ಮೈಸೂರು, ಮೇ 09, 2020 : (www.justkannada.in news ) ಮದುವೆ ಸಮಾರಂಭಕ್ಕಾಗಿ ಕಲ್ಯಾಣ ಮಂಟಪಗಳ ಬಾಡಿಗೆ ಕಾಯ್ದಿರಿಸಿ ಮುಂಗಡ ಹಣ ಪಾವತಿಸಿದ್ದವರಿಗೆ ಮಾಲೀಕರು ಹಣ ವಾಪಸ್ ನೀಡಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟಗಳ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಕುರುಬೂರು ಶಾಂತಕುಮಾರ್, ಮದುವೆ ಮಾಡಲು ಕಲ್ಯಾಣ ಮಂಟಪಗಳನ್ನು ಕಾಯ್ದಿರಿಸಿ ಕಟ್ಟಲಾಗಿದ್ದ ಮುಂಗಡ ಹಣ ಕೂಡಲೇ ವಾಪಸ್ ನೀಡುವುದು ಮಾಲೀಕರ ಕರ್ತವ್ಯವಾಗಿದೆ, ಕರೋನಾ ಲಾಕಡೌನ್ ಅನಿರೀಕ್ಷಿತವಾಗಿ ಬಂದ ಕಾರಣ ಸರ್ಕಾರದ ಆದೇಶ ಪಾಲಿಸಿ ಮದುವೆಗಳನ್ನು ಸರಳವಾಗಿ ಆಚರಿಸಿ ಕೊಂಡಿದ್ದಾರೆ.
ಇದು ಮದುವೆ ಮನೆಯವರ ತಪ್ಪಲ್ಲ . ಸರ್ಕಾರವು ಆರಂಭದಲ್ಲಿ ಕಲ್ಯಾಣ ಮಂಟಪ ಗಳಿಂದ ಹಣ ವಾಪಸ್ ಕೊಡಿಸುವ ಭರವಸೆ ನೀಡಿತ್ತು, ಅದರಂತೆ ಈಗ ಹಣ ವಾಪಸ್ ಕೊಡಿಸಲು ಈ ಅವಧಿಯಲ್ಲಿ ಐದು ಸಾವಿರಕ್ಕೂ ಹೆಚ್ಚು ಮದುವೆಗಳು ನಿಂತುಹೋಗಿವೆ. ಸುಮಾರು 50 ಕೋಟಿ ರೂಪಾಯಿ ಮುಂಗಡ ಪಾವತಿಸಿದ್ದಾರೆ ,
ಮುಂದಿನ ದಿನಗಳಲ್ಲಿ ಮದುವೆ ಮಾಡಲು ರಿಯಾಯ್ತಿ ಕೊಡುತ್ತೇವೆ ಎಂದು ಕಲ್ಯಾಣ ಮಂಟಪದವರು ಹೇಳುತ್ತಿದ್ದಾರೆ, ಆದರೆ ಮತ್ತೆ ಮರು ಮದುವೆ ಮಾಡಲು ಸಾಧ್ಯವಿಲ್ಲ ಎಂದು ಕುರುಬೂರು ಶಾಂತಕುಮಾರ್ ವ್ಯಂಗ್ಯವಾಡಿದ್ದಾರೆ.
ಸರ್ಕಾರ ಇವರಿಗೆ ಲಾಕ್ ಡೌನ್ ಅವಧಿಯ ವಿದ್ಯುತ್ ಬಿಲ್ ಮನ್ನ ಮಾಡಲಿ, ನೀರಿನ ತೆರಿಗೆ ಭೂಮಿ ತೆರಿಗೆ ರದ್ದುಮಾಡಲಿ, ಇವರ ಸಾಲದ ಮೇಲಿನ ಬಡ್ಡಿ ರಿಯಾಯಿತಿ ನೀಡಲಿ, ಜತೆಗೆ ಜನರ ಮದುವೆ ಮುಂಗಡ ಹಣವನ್ನು ವಾಪಸ್ ಕೊಡಿಸಲು ಕ್ರಮ ಕೈಗೊಳ್ಳಲಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
key words : mysore-marriage-hall-advance-repaid-demand