ಮೈಸೂರು,ಸೆಪ್ಟಂಬರ್,6,2022(www.justkannada.in): ಮೈಸೂರು ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಗಳನ್ನು ಆಪರೇಷನ್ ಕಮಲ ಮಾಡಲು ಬಿಜೆಪಿ ಹೊರಟಿತ್ತು. ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆರೋಪಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಅಧಿಕಾರಕ್ಕೇರಿದ ಹಿನ್ನೆಲೆ ಮಾತನಾಡಿದ ಆರ್.ಧೃವನಾರಾಯಣ್, ನಮ್ಮ ಸದಸ್ಯರು ನ್ಯಾಯಯುತವಾಗಿ ಮತದಾನ ಮಾಡಿದ್ದಾರೆ. ಜೆಡಿಎಸ್ ಒಂದು ಕಡೆ ಜಾತ್ಯಾತೀತ ಅಂತಾ ಹೇಳಿಕೊಂಡು ಈಗ ಬಿಜೆಪಿ ಗೆ ಸಪೋರ್ಟ್ ಮಾಡಿದೆ. ಇದರಿಂದ ಜೆಡಿಎಸ್ ಮುಖವಾಡ ಬಯಲಾಗಿದೆ. ಕೋಮುವಾದಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.
ಒಬ್ಬ ಅಲ್ಪಸಂಖ್ಯಾತ ಮಹಿಳೆಗೆ ಉಪಮೇಯರ್ ಸ್ಥಾನ ತಪ್ಪಿದೆ. ಇದು ಬಿಜೆಪಿಯ ದುರುದ್ದೇಶ, ಇದು ಪೂರ್ವ ನಿಯೋಜಿತ ಪ್ಲಾನ್ ಎಂದು ಆರ್ ಧ್ರುವನಾರಾಣ್ ಟೀಕಿಸಿದರು.
Key words: mysore-mayor-election-Congress- R. Dhruvanarayan