MYSORE LOKAYUKTHA: ಸಿಎಂ ಸಿದ್ದರಾಮಯ್ಯ ವಿರುದ್ಧ ಇಂದು ಎಫ್.ಐ.ಆರ್.‌ ಡೌಟು..!

MYSORE LOKAYUKTHA: F.I.R TO BE LODGED AGAINST CM Siddaramaiah today is not confirmed.

 

Delay in filing FIR due to lack of clarity on acts. Mysuru Lokayukta SP To Write a Letter to the Central Office Seeking the Opinion of the People’s Court on the Order of the People’s Court.

ಮೈಸೂರು, ಸೆ.27,2024: (www.justkannada.in news) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧಇಂದು ಲೋಕಾಯುಕ್ತದಲ್ಲಿ ಎಫ್ ಐ ಆರ್ ಆಗುವುದು ಬಹುತೇಕ ಅನುಮಾನ.

ಕಾಯ್ದೆ ಗಳ ವಿಚಾರದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಎಫ್ ಐ ಆರ್ ಮಾಡಲು ವಿಳಂಬ. ಜನಪ್ರತಿನಿಧಿ ನ್ಯಾಯಾಲಯದ ಆದೇಶದ ಮೇಲೆ ಕೇಂದ್ರ ಕಚೇರಿಯ ಅಭಿಪ್ರಾಯ ಕೇಳಿ ಪತ್ರ ಬರೆಯಲಿರುವ ಮೈಸೂರು ಲೋಕಾಯುಕ್ತ ಎಸ್ ಪಿ.

ಬಿಎನ್ ಎಸ್ ಕಾಯ್ದೆ ಅಡಿ ಎಫ್ ಐ ಆರ್ ದಾಖಲಿಸಬೇಕಾ ಅಥವಾ ಸಿಆರ್ ಪಿಸಿ, ಐಪಿಸಿ ಸೆಕ್ಷನ್ ಅಡಿ ಎಫ್ ಐ ಆರ್ ದಾಖಲಿಸಬೇಕಾ ಎಂಬ ಬಗ್ಗೆ ಸ್ಪಷ್ಟತೆ ಕೊಡಿ ಎಂದು ಪತ್ರ ಬರೆಯಲಿರುವ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್.‌

ಲೋಕಾಯುಕ್ತರ ಈ ಪತ್ರಕ್ಕೆ ಸೂಕ್ತ ಉತ್ತರ ಬಂದ ಮೇಲೆ ಎಫ್ ಐ ಆರ್ ದಾಖಲು ಪ್ರಕಿಯೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಹ ಎಫ್ ಐ ಆರ್ ದಾಖಲಾಗುವುದು ಬಹುತೇಕ ಅನುಮಾನ ಎಂದೇ ವ್ಯಾಖ್ಯಾನಿಸಲಾಗಿದೆ.

 ಏನು ವ್ಯತ್ಯಾಸ:

ಹಳೆಯ ಸಿಆರ್ಪಿಸಿ ಕಾಯ್ದೆಯಡಿ ದೂರು ದಾಖಲಿಸಿಕೊಂಡರೇ ಆಗ ಕೂಡಲೇ ಎಫ್.ಐ.ಆರ್‌ ದಾಖಲು ಮಾಡಬೇಕಾಗುತ್ತದೆ. ಆದರೆ, ಪ್ರಸ್ತುತ ಜಾರಿಯಲ್ಲಿರುವ ನೂತನ ಬಿ.ಎನ್.ಎಸ್.‌ ಕಾಯ್ದೆಯಡಿ ದೂರು ದಾಖಲಾದರೆ, ಮೊದಲು ನೋಟಿಸ್‌ ಜಾರಿಗೊಳಿಸಿ ಅವರಿಂದ ಉತ್ತರ ಪಡೆದ ನಂತರ ಎಫ್.ಐ.ಆರ್.‌ ದಾಖಲಿಸಬೇಕಾಗುತ್ತದೆ. ಹಾಗಾಗಿ ಇದೀಗ ಲೋಕಾಯುಕ್ತರು ಗೊಂದಲದಲ್ಲಿದ್ದು ಹಳೆಯ ಸಿ.ಆರ್.ಪಿ.ಸಿ ಕಾಯ್ಡೆಯಡಿ ದೂರು ದಾಖಲಿಸಬೇಕೋ ಅಥವಾ ಹೊಸ ಬಿ.ಎನ್.ಎಸ್.ಕಾಯ್ದೆಯಡಿ ದೂರು ದಾಖಲಿಸಬೇಕೋ ಎಂದು.

key words: MYSORE LOKAYUKTHA, F.I.R, TO BE LODGED, AGAINST, CM Siddaramaiah, not confirmed.

SUMMARY:

Delay in filing FIR due to lack of clarity on acts. Mysuru Lokayukta SP To Write a Letter to the Central Office Seeking the Opinion of the People’s Court on the Order of the People’s Court.