ಮೈಸೂರು,ಮೇ,7,2021(www.justkannada.In): ತಂದೆ ಪ್ರಾಣ ಉಳಿಸಿಕೊಳ್ಳಲು ಮಗನ ಹರಸಾಹಸ, ತಾಯಿ ಕಾಪಾಡಿಕೊಳ್ಳಲು ಆ್ಯಂಬುಲೆನ್ಸ್ ಮುಂದೆಯೇ ಠಿಕಾಣಿ ಹೂಡಿದ ಮಗ.ಪೋಷಕರನ್ನು ಕಾಪಾಡಿಕೊಳ್ಳಲು ಆಸ್ಪತ್ರೆ ಮುಂದೆ ಮಕ್ಕಳ ಪರದಾಟ. ಇನ್ನು ರೋಗಿಗಳಿಗೆ ಕಾರುಗಳಲ್ಲಿ, ಆಂಬುಲೆನ್ಸ್‌ಗಳಲ್ಲಿ ಚಿಕಿತ್ಸೆ. ಇವೆಲ್ಲವೂ ಕಂಡು ಬಂದಿದ್ದು ಮೈಸೂರು ಕೆ.ಆರ್ ಆಸ್ಪತ್ರೆಯ ಮುಂಭಾಗ.
ಹೌದು ಇದಕ್ಕೆಲ್ಲಾ ಕಾರಣ ಆಸ್ಪತ್ರೆಯಲ್ಲಿ ಬೆಡ್ ಭರ್ತಿಯಾಗಿರುವುದು. ಹೌದು, ಮೈಸೂರಿನ ಕೆ.ಆರ್ ಆಸ್ಪತ್ರೆ ಕೋವಿಡ್ ಕೇರ್‌ನಲ್ಲಿ ಎಲ್ಲಾ 600 ಬೆಡ್ ಗಳು ಭರ್ತಿಯಾಗಿದ್ದು ಈ ಹಿನ್ನೆಲೆಯಲ್ಲಿ ‘ನೋ ಬೆಡ್ಸ್’ ಬೋರ್ಡ್ ಹಾಕಲಾಗಿದೆ.
ಇನ್ನು ಬೆಡ್ ಗಾಗಿ ಜನ ಕೆ.ಆರ್ ಆಸ್ಪತ್ರೆ ಮುಂದೆ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ. ಎರಡೆರಡು ಆಂಬ್ಯುಲೆನ್ಸ್ ಬದಲಾಯಿಸಿದ್ದೇವೆ. ಇಡೀ ಮೈಸೂರು ಸುತ್ತಿದ್ರೂ ಬೆಡ್ ಸಿಗುತ್ತಿಲ್ಲ. ಯಾರೂ ಕೂಡ ಅಡ್ಮಿಟ್ ಮಾಡಿಕೊಳ್ಳತಿಲ್ಲ. ಪುಣ್ಯಾತ್ಮರು ಇಲ್ಲಿ ಬೆಡ್ ಕೊಡ್ತಿವಿ ಅಂದಿದ್ದಾರೆ ಸರ್. ಅದಕ್ಕೆ ಮಧ್ಯರಾತ್ರಿಯಿಂದ ಕಾಯುತ್ತಿದ್ದೇವೆ ಎಂದು ರೋಗಿಗಳ ಸಂಬಂಧಿಗಳು ಹೇಳುತ್ತಿರುವ ಮಾತು ಮನ ಮಿಡಿಯುತ್ತಿದೆ.
ಹಾಗೆಯೇ ಆಸ್ಪತ್ರೆ ಮುಂದೆ ತಂದೆ ಪ್ರಾಣ ಉಳಿಸಿಕೊಳ್ಳಲು ಮಗ ಹರಸಾಹಸಪಡುತ್ತಿದ್ದರೇ ಇತ್ತ ತಾಯಿ ಕಾಪಾಡಿಕೊಳ್ಳಲು ಆ್ಯಂಬುಲೆನ್ಸ್ ಮುಂದೆಯೇ ಮಗ ಠಿಕಾಣಿ ಹೂಡಿದ ಧೃಶ್ಯ ಮನಕಲಕುವಂತಿದೆ. ಹೀಗಾಗಿ ರಾಜ್ಯದಲ್ಲಿ ಶುರುವಾಗಿರುವ ಕೊರೋನಾ 2ನೇ ಅಲೆ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದು ಜನರು ಎಚ್ಚೆತ್ತುಕೊಳ್ಳಬೇಕಿದೆ.
Key words: Mysore- KR Hospital – again -No Beds-board