ಮೈಸೂರು,ಜ,6,2020(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಗೆ ಎಲೆಕ್ಷನ್ ಗೆ ಡೇಟ್ ಫಿಕ್ಸ್ ಆಗಿದ್ದು ಜನವರಿ 18ಕ್ಕೆ ಚುನಾವಣೆ ನಡೆಯಲಿದೆ. ಈ ಸಂಬಂಧ ಎರಡು ಪಕ್ಷದವರು ಕೂತು ಮೇಯರ್, ಉಪ ಮೇಯರ್ ವಿಚಾರವಾಗಿ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಮಾಡ್ತೀವಿ ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಜೆಡಿಎಸ್ ನಲ್ಲಿ ಪಕ್ಷನಿಷ್ಠೆ, ಅನುಭವ ಇರುವವರು ಮೇಯರ್ ಆಗ್ತಾರೆ. ಈಗಾಗಲೇ ಡೇಟ್ ಫಿಕ್ಸ್ ಆಗಿದೆ. ನಮ್ಮ ಪಕ್ಷದ ರಾಜ್ಯ ನಾಯಕರು, ರಾಷ್ಟ್ರ ನಾಯಕರ ಜೊತೆ ಮಾತನಾಡಿ ಮೇಯರ್ ಆಭ್ಯರ್ಥಿ ಆಯ್ಕೆ ಮಾಡ್ತಿವಿ. ನಮ್ಮ ಪಕ್ಷದಲ್ಲಿ ೪ ಜನ ಆಕಾಂಕ್ಷಿಗಳಿದ್ದಾರೆ. ಈಗಿರುವ ಮೇಯರ್ ಅವರ ಸಲಹೆ ಮೇರೆಗೆ ಸಲಹೆಯನ್ನು ಪಡೆಯುತ್ತೇವೆ. ಎರಡು ಪಕ್ಷದವ್ರು ಕೂತು ಮೇಯರ್, ಉಪ ಮೇಯರ್ ವಿಚಾರವಾಗಿ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಮಾಡ್ತೀವಿ ಎಂದರು.
ನಮ್ಮ ನಾಯಕರು ಮೈತ್ರಿ ಮುಂದುವರೆಸೋಕೆ ಹೇಳಿದ್ದಾರೆ. ಎರಡೂ ಪಕ್ಷದಲ್ಲೂ ಮೇಯರ್, ಉಪ ಮೇಯರ್ ಆಕಾಂಕ್ಷಿಗಳಿದ್ದಾರೆ. ಸದ್ಯದಲ್ಲಿ ಮಾತುಕತೆ ನಡೆಸಿ ಘೋಷಣೆ ಮಾಡ್ತೇವೆ. ಇನ್ನ ಅಲ್ಪಸಂಖ್ಯಾತ ಮಹಿಳೆಗೆ ಮೇಯರ್ ಸ್ಥಾನ ನೀಡಬೇಕೆಂಬ ಮಾತುಗಳಿವೆ. ಅದ್ರ ಬಗ್ಗೆಯೂ ನಮ್ಮ ನಾಯಕರೊಟ್ಟಿಗೆ ಮಾತನಾಡುತ್ತೇವೆ. ಇನ್ನೊಂದೆಡೆ ಈಗ ಉಪ ಮೇಯರ್ ಸ್ಥಾನ ಅಲ್ಪ ಸಂಖ್ಯಾತರಿಗೆ ನೀಡಲಾಗಿದೆ. ಹೀಗಾಗಿ ಯಾರಿಗೆ ನೀಡಬೇಕು ಅನ್ನುವ ವಿಷಯವಾಗಿ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಜೊತೆ ಮಾತನಾಡುತ್ತೇವೆ ಎಂದು ಸಾ.ರಾ ಮಹೇಶ್ ತಿಳಿಸಿದರು.
Key words: Mysore Mayor- Election -Date Fix-final decision – two parties -Former Minister-sa.ra mahesh