ಮೈಸೂರು,ಜ,5,2020(www.justkannada.in): ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿಯನ್ನ ಕಂಡ ಜನರು ಕೆಲಕಾಲ ಹೌಹಾರಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಅಳ್ಳೂರು ಗ್ರಾಮದ ಗೇಟ್ ಬಳಿ ಚಿರತೆ ಮರಿ ಪ್ರತ್ಯಕ್ಷವಾಗಿದ್ದು, ಸುಮಾರು 1 ಗಂಟೆ ಕಾಲ ಚಿರತೆ ಮರಿ ರಸ್ತೆಯಲ್ಲಿ ಓಡಾಡಿ ಜನರಲ್ಲಿ ಆತಂಕ ಸೃಷ್ಠಿಸಿತು. ಮೈಸೂರು ವಿರಾಜಪೇಟೆ ರಸ್ತೆಗೆ ಬಂದು ಕುಳಿತ ಚಿರತೆ ಮರಿ ನಂತರ ವಾಹನಗಳ ಚಕ್ರದ ಕೆಳಗೆ, ದೇವಸ್ಥಾನ ಬಳಿ ಓಡಾಡಿದ್ದು ಚಿರತೆ ಮರಿ ಕಂಡು ಪ್ರಯಾಣಿಕರು ಆತಂಕಕ್ಕೊಳಗಾದರು.
ಈ ವೇಳೆ ಚಿರತೆ ಮರಿ ಜನಗಳ ಮಧ್ಯೆಯೇ ಓಡಾಡಿದ್ದು ಚಿರತೆ ಮರಿಯನ್ನು ಸನಿಹದಿಂದ ನೋಡಿ ಸ್ಥಳೀಯರು ಸಂಭ್ರಮಿಸಿದರು. ಕೊನೆಗೆ ಚಿರತೆ ಮರಿ ಕಾಡಿನ ಕಡೆ ಹೆಜ್ಜೆ ಹಾಕಿ ಕಣ್ಮರೆಯಾಯಿತು.
Key words: mysore- Leopard –people-forest