ಮೈಸೂರು,ಆಗಸ್ಟ್,24,2021(www.justkannada.in): ನಾಳೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ, ಮೇಯರ್ ಆದ್ರೂ ಪರವಾಗಿಲ್ಲ, ಆಗದಿದ್ರೂ ಪರವಾಗಿಲ್ಲ, ಎರಡಕ್ಕೂ ನಾನು ಸಿದ್ಧ ಎಂದಿದ್ದಾರೆ.
ಮೇಯರ್ ಚುನಾವಣೆ ವಿಚಾರ ಕುರಿತು ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ, ಈ ಬಾರಿ ನಾನು ಆಸೆನೂ ಇಟ್ಕೊಂಡಿಲ್ಲ, ನಿರಾಸೆನೂ ಇಟ್ಕೊಂಡಿಲ್ಲ. ನಾನು ಸೋಲು ಗೆಲುವಿನ ನಡುವೆ ಬಂದವಳು. ಇದು ನನ್ನ ಕೊನೆಯ ಚುನಾವಣೆ. ಪಕ್ಷ ನಂಬಿದ್ದೇನೆ, ಪಕ್ಷದ ತೀರ್ಮಾನಕ್ಕೆ ಬದ್ಧಳಾಗಿದ್ದೇನೆ. 25 ವರ್ಷಗಳಿಂದ ಪಾಲಿಕೆಯ ರಾಜಕಾರಣದಲ್ಲಿದ್ದೇನೆ. 5 ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಸೋಲು ಗೆಲುವಿನ ನಡುವೆ ಬಂದವಳು. ಆಸೆ ಪಡುವುದು ಸಹಜ, ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ. ಕಣ್ಣೀರು ಸಂತೋಷಕ್ಕೂ ಬರುತ್ತೆ, ದುಃಖಕ್ಕೂ ಕಣ್ಣೀರು ಬರುತ್ತೆ. ಹೆಚ್ಚು ದುಃಖ ಆದಾಗ ಕಣ್ಣೀರು ಹೆಚ್ಚು ಬರಲಿದೆ ಎಂದರು.
ನಾನು ಬೇರೆ ಯಾವ ಪಕ್ಷದ ನಾಯಕರ ಜೊತೆಯೂ ಸಂಪರ್ಕದಲ್ಲಿಲ್ಲ. ಈ ಬಾರಿ ನಾನು ಆಸೆನೂ ಇಟ್ಟುಕೊಂಡಿಲ್ಲ, ನಿರಾಸೆನೂ ಇಟ್ಟುಕೊಂಡಿಲ್ಲ,ಮೇಯರ್ ಆದರೂ ಪರವಾಗಿಲ್ಲ, ಆಗದಿದ್ದರೂ ಪರವಾಗಿಲ್ಲ, ಎರಡಕ್ಕೂ ನಾನು ಸಿದ್ಧಳಿದ್ದೇನೆ. ಈ ನಡುವೆಯೂ ನನಗೆ ಮೇಯರ್ ಆಗುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಹೇಳಿದರು.
Key words: mysore-mayor-election-BJP candidate- Sunanda Palanetra