ಮೈಸೂರು,ಅಕ್ಟೋಬರ್,8,2020(www.justkannada.in): ಚಾಕು ತೋರಿಸಿ ಲಾರಿ ಚಾಲಕನ ಬಳಿ ಹಣ ಮತ್ತು ಮೊಬೈಲ್ ದೋಚಿದ್ದ ಆರೋಪಿಗಳನ್ನ ಮೈಸೂರು ಜಿಲ್ಲೆ ಕೆ. ಆರ್. ನಗರ ಠಾಣಾ ಪೊಲೀಸರು ಮಿಂಚಿನ ಕಾರ್ಯಾಚರಣೆ ಬಂಧಿಸಿದ್ದಾರೆ.
ಕೆ. ಆರ್. ನಗರದ ಶರತ್ ಮತ್ತು ಬೋಳನಹಳ್ಳಿ ಗ್ರಾಮದ ವಾಸು ಬಂಧಿತ ಆರೋಪಿಗಳು. ಮೈಸೂರಿನಿಂದ ಹಾಸನಕ್ಕೆ ಹತ್ತಿ ತುಂಬಿಕೊಂಡು ಲಾರಿ ಹೋಗುತ್ತಿತ್ತು. ಈ ನಡುವೆ ದಾರಿ ಮಧ್ಯೆದಲ್ಲಿ ಹೆಡ್ ಲೈಟ್ ಶಾರ್ಟ್ ಆದ ಕಾರಣ ಚಾಲಕ ರಂಜಿತ್ ಲಾರಿಯನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿಕೊಂಡಿದ್ದರು.
ಆ ಸಮಯದಲ್ಲಿ ಆರೋಪಿಗಳಿಬ್ಬರು ಲಾರಿ ಚಾಲಕನಿಗೆ ಚಾಕು ತೋರಿಸಿ ಚಾಲಕನಿಂದ 30 ಸಾವಿರ ನಗದು ಹಾಗೂ 19 ಸಾವಿರ ಬೆಲೆಬಾಳುವ ಮೊಬೈಲ್ ದೋಚಿ ಪರಾರಿಯಾಗಿದ್ದರು. ಈ ಕುರಿತು ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ನಡೆದು 24 ಗಂಟೆಯೊಳಗೆ ಕೆ.ಆರ್ ನಗರ ಠಾಣಾ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಪಿಐ ರಾಜು, ಪಿಎಸ್ಐ ಚೇತನ್ ಸೇರಿದಂತೆ ಸಿಬ್ಬಂದಿ ಭಾಗಿಯಾಗಿದ್ದರು.
Key words: mysore- KR Nagar-robbery-lorry driver-arrest