ಮೈಸೂರು, ಸೆ.24,2024: (www.justkannada.in news) ಮುಡಾ ನಿವೇಶನ ಅಕ್ರಮ ಸಂಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಇಂದು ಹಸಿರು ನಿಶಾನೆ ನೀಡಿದ ಬೆನ್ನಲ್ಲೇ ಲೋಕಾಯುಕ್ತ ಕಚೇರಿಯತ್ತ ಎಲ್ಲರ ಚಿತ್ತ.
ಕೋರ್ಟ್ ತೀರ್ಪಿನ ಹಿನ್ನೆಲೆ ನಾಳೆ ಬೆಳಗ್ಗೆಯೊಳಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು ಸಾಧ್ಯತೆ. ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲೇ ದೂರು ದಾಖಲಾಗುವುದು ಖಚಿತ. ಮುಡಾದಿಂದ ಅನತಿ ದೂರದಲ್ಲೇ ಇರುವ ಲೋಕಾಯುಕ್ತ ಕಚೇರಿ.
ಸಿಎಂ ವಿರುದ್ಧ ತೀರ್ಪು ಪ್ರಕಟ ಬೆನ್ನಲ್ಲೆ ಅಧಿಕಾರಿಗಳ ದೌಡು. ಹಿರಿಯ ಅಧಿಕಾರಿಗಳು ಬೆಂಗಳೂರಿನತ್ತ ಪ್ರಯಾಣ. ನಾಳೆ ಎಫ್ ಐ ಆರ್ ಆಗುವುದು ಬಹುತೇಕ ಖಚಿತ. ಜನಪ್ರತಿನಿಧಿಗಳ ನ್ಯಾಯಾಲಯದಿಂದ ನಾಳೆ ತೀರ್ಪು. ತೀರ್ಪು ಪ್ರಕಟ ಬಳಿಕ ಲೋಕಾಯುಕ್ತದಲ್ಲಿ ದೂರು. ರಾಜ್ಯದ ಚಿತ್ತ ಮೈಸೂರು ಲೋಕಾಯುಕ್ತ ಕಚೇರಿಯತ್ತ.
key words: The state’s, focus is on, the Mysore Lokayukta office.