ಮೇಕೆದಾಟು ಪಾದಯಾತ್ರೆ ಟೀಕಿಸಿದ ಮಾಜಿ ಸಚಿವ ಸಿ.ಟಿ ರವಿಗೆ ಆರ್.ಧೃವನಾರಾಯಣ್ ತಿರುಗೇಟು.

ಮೈಸೂರು,ಮಾರ್ಚ್,2,2022(www.justkannada.in): ಮೇಕೆದಾಟು  ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಾಯಾತ್ರೆ ಬಗ್ಗೆ ಟೀಕಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಆರ್.ಧೃವನಾರಾಯಣ್, ಸಿ.ಟಿ. ರವಿ ಉಡಾಫೆಯಾಗಿ ಮಾತಾಡುವುದು ಬಿಡಬೇಕು. ಅವರಿಗೆ ಧಮ್ ಇದ್ದರೆ, ತಾಖತ್ ಇದ್ದರೆ ಮೇಕೆದಾಟು ಯೋಜನೆ ಆರಂಭ ಮಾಡಲು ಯಾಕೆ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಲಿ. ಉಡಾಫೆ ಮಾತಾಡುವುದರಲ್ಲಿ ಬಿಜೆಪಿ ಅವರು ನಿಸ್ಸಿಮರು. ಬಿಜೆಪಿ ಅವರದು ಮನೆ ಮನೆಗೆ ಬೆಂಕಿ ಹಚ್ಚುವುದು, ಮನೆ ಮನೆ ಒಡೆಯುವುದು ಅವರ ಗುಣ. ಸದಾ ಜನರ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ನಾವು ನೀರಿಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಇದರಲ್ಲಿ ತಪ್ಪೇನಿದೆ.? ನಾವು ಬೆಂಕಿ ಹಚ್ಚಲು ಯಾತ್ರೆ ಮಾಡುತ್ತಿಲ್ಲ. ಜನರ ನೀರಿಗಾಗಿ ಯಾತ್ರೆ ಮಾಡುತ್ತಿದ್ದೇವೆ. ಜೆಡಿಎಸ್ ಗೆ ಮೈಸೂರು ಭಾಗದಲ್ಲಿ ವೀಕ್ ಆಗುತ್ತೇವೆ ಎಂಬ ಆತಂಕ.  ಈ ಕಾರಣ ಜೆಡಿಎಸ್ ಕೂಡ ಮೇಕೆದಾಟು ಪಾದಾಯಾತ್ರೆ ವಿರೋಧಿಸುತ್ತಿದೆ. ಜೆಡಿಎಸ್ ನ ಮುಖಂಡರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಇದು ಕೂಡ ಜೆಡಿಎಸ್ ಹತಾಶೆಗೆ ಕಾರಣ ಎಂದು ಕುಟುಕಿದರು.

ಭಾರತೀಯರನ್ನು ಉಕ್ರೇನ್ ನಿಂದ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ವಿದೇಶಾಂಗ ನೀತಿ ಸಂಪೂರ್ಣ ವೈಫಲ್ಯ ವಾಗಿದೆ. ಕೇಂದ್ರ ಸರಕಾರ ಭಾರತೀಯರ ರಕ್ಷಣೆ ವಿಚಾರದಲ್ಲಿ ವಿಫಲವಾಗಿದೆ. ಪುಟಿನ್ ನನಗೆ ಬಹಳ ಆತ್ಮೀಯ ಸ್ನೇಹಿತ ಅಂತಾ ಮೋದಿ ಹೇಳಿ ಕೊಂಡಿದ್ದಾರೆ. ಮೋದಿ ಬೆಂಬಲಿಗರು ಮೋದಿ ವಿಶ್ವಗುರು ಅಂತಾ ಹೇಳುತ್ತಾರೆ. ಆದರೆ, ಈಗ ಅದೆಲ್ಲಾ ಏನಾಯ್ತು? ಭಾರತೀಯರನ್ನ ಯಾಕೆ ರಕ್ಷಣೆ  ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ  ದಲಿತರ  ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಕಳೆದ 8 ವರ್ಷಗಳಲ್ಲಿ 1,31,430 ದೌರ್ಜನ್ಯ ಪ್ರಕರಣ ನಡೆದಿವೆ. ಆದರೆ, ಆರೋಪಿಗಳಿಗೆ ಮಾತ್ರ ಶಿಕ್ಷೆ ಆಗುತ್ತಿಲ್ಲ. ಉತ್ತರ ಪ್ರದೇಶದಲ್ಲೆ ಅತಿ ಹೆಚ್ಚು ದೌರ್ಜನ್ಯ ಪ್ರಕರಣ ನಡೆದಿವೆ ಎಂದು ಆರ್. ಧೃವನಾರಾಯಣ್  ಕಿಡಿಕಾರಿದರು.

Key words: mysore-kpcc-R.Dhruvanarayan

ENGLISH SUMMARY…

Cong. leader R. Dhurvanarayan takes on former Minister C.T. Ravi who criticized Mekedatu Padayatra
Mysuru, March 2, 2022 (www.justkannada.in): KPCC Executive Secretary R. Dhruvanarayan today lambasted former Minister and BJP National General Secretary C.T. Ravi who criticized the Mekedatu Padyatra taken out by the Congress party in the state.
Speaking in Mysuru today, R. Dhruvanarayan said, “C.T. Ravi should stop talking irresponsibly. If he has the guts let him answer why they are delaying implementation of the Mekedatu project? The BJP leaders are experts in making loose talks. It is their culture to set houses and families on fire and divide the families. They always indulge in instilling hatred among the people. But we are taking out the padayatra for water. What is wrong with it? We are not doing it to set fire, we are struggling for water for the people. The JDS is afraid of becoming weak in the Mysuru region. That is why they are also opposing the padayatra. However, many JDS leaders are switching to the Congress party. It is frustrating the JDS leaders,” he said.
Keywords: Congress leader R. Dhruvanarayan/ former minister C.T. Ravi/ Mekedatu padayatra