ಬೆಂಗಳೂರು, ಜೂನ್ 08, 2021 (www.justkannada.in): ಮತ್ತೊಮ್ಮೆ ಮೈಸೂರು ಮೇಯರ್ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಷ್ಟೆ ತೋರಿಸಲು ಮತ್ತೊಂದು ಅಖಾಡ ಸಿದ್ಧವಾಗಿದೆ.
ಮೈಸೂರು ಮೇಯರ್ ಪಟ್ಟ ಯಾರ ಪಾಲಾಗುತ್ತೆ ಎಂಬ ಕುತೂಹಲ ಉದ್ಭವಿಸಿದೆ. ಮೇಯರ್ ರುಕ್ಮಿಣಿ ಮಾದೇಗೌಡ ಪಾಲಿಕೆ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಜೂ 11 ರಂದು ಮೇಯರ್ ಚುನಾವಣೆ ನಡೆಯಲಿದೆ.
ಆದರೆ ಉಭಯ ಪಕ್ಷಗಳ ನಿಲುವಿನಲ್ಲಿ ಇನ್ನೂ ಸ್ಪಷ್ಟತೆ ಕಂಡುಬಂದಿಲ್ಲ. ಜೆಡಿಎಸ್ ನಿರ್ಣಾಯಕ ಸ್ಥಾನದಲ್ಲಿದ್ದು, ಪಕ್ಷದ ನಾಯಕರ ನಡೆ ಕುತೂಹಲ ಮೂಡಿಸಿದೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ನೀಡುವ ವಿಶ್ವಾಸದ ಮೇಲೆ ಬಿಜೆಪಿ ಮೇಯರ್ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೆ ಕೊನೆ ಘಳಿಗೆಯಲ್ಲಿ ಬಿಜೆಪಿಗೆ ಜೆಡಿಎಸ್ ಕೈ ಕೊಟ್ಟಿತ್ತು.
ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ನಲ್ಲಿ ಭುಗಿಲೆದ್ದಿದ್ದ ಭಿನ್ನಮತ. ಮೈತ್ರಿ ಧರ್ಮದಂತೆ ಮೇಯರ್ ಪಟ್ಟ ಕೇಳಿದ್ದ ಕಾಂಗ್ರೆಸ್. ಆದರೆ ಮೇಯರ್ ಪಟ್ಟ ಬಿಟ್ಟುಕೊಡದೆ ಮೈತ್ರಿ ಮುಂದುವರೆಸಿದ್ದ ಜೆಡಿಎಸ್. ಇದರಿಂದ ಸಚಿವ ಎಸ್.ಟಿ.ಸೋಮಶೇಖರ್ಗೆ ಮುಖಭಂಗವಾಗಿತ್ತು. ಸಿದ್ದರಾಮಯ್ಯರ ಆಕ್ರೋಶಕ್ಕೂ ಗುರಿಯಾಗಿತ್ತು.
ಇದೀಗ ಮತ್ತೆ ಎದುರಾಗಿರುವ ಮೇಯರ್ ಚುನಾವಣೆ. ಮೈತ್ರಿ ಧರ್ಮದಂತೆ ಮೇಯರ್ ಪಟ್ಟಕ್ಕೆ ಬೇಡಿಕೆ ಇಡಲು ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ ಬೇಡಿಕೆಯಂತೆ ಮೈತ್ರಿ ಧರ್ಮ ಪಾಲಿಸುತ್ತಾ ಜೆಡಿಎಸ್ ಎಂಬುದನ್ನುಕಾದುನೋಡಬೇಕಿದೆ.