ಮೈಸೂರು,ಜು,16,2020(www.justkannada.in): ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ಗೆಜೆಟ್ ನೋಟಿಪಿಕೇಷನ್ ಹೊರಡಿಸಿದ್ದಾರೆ. ಈ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ರೈತರ ಕುತ್ತಿಗೆ ಮೇಲೆ ಕಾಲಿಡುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿ ಕಾರಿದರು.
ಭೂ ಸುದಾರಣೆ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಎಂ. ಲಕ್ಷ್ಮಣ್ , ಈಗಾಗಲೇ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿ ಗೆಜೆಟ್ ನೋಟಿಪಿಕೇಷನ್ ಹೊರಡಿಸಿದ್ದಾರೆ. ಜಮಿನ್ದಾರಿ ಪದ್ದತಿ ವಾಪಸ್ಸು ತರುವ ಕಾಯ್ದೆ ಇದು. ಸರ್ಕಾರ ನಮ್ಮ ರೈತರಿಗೆ ಮರಣ ಶಾಸನ ಬರೆದಾಗಿದೆ. ರೈತರ ಹೆಸರಲ್ಲಿ ಹಸಿರು ಟವಲ್ ಹಾಕಿ ಪ್ರಮಾಣ ವಚನ ಸ್ವೀಕಾರ ಮಾಡಿ ಯಡಿಯೂರಪ್ಪ ರೈತರ ಕುತ್ತಿಗೆ ಮೇಲೆ ಕಾಲಿಡುವ ಕೆಲಸ ಮಾಡಿದ್ದಾರೆ. ಬಿಜೆಪಿ ಅಂದರೆ ಭೂಗಳ್ಳರ ಜನಾತ ಪಾರ್ಟಿ ಅಂತ ಹೊಸ ನಾಮಕರಣ ಮಾಡ್ತ ಇದ್ದೇವೆ ಎಂದು ಕಿಡಿಕಾರಿದರು.
216 ಎಕೆರೆ ತನಕ ಈ ಕಾಯ್ದೆ ಮೂಲಕ ಒಂದು ಕುಟುಂಬ ತೆಗೆದುಕೊಳ್ಳಬಹುದು. ಕೈಗಾರಿಕೆಯವರಿಗೆ ಇದು ಅನ್ ಲಿಮಿಟೆಡ್. ಈ ಬಗ್ಗೆ ಮುಖ್ಯಮಂತ್ರಿಗಳನ್ನ ಕೇಳಿದ್ರೆ ರಾಜ್ಯದಲ್ಲಿ 5ಲಕ್ಷ ಪದವೀಧರು ವರ್ಷಕ್ಕೆ ಹೊರ ಬರ್ತಿದ್ದಾರೆ, ಅವರೆಲ್ಲಿಗೂ ಒಳ್ಳೆಯದಾಗಲಿ ಅಂತ ಕಾಯ್ದೆ ತಂದಿದ್ದೇವೆ ಅಂತಾರೆ. ಮೋದಿ ಪದವಿಧರಿಗೆ ಪಕೋಡ ಮಾಡಲು ಹೇಳ್ತಾರೆ, ಇವರು ಹೊಲ ಉಳಲು ಹೇಳ್ತಾರೆ. ಏನಾಯ್ತು ನಿಮ್ಮ ವರ್ಷಕ್ಕೆ 2 ಕೋಟಿ ಉದ್ಯೋಗ ವಿಚಾರ ಎಂದು ಎಂ. ಲಕ್ಷ್ಮಣ್ ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ದೇಶವನ್ನ ಬಿಕ್ಷುಕರಾಗಿ ಮಾಡೋ ಆಸೆ ಬಿಜೆಪಿಯವರದ್ದು, ಸೌಜನ್ಯಕ್ಕಾದ್ರೂ ರೈತ ಮುಖಂಡರನ್ನ ಈ ವಿಚಾರವಾಗಿ ಮಾತನಾಡೋ ಸೌಜನ್ಯನು ಸರ್ಕಾರ ತೋರಲಿಲ್ಲ. ಲಾಕ್ ಡೌನ್ ನನ್ನ ಲಾಭವಾಗಿಸಿಕೊಂಡು ಕಾಯ್ದೆ ಜಾರಿ ತಂದಿದ್ದಿರಿ. ಸುಳ್ಳು ಹೇಳೋದು ಬಿಟ್ರಿ ಬಿಜೆಪಿಯವರಿಗೆ ಏನು ಗೊತ್ತಿಲ್ಲ ಎಂದು ಎಂ. ಲಕ್ಷ್ಮಣ್ ಕಿಡಿಕಾರಿದರು.
ಕುರಬಾರಳ್ಳಿ ಸರ್ವೆ ನಂ ಬಿ ಕರಾಬ್ ನಿಂದ ಮುಕ್ತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ಈ ಎಲ್ಲಾ ಕ್ರೆಡಿಟ್ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಲ್ಲಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೋರ್ಟ್ ಗೆ ಸ್ಪಷ್ಟ ಮಾಹಿತಿ ನೀಡಿದ್ರು. ಕೋರ್ಟ್ ಈಗ ಸ್ಪಷ್ಟ ನಿರ್ದೇಶನ ನೀಡಿತ್ತು. ಯಾರೇ ಇದ್ರು ಇದನ್ನ ಮಾಡಲೇಬೇಕಿತ್ತು. ಬಿಜೆಪಿ ನಾಯಕರು ನಾವು ಮಾಡಿದ್ದೇವೆ ಅಂತ ಹೇಳಿಕೊಳ್ತಾ ಇದ್ದಾರೆ. ಇದರ ಕ್ರೆಡಿಟ್ ಏನಿದ್ರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಗೆ ಸಲ್ಲಬೇಕು ಎಂದು ಲಕ್ಷ್ಮಣ್ ತಿಳಿಸಿದರು.
Key words: mysore- KPCC –spokesman-M. Laxman-land reform-act- cm bs yeddyurappa