ಮೈಸೂರು,ಜೂನ್,6,2022(www.justkannada.in): ವಿಪಕ್ಷ ನಾಯಕ ಸಿದ್ದರಾಮಯಗೆ ಆರ್ಥಿಕತೆ ಏನು ಗೊತ್ತು ಎಂದು ಹೇಳಿಕೆ ನೀಡಿದ್ಧ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿರುವ ಆರ್.ಧೃವನಾರಾಯಣ್, ಪ್ರತಾಪ್ ಸಿಂಹ ಮಿತಿ ಮೀರಿ ಮಾತನಾಡಿ ಉದ್ದಟತನ ಮಾಡ್ತಿದ್ದಾರೆ. ರಾಜಕಾರಣದಲ್ಲಿ ಕಾಮನ್ ಸೆನ್ಸ್ ಬೇಕು. ಆಡಳಿತ ನಡೆಸುವವರು ಲಂಡನ್ ಗೆ ಹೋಗಿ ಪದವಿ ಪಡೆದು ಬರಬೇಕಾ. ಹಳ್ಳಿ ಪಂಚಾಯುತಿಗಳಲ್ಲಿ ಜಡ್ಜ್ ಗಳಿಂತ ಉತ್ತಮ ತೀರ್ಪು ಕೊಡ್ತಾರೆ. ಅವರೇನು ಕಾನೂನು ಪಂಡಿತರ. ಆರ್ಥಿಕ ಮಂತ್ರಿ ಆಗೋರಿಗೆ ಇಂತಹ ಡಿಗ್ರಿನೇ ಇರಬೇಕು ಅಂತ ಏನು ಇಲ್ಲ. ಮನುಷ್ಯನಿ ಸಾಮಾನ್ಯ ಜ್ಞಾನ ಇದ್ರೆ ಸಾಕು ಒಳ್ಳೆಯ ಆಡಳಿತ ಕೊಡಬಹುದು ಎಂಧು ತಿರುಗೇಟು ನೀಡಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚುವರಿ ಮತ ಪಡೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ನಮಗೆ ಹೆಚ್ಚುವರಿ ಮತ ಬರಲಿದೆ ಎಂದೆ ಅಭ್ಯರ್ಥಿಯನ್ನ ಹಾಕಿದ್ದಿವಿ. ಬೇರೆ ಪಕ್ಷದ ಅತೃಪ್ತ ಶಾಸಕರು ನಮಗೆ ಮತ ನೀಡುತ್ತಾರೆ. ಆ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಈ ಹಿಂದೆ ಜೆಡಿಎಸ್ ಸಹಾಯ ಮಾಡಿದ್ದೇವೆ. ರಾಜ್ಯ ಸಭಾ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡರನ್ನ ಹಿರಿಯರು ಎಂದು ಸಹಾಯ ಮಾಡಿದ್ದಿವಿ.
ಜೆಡಿಎಸ್ ನಮ್ಮಂತೆ ವಿರೋಧ ಪಕ್ಷದಲ್ಲಿ ಇದೆ. ಆದ್ರೆ ಬಿಜೆಪಿ ಟೀಕೆ ಮಾಡುವ ಬದಲು ನಮ್ಮನ್ನೇ ಟೀಕೆ ಮಾಡ್ತಿದ್ದಾರೆ. ಯಾವಾಗಲೂ ವಿರೋಧ ಪಕ್ಷಗಳು ಒಗ್ಗಾಟಾಗಿ ಆಡಳಿತ ಪಕ್ಷದ ವೈಫಲ್ಯಗಳ ಬಗ್ಗೆ ಹೋರಾಟ ಮಾಡಬೇಕು. ಆದ್ರೇ ಕಾಂಗ್ರೆಸ್ ಬಗ್ಗೆ ಟೀಕೆ ಮಾಡೋ ಪ್ರವೃತ್ತಿಯನ್ನ ಕುಮಾರಸ್ವಾಮಿ ಅವರು ಬಿಡಬೇಕು ಎಂದು ದೃವನಾರಾಯಣ್ ತಿಳಿಸಿದರು.
Key words: mysore-kpcc-work president-R. Dhruvanarayan-Tong-MP-Pratap simha