ಮೈಸೂರು ಸ್ಥಳೀಯ ಸಂಸ್ಥೆ ಚುನಾವಣೆ: ನಂಜನಗೂಡು ನಗರಸಭೆ ಕೇಸರಿಮಯ: ಬನ್ನೂರು ಪುರಸಭೆ ಜೆಡಿಎಸ್ ಪಾಲು..

ಮೈಸೂರು,ಮೇ,31,2019(www.justkannada.in):  ಮೈಸೂರು ಜಿಲ್ಲೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ನಂಜನಗೂಡು ನಗರ ಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೇ ಬನ್ನೂರು ಪುರಸಭೆ ಜೆಡಿಎಸ್ ಪಾಲಾಗಿದೆ.

ಜಿಲ್ಲೆಯ 2 ಪುರಸಭೆ 1 ನಗರಸಭೆಗೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ನಂಜನಗೂಡು ನಗರಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಹಿಡಿಯಲು ಬಿಜೆಪಿಗೆ 1 ಸ್ಥಾನದ ಅವಶ್ಯಕತೆ ಇದೆ. ಕೇವಲ ಒಂದು ಸ್ಥಾನದ ಕೊರತೆಯಿಂದ ಬಹುಮತ ಪಡೆಯುವಲ್ಲಿ ವಿಫಲವಾದ ಬಿಜೆಪಿ ಪಕ್ಷೇತರ ಸದಸ್ಯರ ನೆರವಿನಿಂದ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.  ಇನ್ನು ಕೆ.ಆರ್ ನಗರ ಪುರಸಭೆಯಲ್ಲಿ ಕಾಂಗ್ರೆಸ್ ಜಯಗಳಿಸಿದ್ದು ಈ ಮೂಲಕ ಸಚಿವ ಸಾರಾ ಮಹೇಶ್ ಗೆ ಮುಖಭಂಗವಾಗಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಭದ್ರಕೋಟೆಯಾಗಿದ್ದ ನಂಜನಗೂಡು ಇದೀಗ ಸಂಪೂರ್ಣ ಕೇಸರಿಮಯವಾಗಿದೆ. ಮೈಸೂರಿನ ನಂಜನಗೂಡು ನಗರಸಭೆಯ ಒಟ್ಟು 31 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಇದೀಗ ಅಂತಿಮ ಫಲಿತಾಂಶ ಪ್ರಕಟವಾಗಿದೆ ಫಲಿತಾಂಶ ಇಲ್ಲಿದೆ ನೋಡಿ…

ಕಾಂಗ್ರೆಸ್ – 10

ಬಿಜೆಪಿ – 15

ಜೆಡಿಎಸ್ – 3

ಪಕ್ಷೇತರರು -3

ಇನ್ನು ಬನ್ನೂರು ಪುರಸಭೆ ಫಲಿತಾಂಶವೂ ಪ್ರಕಟಗೊಂಡಿದ್ದು ಜೆಡಿಎಸ್ ಗೆಲುವು ಸಾಧಿಸಿದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ ಬಾರಿ 18 ವಾರ್ಡ್ ಗಳಿಗೆ ನಡೆದಿದ್ದ ಚುನಾವಣೆಯಲ್ಲಿ 18 ರಲ್ಲಿ 17 ಕಾಂಗ್ರೆಸ್ ಗೆಲುವು ಸಾಧಿಸಿತ್ತು. 1 ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು. ಈ ಬಾರಿ 23 ವಾರ್ಡ್ ಗಳಿಗೆ ನಡೆದಿದ್ದ ಚುನಾವಣೆಯಲ್ಲಿ  ಕಳೆದ ಬಾರಿ ಖಾತೆಯನ್ನೆ ತೆರೆಯದ ಜೆ.ಡಿ.ಎಸ್ ಗೆ ಈ ಬಾರಿ ಅಧಿಕಾರ ಹಿಡಿದಿದೆ.

ಬನ್ನೂರು ಪುರಸಭೆಯಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ ನೋಡಿ….

  1. ಜೆ.ಡಿ.ಎಸ್ -ಭಾಗ್ಯ

2.ಕಾಂಗ್ರೆಸ್-ಮಹೇಶ್

  1. ಜೆ.ಡಿ.ಎಸ್-ಆನಂದ್

4.ಕಾಂಗ್ರೆಸ್-ಶೃತಿ

  1. ಜೆ.ಡಿ.ಎಸ್-ಕೃಷ್ಣೆಗೌಡ
  2. ಜೆ.ಡಿ.ಎಸ್- ಸೌಮ್ಯರಾಣಿ
  3. ಜೆ.ಡಿ.ಎಸ್- ನಂಜುಂಡಸ್ವಾಮಿ
  4. ಜೆ.ಡಿ.ಎಸ್-ಶ್ರೀನಿವಾಸ್

9.ಕಾಂಗ್ರೆಸ್-ಅನಂತಮೂರ್ತಿ

  1. ಜೆ.ಡಿ.ಎಸ್-ಶೋಭ

11.ಬಿಜೆಪಿ-ನಾಗರತ್ನ

  1. ಜೆ.ಡಿ.ಎಸ್-ದಿವ್ಯ
  2. ಜೆ.ಡಿ.ಎಸ್- ಫಿರ್ದೋಶ್

14.ಕಾಂಗ್ರೆಸ್-ಫೀರ್ ಖಾನ್

15.ಕಾಂಗ್ರೆಸ್-ಭಾಗ್ಯಶ್ರಿ

16.ಪಕ್ಷೇತರ-ಲೋಕಾಂಭಿಕ

17.ಕಾಂಗ್ರೆಸ್-ಪುಷ್ಪಾವತಿ

18.ಕಾಂಗ್ರೆಸ್-ಮೂರ್ತಿ

  1. ಜೆ.ಡಿ.ಎಸ್- ಶಾಂತ ರಾಜು

20.ಬಿಜೆಪಿ-ಶಿವಣ್ಣ

  1. ಜೆ.ಡಿ.ಎಸ್-ಚಲುವರಾಜು
  2. ಜೆ.ಡಿ.ಎಸ್-ವಿಜಯಕುಮಾರ್

23.ಪಕ್ಷೇತರ.-ಸುರೇಶ್.

ಬನ್ನೂರು ಪುರಸಭೆ ಎಲೆಕ್ಷನ್ ನಲ್ಲಿ ವಿಶೇಷತೆ ಕಂಡು ಬಂದಿದೆ.  ಒಂದು ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಕಾಂಗ್ರೆಸ್ ನ ಶೃತಿ 266 ಮತ ಪಡೆದರೇ ಜೆ.ಡಿ.ಎಸ್ ನ ಶೋಭ 265 ಮತ ಗಳಿಸಿದ್ದಾರೆ. ನೋಟಕ್ಕೆ 9 ಮತ ಬಿದ್ದಿವೆ.

Key words: Mysore local body elections. Bannur Municipal JDS wins.

#Mysore #localbody #elections #nanjanagudu #bannur