ಮೈಸೂರು, ಜೂ.11, 2021 : (www.justkannada.in news ) ಮೈಸೂರಿನಲ್ಲಿ ನಡೆದಿರುವ ಭೂ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆದಿದೆ. ಆದ್ದರಿಂದ ಭೂ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಒತ್ತಾಯಿಸಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದಿಷ್ಟು…
ಪ್ರಾದೇಶಿಕ ಆಯುಕ್ತರು ಹಾಗೂ ಕಳಂಕಿತರ ನಡುವೆ ಒಪ್ಪಂದ ಆಗಿದೆ. ನಿನ್ನೆ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಹೈಡ್ರಾಮ ನಡೆದಿದೆ. ಶಾಸಕರು ಹೋಗಿ ಪ್ರತಿಭಟನೆ ಮಾಡಿದ ಹಾಗೆ, ಪ್ರಾದೇಶಿಕ ಆಯುಕ್ತರು ಬಂದು ಮನವಿ ಸ್ವೀಕರಿಸದ ಹಾಗೆ. ಮನವಿ ಸ್ವೀಕರಿಸಿ ಮೂರು ದಿನಗಳಲ್ಲಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇಲ್ಲಿ ಪ್ರಾದೇಶಿಕ ಆಯುಕ್ತರ ನಡೆ ಅನುಮಾನ ಮೂಡಿಸುತ್ತಿದೆ. ಕಳಂಕಿತರನ್ನು ಬಚಾವು ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಇಂಥ ಸಂದರ್ಭಗಳಲ್ಲಿ ಪ್ರಾದೇಶಿಕ ಆಯುಕ್ತರು ಮನವಿ ಸ್ವೀಕರಿಸಿ ಪರಿಶೀಲನೆ ನಡೆಸುತ್ತೇನೆ ಎನ್ನಬೇಕು. ಆದರೆ ವಿಪರ್ಯಾಸವೆಂದರೆ, ಸ್ಥಳದಲ್ಲೇ ಸಮಿತಿ ರಚನೆ ಮಾಡಿ ಮೂರು ದಿನಗಳಲ್ಲಿ ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ. ಪ್ರಾದೇಶಿಕ ಆಯುಕ್ತರು ಈಗಾಗಲೇ ವರದಿ ರೆಡಿ ಮಾಡಿಕೊಂಡಿದ್ದಾರೆ. ಸೋಮವಾರ ವರದಿಯನ್ನು ಕೂಡಾ ಸಲ್ಲಿಸಲಿದ್ದಾರೆ. ಪ್ರಾದೇಶಿಕ ಆಯುಕ್ತರ ಕಾರ್ಯವೈಖರಿ ನೋಡಿ ಜನ ಬೆರಗಾಗಿದ್ದಾರೆ. ನಿನ್ನೆಯ ಪ್ರತಿಭಟನೆ ಸಂಪೂರ್ಣ ಹೈಡ್ರಾಮ. ಒಬ್ಬರಿಗೊಬ್ಬರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿಕೆ.
ಉಳಿದ ಪ್ರಕರಣಗಳು ತನಿಖೆಯಾಗಬೇಕು :
ಸದ್ಯ, ಸಾ.ರಾ.ಚೌಲ್ಟ್ರಿ ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣವಾಗಿರುವ ವಿಚಾರದ ಬಗ್ಗೆ ಮಾತ್ರ ಮಾತನಾಡಲಾಗುತ್ತಿದೆ. ಆದರೆ, ಇನ್ನುಳಿದ ನಾಲ್ಕು ಪ್ರಕರಣಗಳ ಕಥೆ ಏನು ? ಎಂದು ವಿಶ್ವನಾಥ್ ಪ್ರಶ್ನಿಸಿದರು.
ಪ್ರಾದೇಶಿಕ ಆಯುಕ್ತರು ಸಾ.ರಾ.ಚೌಲ್ಟ್ರಿಯಲ್ಲಿ ರಾಜಕಾಲುವೆ ಒತ್ತುವರಿ ಆಗಿಲ್ಲ ಅಂತ ವರದಿ ಕೊಡ್ತಾರೆ. ಚೌಲ್ಟ್ರಿ ಎಷ್ಟು ಎಕರೆಯಲ್ಲಿ ನಿರ್ಮಾಣ ಆಗಿದೆ. ನಿಮಗೆ ಎಷ್ಟು ಎಕರೆ ಜಾಗ ಮಂಜೂರಾಗಿದೆ. ಸರ್ವೆ ನಂ98 ರಲ್ಲಿ ಮೂಡಾ ಜಾಗ ಒತ್ತುವರಿ ಆಗಿದೆಯಾ. ರಾಜಾ ಕಾಲುವೆ ಒತ್ತುವರಿ ಆಗಿದೆಯಾ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಇನ್ನುಳಿದ ನಾಲ್ಕು ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹಿಂದಿನ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ನೀಡಿದ್ದ ನಾಲ್ಕು ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು. ಆರ್.ಟಿ.ನಗರ, ಲಿಂಗಾಂಬುದಿ ಕೆರೆ ಜಾಗಗಳ ಬಗ್ಗೆಯೂ ತನಿಖೆ ಆಗಬೇಕು. ಎಲ್ಲ ನಾಲ್ಕು ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು. ಸುದ್ದಿಗೋಷ್ಠಿಯಲ್ಲಿ ಎಚ್. ವಿಶ್ವನಾಥ್ ಆಗ್ರಹ.
key words : mysore-land-mafia-vishwanath-regional-commissioner-enquiry-drama