ಮೈಸೂರು,ಜು,17,2020(www.justkannada.in): ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಓಡಾಡುತ್ತಿರುವ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರು, ಭಿಕ್ಷುಕರು ಹಾಗೂ ಅಶಕ್ತರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಎಂದು ಮೈಸೂರು ಜಿಲ್ಲಾಧಿಕಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಸಂಶೋಧನೆ ಹಾಗೂ ಅಧ್ಯಯನ ಸಂಸ್ಥೆ ಅಧ್ಯಕ್ಷ ಹಾಗೂ ಹಿರಿಯ ವಕೀಲ ಅ.ಮ ಭಾಸ್ಕರ್ ಮನವಿ ಮಾಡಿದ್ದಾರೆ.
ಈ ಕುರಿತು ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಹಿರಿಯ ವಕೀಲ ಅ.ಮ ಭಾಸ್ಕರ್, ಈ ಮೂಲಕ ತಮ್ಮಲ್ಲಿ ಕೋರಿ ಕೊಳ್ಳುವುದೇನೆಂದರೆ ಕೋವಿಡ್ 19 ಪ್ರಾರಂಭದ ಸಮಯದಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಇದ್ದಂತಹ ಭಿಕ್ಷುಕರು ಆಸಕ್ತರು ಹಾಗೂ ನಿರಾಶ್ರಿತರಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಶೀಘ್ರವಾಗಿ ಸ್ಪಂದಿಸಿ ಅವರಿಗೆ ನೆರವನ್ನು ನೀಡಿದ್ದು ಸರಿಯಷ್ಟೇ, ಪ್ರಾರಂಭದಲ್ಲಿ ಸಾರ್ವಜನಿಕರು ಸಹ ನಿರಾಶ್ರಿತರ ನೆರವಿಗೆ ಧಾವಿಸಿ ಆಹಾರ ವಿತರಣೆಯನ್ನು ಮಾಡಿರುವುದು ತಮ್ಮ ಗಮನಕ್ಕೆ ಇರುತ್ತದೆ. ಆದರೆ ಇತ್ತೀಚಿಗೆ ನಿರಾಶ್ರಿತರು, ಬಿಕ್ಷುಕರು ಹಾಗೂ ಅಶಕ್ತರ ನೆರವಿಗೆ ಸಾರ್ವಜನಿಕ ಅಂಗಸಂಸ್ಥೆಗಳು ಹೆಚ್ಚಾಗಿ ನೆರವು ನೀಡುತ್ತಿಲ್ಲ . ಹಾಗೂ ಅವರುಗಳಿಗೆ ಎಲ್ಲೂ ಸಹ ಕೆಲಸ ಮಾಡಲು ಕೆಲಸವು ಸಿಗುತ್ತಿಲ್ಲ. ಇದರಿಂದ ಅವರುಗಳು ಸಾರ್ವಜನಿಕವಾಗಿ ರೈಲು ನಿಲ್ದಾಣ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವುದು ಅತಿಹೆಚ್ಚಾಗಿ ಕಂಡು ಬಂದಿದೆ.
ಕರ್ನಾಟಕ ಪ್ರಾಹಿಬಿಷನ್ ಆಫ್ ಬೆಗ್ಗರಿ ಆಕ್ಟ್ 1975 ಸೆಕ್ಷನ್ 3 ರ ಅಡಿಯಲ್ಲಿ ಸಾರ್ವಜನಿಕವಾಗಿ ಭಿಕ್ಷೆ ಬೇಡುವುದು ನಿರ್ಬಂಧ ವಾಗಿರುತ್ತದೆ. ಈಗಾಗಲೇ ಸಂಬಂಧಪಟ್ಟ ಪ್ರಾಧಿಕಾರಗಳು ಭಿಕ್ಷಾಟನೆ ನಿರ್ಮೂಲನೆಗಾಗಿ ಶೇಕಡಾ 3 ತೆರಿಗೆಯನ್ನು ಸಂಗ್ರಹಿಸುತ್ತವೆ.
ಸದರಿ ಹಣವನ್ನು ಈ ಕೂಡಲೇ ಭಿಕ್ಷುಕರ, ನಿರಾಶ್ರಿತರ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಿ ಸದರಿ ಅವರುಗಳನ್ನು ನಿರಾಶ್ರಿತ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅವರಿಗೆ ವಸತಿ ಕಲ್ಪಿಸಬೇಕೆಂದು ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರಗಳಿಗೆ ಸೂಚನೆ ನೀಡಬೇಕೆಂದು ಹಾಗೂ ಇದಕ್ಕೆ ಸಂಬಂಧಪಟ್ಟಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ವಕೀಲ ಅ.ಮ ಭಾಸ್ಕರ್ ಮನವಿ ಮಾಡಿದ್ದಾರೆ.
Key words: mysore- lawyer-ama Bhaskar- emergency –response- beggars -DC