ಮೈಸೂರು, ಜ.31, 2022 : (www.justkannada.in news) : ದೆಹಲಿಯ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯು.ಜಿ.ಸಿ) ವತಿಯಿಂದ ನಡೆಸಲಾದ 2018 – 19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಆಧಾರದ ಮೇಲೆ ಮೌಲ್ಯ ಮಾಪನ ವರದಿ (23-1-2022) ಪ್ರಕಟಿಸಿದ್ದು, ಈ ಸಮೀಕ್ಷೆಯಲ್ಲಿ ಒಟ್ಟು 400 ಅಂಕಗಳಿಗೆ 300 ಅಂಕ ನೀಡಿ ಕರಾಮುವಿಗೆ ಉತ್ತಮಶೇಣಿ ನೀಡಿರುತ್ತದೆ. ಇದು ಹೆಮ್ಮೆಯ ಸಂಗತಿ, ಇದರಿಂದಾಗಿ ವಿವಿಯ ಗೌರವ ಹೆಚ್ಚಾಯಿತು. ಈ ಗೌರವಕ್ಕೆ ಮತ್ತು ಮರುಮಾನ್ಯತೆ ಪಡೆಯಲು ನನ್ನ ಜೊತೆ ಸಹಕರಿಸಿದ ಮತ್ತು ಸಹಾಯ ಮಾಡಿದ ಎಲ್ಲರಿಗೂ ವಿಶ್ರಾಂತ ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ.
ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಪ್ರೊ.ಶಿವಲಿಂಗಯ್ಯ ಅವರು ಹೇಳಿದಿಷ್ಟು…
ನಾನು ದಿನಾಂಕ 11-03-2016 ರಂದು ಕರಾಮುವಿಯ 7ನೇ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದೆ, ನಾನು ನಿರ್ಗಮಿಸುವ ಸಮಯದಲ್ಲಿ ವಿಶ್ವವಿದ್ಯಾನಿಲಯಕ್ಕೆ 24 ವರ್ಷತುಂಬಿತ್ತು. ಈ ಹಿಂದೆಮಂಗಳೂರುವಿ.ವಿ. ಯಲ್ಲಿ ಡಾಕುಮೆಂಟೇಷನ್ ಆಫೀಸರ್, ರೀಡರ್, ಪ್ರೊಫೆಸರ್, ಡಿಪ್ಯೂಟಿ ರಿಜಿಸ್ಟ್ರಾರ್, ಸ್ಪೆಷಲ್ ಆಫೀಸರ್, ಪರೀಕ್ಷಾಂಗ ಕುಲಸಚಿವ ಹಾಗೂ ತುಮಕೂರು ವಿವಿಯಲ್ಲಿ ಆರುವರೆ ವರ್ಷ ಕುಲಸಚಿವನಾಗಿ ಕಾರ್ಯನಿರ್ವಹಿಸಿರುತ್ತೇನೆ. ಇಲ್ಲಿ ಪಡೆದ ಅನುಭವ ಕರಾಮುವಿಯಲ್ಲಿ ಕರ್ತವ್ಯ ನಿರ್ವಹಿಸಲು ಸಹಾಯವಾಯಿತು. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾನಿಲಯದ ಎಲ್ಲಾ ಸಿಬ್ಬಂಧಿಗಳ, ಅಧಿಕಾರಿಗಳ, ಮತ್ತು ಇತರರ ಸಹಕಾರ ಮತ್ತು ಸಹಾಯದಿಂದ ಹಲವಾರು ಸುದಾರಣೆಗಳನ್ನು ಮತ್ತು ಉತ್ತಮ ಕೆಲಸಗಳನ್ನು ನಿರ್ವಹಿಸಿರುತ್ತೇನೆ.
ಕುಲಪತಿಯಾಗಿ ಕರ್ತವ್ಯ ನಿರ್ವಹಿಸಿದ ಮೊದಲ ಎರಡು ವರ್ಷ ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗದ ಜೊತೆ ಸಂಪರ್ಕಿಸಿ ಮರು ಮಾನ್ಯತೆ ಪಡೆಯುವುದರಲ್ಲೆ ಕಳೆಯಿತು. ನಂತರ ಸಿಕ್ಕದ್ದು ಒಂದು ವರ್ಷ ಮಾತ್ರ (2018-19 ಶೈಕ್ಷಣಿಕ ವರ್ಷ). ಈ ಸಂದರ್ಭದಲ್ಲಿ ಮೂರು ವರ್ಷ ಪ್ರವೇಶಾತಿ ಕಾರ್ಯ ಸ್ಥಗಿತಗೊಂಡಿತ್ತು.
ಯು.ಜಿ.ಸಿ ನಿಯಮ 2017ರ ಪ್ರಕಾರ ಒಂದು ವಿಷಯದಲ್ಲಿ ಒಬ್ಬರು ಸಹಪ್ರಾಧ್ಯಾಪಕರು ಹಾಗೂ ಇಬ್ಬರು ಸಹಾಯಕ ಪ್ರಾಧ್ಯಾಪಕರಿರುವುದು ಕಡ್ಡಾಯವಾಗಿತ್ತು, ಇದಕ್ಕಾಗಿ 23 ಸಹಪ್ರಾಧ್ಯಾಪಕ, 7 ಪ್ರಾಧ್ಯಾಪಕರುಗಳನ್ನು ಸರ್ಕಾರಿ ಆದೇಶ ಸಂಖ್ಯೆ ಇಡಿ 43, 2017 ದಿನಾಂಕ 7-12-2017 ರಲ್ಲಿ ಅನುಮೋದನೆ ಪಡೆದು ಹುದ್ದೆಗಳನ್ನು ಸೃಜಿಸಿ ಇದರ ಮಾಹಿತಿಯನ್ನು ಯು.ಜಿ.ಸಿ.ಗೆ ನೀಡಿರುತ್ತೇವೆ. ಹಾಗೂ ಸಾವಿರಾರು ಪುಟಗಳ ದಾಖಲೆ ನೀಡಿ, ಸುಮಾರು 25 ಬಾರಿ ದೆಹಲಿಗೆ ಬೇಟಿನೀಡಿ 33 ಕೋರ್ಸ್ಗಳಿಗೆ ಮರುಮಾನ್ಯತೆ ಪಡೆಯಲಾಯಿತು.
ಆರ್ಥಿಕ ಮಿತವ್ಯಯ ಜಾರಿಗೊಳಿಸಿರುವ ಬಗ್ಗೆ:
ಕರಾಮುವಿಯಲ್ಲಿ ಆರ್ಥಿಕ ಮಿತವ್ಯಯ ಆದೇಶ ಜಾರಿಗೊಳಿಸಿದ್ದು. ಪ್ರತಿಯೊಂದು ಖರ್ಚನ್ನು ಮಿತಿಗೊಳಿಸಲು ಕ್ರಮಕೈಗೊಂಡಿದ್ದೆ. ಅಲ್ಲದೆ ನಾನು ಕುಲಪತಿಯಾಗಿದ್ದ ಅವದಿಯಲ್ಲಿ ಸ್ವಂತ ಬಾಡಿಗೆ ಮನೆ ಮಾಡಿಕೊಂಡಿದ್ದು ವಿ.ವಿಯಿಂದ ಬಾಡಿಗೆ ಹಣ ನೀಡಿರುವುದಿಲ್ಲ.
* ಆದಾಯ ತೆರಿಗೆ 12 ಎ ರಿಜಿಸ್ಟ್ರೇಷನ್ ಪಡೆದಿರುವ ಬಗ್ಗೆ :
ಇದರ ಬಗ್ಗೆ ಕಾನೂನು ಅಭಿಪ್ರಾಯ ಪಡೆದು ಚಾರ್ಟೆಡ್ ಅಕೌಂಟ್ ತಂಡದಿಂದ 1996 ರಿಂದ 2017 ರವರೆಗೆ 21 ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಡಿಪ್ರೊಸಿಯೇಷನ್ ವ್ಯಾಲೂ ಮಾಡಿಸಿ 12 ಎ ರಿಕಗ್ನಿಷನ್ ಗೆ ಅರ್ಜಿ ಸಲ್ಲಿಸಿ ತೆಗೆದು ಕೊಳ್ಳಲಾಯಿತು. ಇದರಿಂದಾಗಿ ವಿವಿಗೆ ಕೊಟ್ಯಾಂತರ ರೂ. ಹಣ ಉಳಿತಾಯವಾಯಿತು.
ii. ಜಿಎಸ್ಟಿ ಪಾವತಿಸಿರುವ ಬಗ್ಗೆ
ಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2012-13 ರಿಂದ 2014-15ನೇ ಸಾಲುಗಳಲ್ಲಿ ರಾಜ್ಯಾದ್ಯಂತ ಹಾಗೂ ರಾಜ್ಯದ ಹೊರಗಿನಶೈಕ್ಷಣಿಕ ಪಾಲುದಾರಿಕೆ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡು ಅವುಗಳ ಮೂಲಕ (ಕರಾಮುವಿಗೆ ಶೆ 25% ಹಾಗೂ ಕೊಲಾಬ್ರೇಷನ್ ಸಂಸ್ಥೆಗಳಿಗೆ ಶೆ 75%) ರ ಶುಲ್ಕ ಪಡೆದಿದ್ದು ಅವುಗಳನ್ನು ಕಮರ್ಷಿಯಲ್ ಕೋಚಿಂಗ್ ಎಂದು ಪರಿಗಣಿಸಿ ಈ ಸಂಸ್ಥೆಗಳ ಮೂಲಕ ಸ್ವೀಕೃತಿಯಾದ ವಿಶ್ವವಿದ್ಯಾನಿಲಯದ ಶೇ 25% ಮೊತ್ತ 2012-13 ರಿಂದ 2014-15 ಸಾಲುಗಳ ಒಟ್ಟು ಮೊತ್ತದ ಟ್ಯಾಕ್ಸೆಬಲ್ ವ್ಯಾಲೂ ರೂ. 302,05,45,868.00 (ಮುನ್ನೂರ ಎರಡು ಕೋಟಿ ಐದು ಲಕ್ಷ ನಲ್ವತೈದು ಸಾವಿರದ ಎಂಟು ನೂರು ಅರವತ್ತೆಂಟು) ಗಳಿಗೆ ಸೇವಾತೆರಿಗೆ ರೂ 37,51,87,730.00 ಹಾಗೂ ಶೇ 100% ರಂತೆ ದಂಡ ಶುಲ್ಕ ಒಟ್ಟು ರೂ. 75,03,35,460.00 + ಬಡ್ಡಿ ಪಾವತಿಸುವಂತೆ ಮೈಸೂರಿನ ಜಿಎಸ್ಟಿ ಕಮಿಷನ್ರೇಟ್ ಇವರು 23.03.2018ರಲ್ಲಿ ಆದೇಶ ಹೊರಡಿಸಿದ್ದರು. ಸದರಿ ಆದೇಶವನ್ನು ಪ್ರಶ್ನಿಸಿ ಟ್ರಿಬ್ಯೂನಲ್ ಗೆ ಮೇಲ್ಮಮನವಿ ಸಲ್ಲಿಸಲಾಗಿತ್ತು.
ನಂತರದಲ್ಲಿ, ಕೇಂದ್ರ ಸರ್ಕಾರ ಹೊರತಂದ ಸ್ಕೀಮ್ ಪ್ರಯೋಜನ ಪಡೆದು, ರೂ. 75,03,35,460.00 + ಬಡ್ಡಿ ಮೊತ್ತದ ಪೈಕಿ ರೂ. 18,75,83,865-00 ಮಾತ್ರ ಪಾವತಿಸಲಾಯಿತು. ವಿಶ್ವವಿದ್ಯಾನಿಲಯಕ್ಕೆ ರೂ.56,27,51,595 ಗಳ ನಿವ್ವಳ ಉಳಿತಾಯವಾಗಿದೆ.
key words : mysore-KSOU-recognition-thanks