ಮೈಸೂರು, ನವೆಂಬರ್ 22, 2020 (www.justkannada.in): ಮೈಸೂರು-ಮಂಗಳೂರು ನಡುವೆ ವಿಮಾನ ಸೇವೆ ಡಿಸೆಂಬರ್ 10ರಿಂದ ಆರಂಭವಾಗಲಿದೆ.
ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ವಾರದಲ್ಲಿ ನಾಲ್ಕು ದಿನ ಮೈಸೂರು-ಮಂಗಳೂರು ನಡುವೆ ವಿಮಾನ ಹಾರಾಟವನ್ನು ನಡೆಸುತ್ತಿದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ವಿಮಾನ ಸಂಪರ್ಕ ಕಲ್ಪಿಸಲಾಗುತ್ತಿದೆ.
ಭಾರತೀಯ ವಿಮಾನಯಾನ ಪ್ರಾಧಿಕಾರ ಮಂಗಳೂರು-ಮೈಸೂರು ನಡುವೆ ವಿಮಾನ ಹಾರಾಟಕ್ಕೆ ಅಕ್ಟೋಬರ್ 25ರಿಂದಲೇ ಅನುಮತಿ ನೀಡಿತ್ತು. ಆದರೆ, ಕಾರಣಾಂತರಗಳಿಂದಾಗಿ ಡಿಸೆಂಬರ್ನಲ್ಲಿ ವಿಮಾನ ಹಾರಾಟ ಆರಂಭವಾಗುತ್ತಿದೆ.
ವೇಳಾಪಟ್ಟಿ; 9ಐ-532 ವಿಮಾನ ಬೆಳಗ್ಗೆ 11.15ಕ್ಕೆ ಮೈಸೂರಿನಿಂದ ಹೊರಡಲಿದ್ದು, 12.15ಕ್ಕೆ ಮಂಗಳೂರು ತಲುಪಲಿದೆ. 9ಐ-533 ಸಂಖ್ಯೆಯ ವಿಮಾನ ಮಂಗಳೂರಿನಿಂದ 12.40ಕ್ಕೆ ಹೊರಡಲಿದ್ದು, 1.40ಕ್ಕೆ ಮೈಸೂರಿಗೆ ಆಗಮಿಸಲಿದೆ.