ನಾಳೆ KSOU ಕೆಸೆಟ್ ತರಬೇತಿ ಸಮಾರೋಪ : ಆನ್ ಲೈನ್ ನಲ್ಲಿಯೇ ಸಮಾರೋಪ ಭಾಷಣ ಮಾಡಲಿರುವ ಡಿಸಿಎಂ ಡಾ.ಅಶ್ವಥ್ ನಾರಾಯಣ್.

 

ಮೈಸೂರು, ಮೇ 27, 2020 :(www.justkannada.in news ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆಯೋಜಿಸಿರುವ ಕೆಸೆಟ್ ಪ್ರವೇಶ ಪರೀಕ್ಷೆ ಗಳ ಆನ್ ಲೈನ್ ತರಬೇತಿ ಸಮಾರೋಪ ಮೇ 28ರ ಗುರುವಾರ ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ.

ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಆನ್ ಲೈನ್ ನಲ್ಲಿಯೇ ಸಮಾರೋಪ ಭಾಷಣ ಮಾಡಿ ಪರೀಕ್ಷಾರ್ಥಿಗಳಿಗಾಗಿ ವಿಶ್ವವಿದ್ಯಾಲಯ ಹೊರ ತಂದಿರುವ ಪಠ್ಯವನ್ನು ಬಿಡುಗಡೆಗೊಳಿಸುವರು.

ಕರಾಮುವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಪಾಲ್ಗೊಳ್ಳುವರು ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.

mysore-KSET-online-valedictory-function-dcm

ಕೇಂದ್ರ 2011ರಲ್ಲಿ ಆರಂಭಗೊಂಡಿದ್ದು ಕುಲಪತಿಗಳ ವಿಶೇಷ ಆಸಕ್ತಿ ಫಲವಾಗಿ ತರಬೇತಿಗಳ ನಿರಂತರ ಆಯೋಜನೆಯಾಗುತ್ತಿದೆ.
ಯುಪಿಎಸ್ಸಿ, ಕೆಪಿಎಸ್ಸಿ, ಕೆಸೆಟ್, ಯುಜಿಸಿ ನೆಟ್, ಪಿಎಸ್ ಐ, ಪಿಡಿಒ, ಬ್ಯಾಂಕಿಂಗ್, ಶಿಕ್ಷಕರ ಆಯ್ಕೆ ಸಹಿತ ಹತ್ತಾರು ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ನಡೆಯುತ್ತಿವೆ. ಈವರೆಗೂ ವಿವಿಧ ಕೋರ್ಸ್ ಗಳ ನೂರಕ್ಕೂ ಹೆಚ್ಚು ತರಬೇತಿ ಆಯೋಜನೆ, ಸಹಸ್ರಾರು ವಿದ್ಯಾರ್ಥಿಗಳಿಗೆ ಲಾಭವಾಗಿದೆ.

ಕೆಸೆಟ್ ತರಬೇತಿ ಹಾಗೂ ಸಮಾರೋಪದಲ್ಲಿ ಪಾಲ್ಲೊಳ್ಳುವವರು ಈ ಲಿಂಕ್ ಮೂಲಕ ಪಾಲ್ಗೊಳ್ಳಬಹುದು….

Username: coachingclass@ksoumysuru.ac.in

Password:ksoucoaching123

https://onlineclass.ksoumysuru.ac.in/b

 

key words : mysore-KSET-online-valedictory-function-dcm-dr,ashwath.narayan-KSOU