ಮೈಸೂರು,ಜ,10,2020(www.justkannada.in): ಮೈಸೂರು ಮೇಯರ್ ಚುನಾವಣೆಯಲ್ಲಿಯೂ ನಾನು ತಟಸ್ಥನಾಗಿರ್ತಿನಿ. ಮೇಯರ್ ಆಯ್ಕೆ ವಿಚಾರದಲ್ಲಿ ನಮ್ಮದೇನೂ ನಡೆಯುವುದಿಲ್ಲ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮೇಯರ್ ಆಯ್ಕೆ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಜಿ.ಟಿ ದೇವೇಗೌಡರು, ನಾನು ಕೂಡಾ ಮೇಯರ್ ಚುನಾವಣೆಯಲ್ಲಿ ಭಾಗವಹಿಸುತ್ತೇನೆ. ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮತ ನೀಡುತ್ತೇನೆ. ಈ ವಿಚಾರದಲ್ಲಿ ಯಾವುದೇ ಗೇಮ್ ಪ್ಲಾನ್ ಗಳಿಲ್ಲ. ಹಿಂದೆ ಮುಂದೆ ಗೇಮ್ ಪ್ಲಾನ್ ಮಾಡುವ ಕ್ರಿಮಿನಲ್ ಮೈಂಡ್ ನನ್ನದಲ್ಲ ಎಂದರು.
ನಾನು ಉಸ್ತುವಾರಿ ಸಚಿವನಾಗಿದ್ದಾಗ ನಮ್ಮ ಜೆಡಿಎಸ್ ನಗರಾಧ್ಯಕ್ಷ ಚಲುವೇಗೌಡರನ್ನ ಮೇಯರ್ ಮಾಡಿ ಅಂದೆ ಆದ್ರೆ ರವಿಕುಮಾರ್ ಮೇಯರ್ ಮಾಡಿದ್ರು. ಅಲ್ಲದೇ ವಿಶ್ವಕರ್ಮ ಸಮಾಜದ ರಮೇಶ (ರಮಣಿ) ಮೇಯರ್ ಮಾಡಿ ಅಂದೆ ಆಗ್ಲೂ ಮಾಡಲಿಲ್ಲ. ಮೇಯರ್ ಆಯ್ಕೆ ವಿಚಾರದಲ್ಲಿ ನಮ್ಮದೇನೂ ನಡೆಯುವುದಿಲ್ಲ. ಈಗಲೂ ಹಾಗೆ ನಮ್ಮ ಪಕ್ಷದ ವರಿಷ್ಠರು ಸೂಚಿಸುವ ಅಭ್ಯರ್ಥಿಗೆ ಓಟ್ ಹಾಕುತ್ತೇನೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ದ ಪರೋಕ್ಷವಾಗಿ ಜಿ.ಟಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಮೇಯರ್ ಚುನಾವಣೆಗೆ ಎಲ್ಲರೂ ಸಿದ್ದರಾಗಿದ್ದಾರೆ. ಸಾರಾ ಮಹೇಶ್ ಮೇಯರ್ ಅಭ್ಯರ್ಥಿಯನ್ನ ಫೈನಲ್ ಮಾಡ್ತಾರೆ. ನಾನು ತಟಸ್ಥನಾಗಿದ್ದೀನಿ ಅನ್ನೊ ಕಾರಣಕ್ಕೆ ನಮ್ಮ ವರಿಷ್ಠರು ನನ್ನನ್ನ ತಟಸ್ಥವಾಗಿರ್ಲಿ ಅಂತಾ ಬಿಟ್ಟಿದ್ದಾರೆ. ಹೀಗಾಗಿ ಮೈಸೂರು ಮೇಯರ್ ಚುನಾವಣೆಯಲ್ಲಿಯೂ ನಾನು ತಟಸ್ಥನಾಗಿರ್ತಿನಿ ಎಂದು ಜಿ.ಟಿ ದೇವೇಗೌಡರು ಸ್ಪಷ್ಟನೆ ನೀಡಿದರು.
Key words: mysore-mayor –election- Former minister -GT Deve Gowda