ಮೈಸೂರು,ಆ,1,2020(www.justkannada.in): ರಾಜ್ಯದಲ್ಲಿ ಕೊರೋನಾ ಮಹಮಾರಿಯಿಂದಾಗಿ ತರಕಾರಿ ಹಣ್ಣು ಖರೀದಿಸಲು ಮಾರುಕಟ್ಟೆಗೆ ಹೋಗುವ ಹೆದರಿಕೆಯೇ…? ಕೊರೊನಾ ಸೋಂಕು ಅಂಟಿಕೊಳ್ಳುವ ಭೀತಿ ಎದುರಾಗಿದೆಯೇ…? ಆಗಾದ್ರೆ ಇನ್ಮುಂದೆ ಚಿಂತೆಬಿಡಿ ನಿಮ್ಮ ಮನೆ ಮನೆ ಬಾಗಿಲಿಗೆ ಬರಲಿದೇ ತಾಜಾ… ತಾಜಾ… ಹಣ್ಣು ತರಕಾರಿ…
ಹೌದು, ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಭೀತಿ ಎದುರಾಗಿದ್ದು ಈ ಕೊರೋನಾ ಆತಂಕದಲ್ಲಿರುವ ಮೈಸೂರಿನ ಜನತೆಗೆ ಹಾಪ್ ಕಾಮ್ ಸಲ್ಯೂಷನ್ ವೊಂದನ್ನ ಕೊಟ್ಟಿದೆ. ಮೈಸೂರಿನಲ್ಲಿ ಹಾಪ್ ಕಾಮ್ ಆನ್ ಲೈನ್ ಆರಂಭವಾಗಿದ್ದು, ಇನ್ಮುಂದೆ ಆನ್ ಲೈನ್ ನಲ್ಲಿ ಬುಕ್ ಮಾಡಿದ್ರೆ ಸಾಕು ಮನೆ ಮನೆ ಬಾಗಿಲಿಗೆ ತಾಜಾ..ತಾಜಾ..ತರಕಾರಿ ಹಾಗೂ ಹಣ್ಣುಗಳು ಬರುತ್ತವೆ.
ಪ್ಲೇ ಸ್ಟೋರ್ ಗೆ ಹೋಗಿ HOPCOMS online ಆಪ್ ಇನ್ ಸ್ಟಾಲ್ ಮಾಡಿಕೊಂಡ್ರೆ ಸಾಕು ಆರ್ಡರ್ ಮಾಡಬಹುದು. ಮಿನಿಮಮ್ 200ರೂ ಆರ್ಡರ್ ಮಾಡಿದ್ರೆ ಸಾಕು ಮನೆಗೆ ತರಕಾರಿ ಹಣ್ಣು ತಲುಪಲಿದೆ. ಹಾಪ್ ಕಾಮ್ ಆನ್ ಲೈನ್ ನಲ್ಲಿ ಮಾರುಕಟ್ಟೆ ಬೆಲೆಗಿಂತಲೂ ಕಾಂಪಿಟಿಟಿವ್ ರೇಟ್ ನಲ್ಲಿ ಸಿಗಲಿದೆ.
ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಸಲುವಾಗಿ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ ವತಿಯಿಂದ ನೂತನ ಯೋಜನೆ ಜಾರಿಗೆ ತರಲಾಗಿದೆ. ತರಕಾರಿ ಹಣ್ಣು ಖರೀದಿಸಲು ಮಾರುಕಟ್ಟೆಗೆ ಹೋಗಲು ಹೆದರುತ್ತಿದ್ದವರಿಗೆ ಈ ಯೋಜನೆಯಿಂದ ನಿರಾಳತೆ ಸಿಕ್ಕಂತಾಗಿದೆ.
ಇನ್ನು ಈ ಯೋಜನೆಯಲ್ಲಿ ಈಗಾಗಲೇ 1 ಸಾವಿರಕ್ಕೂ ಹೆಚ್ಚು ಗ್ರಾಹಕರ ನೊಂದಣಿ ಮಾಡಿಸಿಕೊಂಡಿದ್ದಾರೆ. ಈ ಯೋಜನೆ ಉದ್ದೇಶ ರೈತರಿಗೂ ಸೂಕ್ತಬೆಲೆ ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ತರಕಾರಿ ಹಣ್ಣು ಸಿಗುವುದಾಗಿದೆ. ತಾಜಾತನ ಹಾಗೂ ಶುಚಿತ್ವಕ್ಕೆ ತೋಟಗಾರಿಕೆ ಇಲಾಖೆ ಒತ್ತು ನೀಡಿದೆ.
ಈ ಮೂಲಕ ಕೊರೊನಾಗೆ ಹಾಪ್ ಕಾಮ್ ಆನ್ ಲೈನ್ ಆ್ಯಪ್ ಸೆಡ್ಡು ಹೊಡೆದ್ದು ಇನ್ಮುಂದೆ ಕೊರೋನಾದಿಂದಾಗಿ ಮಾರುಕಟ್ಟೆಗೆ ಹೋಗಲು ಹೆದರುತ್ತಿದ್ದವರು ತರಕಾರಿ ಹಣ್ಣು ಖರೀದಿಸಲು ಇನ್ಮುಂದೆ ಮಾರುಕಟ್ಟೆಗೆ ಹೋಗಬೇಕಾದ್ದಿಲ್ಲ. ಪ್ಲೇ ಸ್ಟೋರ್ ಗೆ ಹೋಗಿ HOPCOMS online ಆಪ್ ಇನ್ ಸ್ಟಾಲ್ ಮಾಡಿಕೊಂಡ್ರೆ ಸಾಕು ಆರ್ಡರ್ ಮಾಡಿ ಹಣ್ಣು ತರಕಾರಿಗಳನ್ನ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು.
Key words: mysore- Market -buy -vegetables – fruit- Hopcom online.