ಮೈಸೂರು,ಆ,15,2019(www.justkannada.in): ರಾಜ್ಯದಲ್ಲಿ ಮಹಾಮಳೆ ಸುರಿದ ಹಿನ್ನೆಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ.
ಇದೇ ತಿಂಗಳು 19 ರಿಂದ ಪ್ರಾರಂಭವಾಗಬೇಕಿದ್ದ ಬಿ.ಎ ಮತ್ತು ಬಿ.ಕಾಮ್ ಪರೀಕ್ಷೆಗಳನ್ನ 10 ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದ್ದು, ಆಗಸ್ಟ್ 29 ರಂದ ಪರೀಕ್ಷೆ ನಡೆಸಲು ತೀರ್ಮಾನ. ಮಾಡಲಾಗಿದೆ. ಈ ಕುರಿತು ಕ.ರಾ.ಮು.ವಿವಿ ಪರೀಕ್ಷಾಂಗ ಕುಲಸಚಿವ ಪ್ರೋ.ಎ.ರಂಗಸ್ವಾಮಿ ಪತ್ರ ಹೊರಡಿಸಿದ್ದಾರೆ. ಆಗಸ್ಟ್ 29ರಿಂದ ಮಧ್ಯಾಹ್ನ 2 ಗಂಟೆಯ ನಂತರ ಪರೀಕ್ಷೆಗಳು ಪ್ರಾರಂಭವಾಗಲಿವೆ.
ರಾಜ್ಯದಲ್ಲಿ ಉಂಟಾದ ಮಹಾ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಹಾ ಮಳೆಯಿಂದಾಗಿ ರಾಜ್ಯದ ಸುಮಾರು 17 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ. ಮಳೆಯಿಂದಾಗಿ ರಾಜ್ಯದಲ್ಲಿ ಅನೇಕ ಭಾಗಗಳಲ್ಲಿ ಸಾಕಷ್ಟು ತೊಂದರೆಯಾಗಿದೆ. ಮಳೆಯ ಕಾರಣ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಂಭವವಿದ್ದು, ಹೀಗಾಗಿ ಕೆಎಸ್ ಒಯು ಈ ನಿರ್ಧಾರ ಕೈಗೊಂಡಿದೆ.
Key words: mysore-KSOU –exam-postponed.