ಮೈಸೂರು, ಸೆ.29, 2021 : (www.justkannada.in news) : ಮೈಸೂರಿನಲ್ಲಿ ಸರಕಾರಿ ಜಮೀನು ಒತ್ತುವರಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ಸರ್ವೆ ಕಾರ್ಯ ನಡೆಸಿ ವರದಿ ನೀಡಿಲ್ಲ ಎಂದು ಆರೋಪಿಸಿ, ಕೋರ್ಟ್ ಮೊರೆ ಹೋಗಲು ಸಾಮಾಜಿಕ ಕಾರ್ಯಕರ್ತ ಗಂಗರಾಜು ಮುಂದಾಗಿದ್ದಾರೆ.
ಈ ಸಂಬಂಧ ಮಾಧ್ಯಮದ ಜತೆ ಮಾತನಾಡಿದ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು ಹೇಳಿದಿಷ್ಟು…
ಮೈಸೂರಿನಲ್ಲಿ ಸರಕಾರಿ ಜಮೀನು ಒತ್ತುವರಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೆ ಆಯುಕ್ತರು ರಚಿಸಿದ್ದ ತಂಡವನ್ನು ರದ್ದು ಮಾಡಿದ್ದ ಸರ್ಕಾರ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಸರ್ವೆ ಕಾರ್ಯ ನಡೆಸಿ ವರದಿ ನೀಡಲು ಸೂಚಿಸಲಾಗಿತ್ತು.
ಭೂ ಸರ್ವೆಗೆ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಸರ್ವೆ ಮಾಡಿ ಮೂರು ವಾರದಲಿ ವರದಿ ಸಲ್ಲಿಸುವಂತೆ ಸರ್ಕಾರ.ಆದೇಶಿಸಿತ್ತು. ಆದರೆ ಮೂರು ವಾರ ಕಳೆದರೂ ಇನ್ನೂ ವರದಿ ನೀಡಲ್ಲದಿರುವುದು ಅನುಮಾನಕ್ಕೆ ಎಡೆಮಾಡಿದೆ.
ಸರ್ಕಾರ ಹಾಗೂ ಅಧಿಕಾರಿಗಳ ಬಗ್ಗೆ ವಿಶ್ವಾಸ ಇಲ್ಲವೆಂದು ನ್ಯಾಯಲದ ಮೊರೆ ಹೋಗಲು ನಿರ್ಧಾರ. ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸುವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನ ಪಾರ್ಟಿ ಮಾಡುತ್ತೇನೆ. ಎಲ್ಲರೂ ನ್ಯಾಯಾಲದ ಕಟೆಕಟೆಯಲ್ಲಿ ನಿಲ್ಲ ಬೇಕಾಗುತ್ತದೆ. ಕಾಲಹರಣ ಮಾಡಿ ಈ ಹಗರಣವನ್ನು ಮುಚ್ಚುಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ನ್ಯಾಯ ಕೇಳಲು ಹೋದ ನನಗೆ ಬೆದರಿಕೆ ಹಾಕಿದ್ದಾರೆ. ರಕ್ಷಣೆ ಕೂಡಿ ಎಂದರು ರಕ್ಷಣೆ ಕೊಡುತ್ತಿಲ್ಲ.
ಪಾಲಿಕೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಭೂಗಳ್ಳರ ವಿರುದ್ಧ ತನಿಖೆಗೆ ಮುಂದಾಗುತ್ತಿಲ್ಲ. ಸರ್ಕಾರ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಉಚ್ಚನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುತ್ತೇನೆ. ಆರ್ ಟಿ ಐ ಕಾರ್ಯಕರ್ತ ಗಂಗರಾಜು ಹೇಳಿಕೆ.
ಮೈಸೂರಿನಲ್ಲಿ ಭೂ ಮಾಫಿಯಾ ವಿಚಾರ: ಇಂದು ಅಥವಾ ನಾಳೆ ಸರ್ಕಾರಕ್ಕೆ ವರದಿ
ಮೈಸೂರಿನಲ್ಲಿ ಭೂ ಮಾಫಿಯಾ ವಿಚಾರ ಸಂಬಂಧ ಭೂ ಸರ್ವೆಗೆ ಸರ್ಕಾರ ಮೂರು ವಾರಗಳ ಗಡುವು ನೀಡಿತ್ತು. ಇಂದು ಅಥವಾ ನಾಳೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ತಿಳಿಸಿದ್ದಾರೆ.
ಸರ್ಕಾರ ಭೂ ಸರ್ವೆಗೆ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿದ್ದು, ಮೂರು ವಾರದಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು.
key words : mysore-land-enchrochment-survey-department-dc-enquiry-delayes-court-prive-complaint-RTI-activist-gangaraju
ENGLISH SUMMARY…
Land mafia in Mysuru: RTI activist Gangaraju to appeal in Court
Mysuru, September 29, 2021 (www.justkannada.in): Social activist Gangaraju has informed that he would appeal in court against the encroachment of government land in Mysuru, claiming that a survey has not been conducted under the leadership of the Deputy Commissioner and a report has not been submitted.
Speaking to the press persons today he informed that the government has canceled the team formed by the Survey Commissioner with respect to the encroachment of government land case in Mysuru and instructions were given to form a team under the leadership of the Deputy Commissioner and undertake survey and submit a report.
The government had issued orders to complete the survey works within three weeks and submit a report. But as the report has not been submitted it has made way for suspicion.
He said that the people have lost confidence in the government and officials concerned in this case and hence he has decided to appeal in court on behalf of the people. “I will lodge a complaint individually in the court in this case and make the elected representatives and officers as parties. All of them have to come to court. All of them are trying to conceal this scam. When I attempted to seek justice I was also threatened. The police are refusing to provide me protection,” he added.
He alleged that the government and officials concerned are not coming forward to investigate in this case as they have made a nexus with the land mafia people. We can’t believe the government officials. Hence, I have decided to appeal in the High Court, he mentioned.
Mysuru District Deputy Commissioner Bagadi Goutham has informed that the report with respect to the land survey would be submitted to the government within one or two days.
Keywords: Mysuru/ Land mafia case/ RTI activist Gangaraju/ land survey/ report/ appeal in high court