ಮೈಸೂರು, ಮೇ 10, 2019 : ಕಳೆದ ವಾರಾಂತ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ರೆಸಾರ್ಟ್ ಗೆ ಈ ವೀಕೆಂಡ್ ಹಾಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ.
ಮಡಿಕೇರಿಯ ಹೊರವಲಯದಲ್ಲಿರುವ ‘ ದಿ ಇಬ್ಬನಿ ‘ ರೆಸಾರ್ಟ್‍ನಲ್ಲೇ ಸಿಎಂ ಕುಮಾರಸ್ವಾಮಿ ವಿಶ್ರಾಂತಿಗಾಗಿ ತಂಗುತ್ತಿರುವುದು. ಈ ವಾಸ್ತವ್ಯದ ಹಿಂದೆ ರಾಜಕೀಯದ ಚದುರಂಗದಾಟವು ನಡೆಯಲಿದೆಯೇ ಎಂಬ ರಾಜಕೀಯ ಲೆಕ್ಕಚಾರ ಶುರುವಾಗಿದೆ.
ಇದೇ 11 ಮತ್ತು 12 ರಂದು ಸಿಎಂ ಹೆಚ್‍ಡಿಕೆ ಇಬ್ಬನಿ ರೆಸಾರ್ಟ್‍ನಲ್ಲಿ ತಂಗಲು ನಿರ್ಧರಿಸಿರುವ ಬಗ್ಗೆ ಮಾಧ್ಯಮಗಳು ವರದಿ ಪ್ರಸಾರ ಮಾಡುತ್ತಿವೆ. ಜತೆಗೆ ಶುಕ್ರವಾರ ಸಂಜೆಯೇ ಸಿಎಂ ಅವರ ಈ ಖಾಸಗಿ ಭೇಟಿ ಸಾಧ್ಯತೆಯ ಬಗೆಗೂ ಅವು ಅನುಮಾನ ವ್ಯಕ್ತಪಡಿಸುತ್ತಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಮತ್ತೆ ಸಿಎಂ ಆಗ್ಬೇಕು ಎನ್ನೋ ಕೂಗು ಕಾಂಗ್ರೆಸ್‍ನ ಒಂದು ವಲಯದಲ್ಲಿ ಕೇಳಿ ಬರುತ್ತಿರುವಾಗಲೇ ಇದೇ ಮೇ 6 ಮತ್ತು 7 ರಂದು ಸೈಲೆಂಟಾಗಿ ಕೊಡಗಿನ ಇಬ್ಬನಿ ರೆಸಾರ್ಟ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿಕೊಂಡಿದ್ದು.
ಈ ವೇಳೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಮಾಧ್ಯಮಗಳು ಎಷ್ಟೇ ಪ್ರಯತ್ನಪಟ್ರು ಸಾಧ್ಯವಾಗಿರಲಿಲ್ಲ. ಬದಲಿಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ ಎರಡು ದಿನಗಳ ಕಾಲ ರೆಸಾರ್ಟ್‍ನಲ್ಲಿಯೇ ವಾಸ್ತವ್ಯ ಹೂಡಿದ್ದರು. ರೆಸಾರ್ಟ್‍ನಲ್ಲಿ ರೆಸ್ಟ್ ಮುಗಿಸಿ ಹುಬ್ಬಳಿಗೆ ತೆರಳುವ ವೇಳೆಯಲ್ಲೂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರ್ಲಿಲ್ಲ.
ಇದೀಗ ಸಿಎಂ ಕುಮಾರಸ್ವಾಮಿ ಕೂಡ ಅದೇ ರೆಸಾರ್ಟ್‍ನಲ್ಲಿ ತಂಗುತ್ತಿದ್ದಾರೆ. ಇದು ರಾಜಕೀಯ ವಲಯದಲ್ಲಿ ಹಲವು ಉಹಾಪೋಹಗಳಿಗೆ ಕಾರಣವಾಗಿದೆ. ಲೋಕಸಭೆ ಚುನಾವಣೆ ಬಳಿಕ ಉಡುಪಿಯ ಪ್ರಕೃತಿ ಚಿಕಿತ್ಸಾಲಯದಲ್ಲಿ ರೆಸ್ಟ್ ಜೊತೆಗೆ ಚಿಕಿತ್ಸೆಯನ್ನು ಸಿಎಂ ಕುಮಾರಸ್ವಾಮಿ ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
—
key words : mysore-madikeri-weak-end-with-kumaraswamy-cm