ಮೈಸೂರು,ಸೆಪ್ಟಂಬರ್,3,2020(www.justkannada.in): ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧದ 5 ಸಾವಿರ ಕೋಟಿ ಹಣ ಸಂಗ್ರಹ ಆರೋಪಕ್ಕೆ ಈಗಲೂ ಬದ್ಧ. ಪ್ರತಾಪ್ ಸಿಂಹ ಆರೋಪಕ್ಕೆ ಈಗಲೂ ಬದ್ಧ, ಬಹಿರಂಗ ಚರ್ಚೆಗೆ ಈಗಲೂ ಬರುತ್ತಾರಾ ಕೇಳಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸವಾಲು ಹಾಕಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ , ವಿಜಯೇಂದ್ರ ಭ್ರಷ್ಟಾಚಾರದ ದಾಖಲೆಗಳನ್ನು ಖಂಡಿತ ಬಿಡುಗಡೆ ಮಾಡುತ್ತೇವೆ. ವಿಜಯೇಂದ್ರ ವಿರುದ್ಧದ ಆರೋಪಕ್ಕೆ ಈಗಲೂ ಬದ್ಧ ಬಹಿರಂಗ ಚರ್ಚೆಗೆ ಈಗಲೂ ಬರುತ್ತಾರಾ ಕೇಳಿ ಎಂದು ಮಾಧ್ಯಮದವರನ್ನ ಪ್ರಶ್ನಿಸಿದರು.
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತು ಕಿಡಿಕಾರಿರುವ ಎಂ.ಲಕ್ಷ್ಮಣ್ ಇದಕ್ಕೆ ಕಾನೂನು ಮೂಲಕವೇ ಠಕ್ಕರ್ ಕೊಡೋಕೆ ಸಿದ್ಧವಾಗಿದ್ದು, ಇಂತಹ ನೂರು ಎಫ್ಐಆರ್ ಬಂದರೂ ಜಗ್ಗೋದಿಲ್ಲ ಎಂದು ಹೇಳಿದರು.
‘ ಶಿಕ್ಷಕರಿಗೆ ಶಿಕ್ಷೆ ಇದೇ ಬಿಜೆಪಿಯವರ ಕೊಡುಗೆ’.
ಈ ವರ್ಷದಿಂದ ಕಾಂಗ್ರೆಸ್ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಕರ ದಿನಾಚರಣೆ ಮಾಡಲು ಪ್ರಾರಂಭಿಸುತ್ತದೆ. ಶಿಕ್ಷಕರಿಗೆ ಶಿಕ್ಷೆ ಇದೇ ಬಿಜೆಪಿಯವರ ಕೊಡುಗೆ. ಈ ಶಿರ್ಷೀಕೆ ಅಡಿಯಲ್ಲಿ ಇವತ್ತಿನ ದಿನ ಆಚರಣೆ ಮಾಡುತ್ತಿದ್ದೇವೆ. ಮಾನ್ಯ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡು ಇನ್ ಕ್ರಿಮೆಂಟ್ ನೀಡಿದ್ದರೂ. ಎರಡನೇ ಬಾರಿಗೆ 16 ಸಾವಿರ ಕೋಟಿ ಬಿಡುಗಡೆ ಮಾಡಿ ಕೊಟ್ಟಿದ್ದರು. ಕಾಂಗ್ರೆಸ್ ಇಷ್ಟೆಲ್ಲ ಮಾಡಿಕೊಟ್ಟಿದ್ರೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಗೆ ಶಿಕ್ಷಕರು ಮತ ಹಾಕಲ್ಲ. ಬೇಡಿಕೆ ವಿಚಾರವಾಗಿ ಶಿಕ್ಷಕರ ಪರ ನಾವು ನಿಂತರೂ ಯಾಕೋ ನಮ್ಮನ್ನ ಗೆಲ್ಲುಸುತ್ತಿಲ್ಲ ಎಂದು ಬೇಸರ ಎಂ. ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.
ಕಳೆದ 6 ತಿಂಗಳಿನಿಂದ ಖಾಸಗಿ ಶಿಕ್ಷಕರ ಸಂಬಳ ಇಲ್ಲದೆ ಅವರ ಪರಿಸ್ಥಿತಿ ಕೆಟ್ಟದಾಗಿದೆ. ಸರ್ಕಾರ ಇಂತಹ ಸಂಧರ್ಭದಲ್ಲಿ ಪ್ಯಾಕೇಜ್ ನೀಡುವ ಕೆಲಸ ಮಾಡಬೇಕಿತ್ತು. ಕಳೆದ ಒಂದಷ್ಟು ದಿನದಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡ್ತ ಇದ್ದಾರೆ. ಆದರೂ ಪ್ರಯೋಜನ ಆಗ್ತಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ 1.5 ಲಕ್ಷ ಜನ ಎನ್ ಪಿಎಸ್ ಗಾಗಿ ಪ್ರತಿಭಟನೆ ಮಾಡಿದ್ದರು. ಬಿಜೆಪಿಯವರೂ ಆ ಪ್ರತಿಭಟನೆಗೆ ಬಂದು ಬೆಂಬಲ ನೀಡಿ ಎಲ್ಲ ಆಶ್ವಾಸನೆ ನೀಡಿದ್ರು. ಸಿದ್ದರಾಮಯ್ಯ ವಿರುದ್ದ ಮುಗಿ ಬಿದ್ದರು. ಈಗ ಎಲ್ಲಿಹೋಯಿತು ಇವರ ಆಶ್ವಾಸನೆ. ಇದೇ ಅಶ್ವಥ್ ನಾರಾಯಣ್ ಬಂದು ಮಾತನಾಡಿದ್ರೂ. ಈಗ ಎಲ್ಲಿ ಹೋಯಿತು. ಶಿಕ್ಷಕರು ಇದನ್ನ ಅರ್ಥ ಮಾಡಿಕೊಳ್ಳಬೇಕು. ನಿರಂತರ ನಿಮ್ಮ ಪರವಾಗಿ ಹೋರಾಟ ಮಾಡ್ತ ಇರೋದು ಕಾಂಗ್ರೆಸ್ ಮಾತ್ರ ಎಂದು ಲಕ್ಷ್ಮಣ್ ಹೇಳಿದರು.
ನಿಮ್ಮ ಸರ್ಕಾರದಲ್ಲಿ ಶಿಕ್ಷಕರ ಪರವಾಗಿ ಒಂದು ಯೋಜನೆ ಜಾರಿ ತಂದಿದ್ರೆ ಚರ್ಚೆಗೆ ಬನ್ನಿ.
ಸಿದ್ದರಾಮಯ್ಯರವರ ಎರಡನೇ ವರದಿಯನ್ನ ಯಥಾವತ್ತಾಗಿ ಜಾರಿಗೆ ತರುವ ಭರವಸೆ ನೀಡಿದ್ದರು. ಆದರೆ ನಮ್ಮ ಸರ್ಕಾರ ಬರಲಿಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತ ಇದ್ದಾಗ ಬೊಬ್ಬೆ ಹೊಡೆಯುತ್ತಿದ್ದ ನೀವು ಒಂದು ಚಿಕ್ಕ ಸಮಸ್ಯೆ ಬಗೆಹರಿಸಿ. ನಿಮ್ಮ ಸರ್ಕಾರದಲ್ಲಿ ಶಿಕ್ಷಕರ ಪರವಾಗಿ ಒಂದು ಯೋಜನೆ ಜಾರಿ ತಂದಿದ್ರೆ ಚರ್ಚೆಗೆ ಬನ್ನಿ ಎಂದು ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದರು.
ಶಿಕ್ಷಕರಿಗೆ ಉಪಯೋಗವಾಗುವಂತ 16 ಕಾರ್ಯಕ್ರಮಗಳನ್ನ ಕಾಂಗ್ರೆಸ್ ಜಾರಿಗೆ ತಂದಿದೆ. ಶಿಕ್ಷಕರ ಕ್ಷೇತ್ರದಲ್ಲಿ ಈಗ ಚುನಾವಣೆ ಬರ್ತಿದೆ. ಈಗ ದೇವೆಗೌಡರನ್ನ ಕರೆದುಕೊಂಡು ಹೋಗಿ ಪ್ರತಿಭಟನೆಗೆ ಕೂರ್ತಿದ್ದಾರೆ ಶ್ರೀಕಂಠೇಗೌಡ್ರು. ತಮ್ಮದೆ ಸರ್ಕಾರ ಒಂದುವರೆ ವರ್ಷ ಇದ್ದಾಗ ಎಲ್ಲಿಹೋಗಿದ್ರೂ ಇವರು ಎಂದು ಜೆಡಿಎಸ್ ನಾಯಕರಿಗೂ ಎಂ. ಲಕ್ಷ್ಮಣ್ ಟಾಂಗ್ ನೀಡಿದರು.
Key words: mysore- kpcc- spokesperson-M.lakshman-BJP- by vijayendra