ಮೈಸೂರು,ಡಿಸೆಂಬರ್,20,2021(www.justkannada.in): ಕರಾಮುವಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆಯಿದ್ದು, ಕೆಲ ದಾಖಲೆಗಳನ್ನು ಕೇಳಲು ಹೋದ ನನಗೆ ಕುಲಪತಿ ವಿದ್ಯಾಶಂಕರ್ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವರುಣಾ ಮಹೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಮಧ್ಯೆ ಕರಾಮುವಿಯ ಅಧಿಕಾರಿಗಳೂ ಸಹ ವರುಣಾ ಮಹೇಶ್ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ದೂರು ನೀಡಿರುವ ವರುಣಾ ಮಹೇಶ್, ಮುಕ್ತ ವಿವಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ನಡೆದಿದ್ದು, ಈ ಸಂಬಂಧ ಡಿ.16ರಂದು ನಾನು ಕುಲಪತಿಗಳನ್ನು ಭೇಟಿ ಮಾಡಿ ಮಾಹಿತಿ ನೀಡುವಂತೆ ಕೋರಿದ್ದೆ. ಆದರೆ, ಅವರು ನನ್ನನ್ನು ಅಲ್ಲಿ ಕೂರಲೂ ಬಿಡದೆ ಎದ್ದು ಹೋಗುವಂತೆ ಹೇಳಿದ್ದಲ್ಲದೆ, ನಿನ್ನನ್ನು ಏನು ಮಾಡಬೇಕು ಗೊತ್ತು ಎಂದು ಧಮ ಹಾಕಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಂತರ ಡಿ.17ರಂದು ನಾನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ದಾಖಲೆಗಳನ್ನು ಕೇಳಿ ಅರ್ಜಿ ಸಲ್ಲಿಸಿದ್ದೆ. ಅದನ್ನು ತಿಳಿದ ಅವರು ಅನ್ಯರೊಡನೆ ಸೇರಿ ಅವರ ಮೂಲಕ ನನಗೆ ಬೆದರಿಕೆ ಹಾಕಿಸುತ್ತಿದ್ದಾರೆ. ಹೀಗಾಗಿ ಕುಲಪತಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ನನಗೆ ರಕ್ಷಣೆ ನೀಡಬೇಕು ಎಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ನಡುವೆ ಮುಕ್ತ ವಿವಿ ಕುಲ ಸಚಿವ ಆರ್.ರಾಜಣ್ಣ ಅವರೂ ವರುಣಾ ಮಹೇಶ್ ಮೇಲೆ ಪ್ರತಿ ದೂರು ಸಲ್ಲಿಸಿದ್ದಾರೆ, ವರುಣಾ ಮಹೇಶ್ ಅವರು ಯಾವುದೇ ಪೂರ್ವಾನುಮತಿ ಇಲ್ಲದೆ ಕುಲಪತಿ ಕಚೇರಿಗೆ ನುಗ್ಗಿ ಅವರನ್ನು ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆ ಒಡ್ಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.
Key words: Mysore-KSOU- Corruption-Complaint – murder threat
ENGLISH SUMMARY..
Attempt to kill charges against KSOU VC
Mysuru, December 20, 2021 (www.justkannada.in): Congress leader Varuna Mahesh has registered a complaint in the police station against Karnataka State Open University (KSOU) Vice-Chancellor Vidyashankar, alleging that the latter threatened to kill him when he approached Vidyashankar to provide him relevant documents relating to the suspected corruption charges.
However, a few officials of the KSOU have also given a counter-complaint against Varuna Mahesh. Varuna Mahesh in his complaint has alleged that a lot of corruption is going in KSOU. “On December 16, I approached the KSOU VC to get some documents. But he behaved rudely and asked me to get out. He also threatened of dire consequences.”
He informed that again on December 17, he submitted an application under the RTI asking to provide him a few documents. As soon as he got to know about it, Vidyashankar through some others started threatening him. Hence he lodged a complaint at the Jayalakshmipuram Police Station requesting police protection and initiating action against the KSOU VC.
In the meantime, KSOU Registrar R. Rajanna has also lodged a counter-complaint against Varuna Mahesh in the police station. In his complaint, Rajanna has stated that Varuna Mahesh budged into the KSOU Vice Chancellor’s office without permission and not only shouted and used unparliamentary words against the VC but also threatened to kill him and has requested to initiate legal action against him.
Keywords: KSOU/ VC/ Registrar/ Congress leader Varuna Mahesh/ police complaint/ charges