳು ಬಗೆಹರಿಯಲಿದೆ.
ಸಾಮೂಹಿಕ ವಿವಾಹದಲ್ಲಿ ಅಂತರ್ ಜಾತಿ ವಿವಾಹಕ್ಕೂ ಪ್ರೋತ್ಸಾಹ ನೀಡಲಾಗುವುದು. ಎರಡು ಕುಟುಂಬಗಳ ಒಪ್ಪಿಗೆ ಇದ್ದರೆ ಸಾಮೂಹಿಕ ವಿವಾಹ ನೆರೆವೆರಿಸಲಾಗುವುದು. ಈ ವಿಚಾರದಲ್ಲಿ ಸರ್ಕಾರದ ಅಭ್ಯಂತರ ಇಲ್ಲ.
ರಾಜ್ಯ ನೂರು ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಈಗಾಗಿ ಆಯಾಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದ್ದೆ. ಇಂದೂ ರಜೆ ಇದ್ದರೂ ಸಹ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದೆವೆ.
ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ.

ಕೇಂದ್ರದ ಬಜೆಟ್ ಕುರಿತು ಸಿದ್ದರಾಮಯ್ಯ ಟೀಕೆ ವಿಚಾರ..
ಮೈಸೂರಿನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ. ಜನಪರ, ರೈತಪರ, ಬಜೆಟ್ ಎನ್ನು ಹೇಳಿಕೆಯನ್ನು ಸಿದ್ದರಾಮಯ್ಯ ಅವರಿಂದ ನಿರೀಕ್ಷೆ ಮಾಡಲು ಸಾಧ್ಯವೆ. ಅವರು ವಿರೋಧ ಪಕ್ಷದ ನಾಯಕನಾಗಿ ಸಹಜವಾಗಿಯೇ ಟೀಕೆ ಮಾಡಿದ್ದಾರೆ. ಅವರ ಟೀಕೆಯನ್ನ ನಾವು ಸ್ವೀಕರಿಸಿದ್ದೆವೆ. ಇದು ಜನಪರ ಬಜೆಟ್ ಎಂದು ಸಿದ್ದರಾಮಯ್ಯ ಅವರಿಗೂ ಗೊತ್ತೆದೆ. ಪ್ರತಿಪಕ್ಷದ ನಾಯಕನಾಗಿ ಈ ಮಾತನ್ನ ಹೇಳಿದ್ದಾರೆ.
ನೆನ್ನೆ ಮಂಡನೆಗೊಂಡಿರುವ ಬಜೆಟ್ ಧೀನದಲಿತ ಹಾಗೂ ಬಡವರ ಪರವಾದ ಬಜೆಟ್ ಆಗಿದೆ. ರಾಜ್ಯದ ಅಭಿವೃದ್ಧಿಗೂ ಈ ಬಜೆಟ್ ಪೂರಕವಾಗಿದೆ. ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ.

key words : mysore-kota.srinivasa-poojari-mujarahi-temple-money