ಮೈಸೂರು,ಜುಲೈ,16,2021(www.justkannada.in): ಚುನಾವಣೆ ವೇಳೆ ಸೂಕ್ತ ಆದಾಯ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆಯ ಹಿಂದಿನ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ಧಾದ ನಂತರ ಉಪಮೇಯರ್ ಅ ಅಧಿಕಾರ ನಿರ್ವಹಿಸುತ್ತಿದ್ದಾರೆ.
ಈ ಮಧ್ಯೆ ಜೂನ್ 11ಕ್ಕೆ ನೂತನ ಮೇಯರ್ ಆಯ್ಕೆಗೆ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಚುನಾವಣೆ ಮುಂದೂಡಿಕೆಯಾಗಿತ್ತು, ಈ ಮಧ್ಯೆ ಸದ್ಯಕ್ಕೆ ಮೇಯರ್ ಸ್ಥಾನಕ್ಕೆ ಚುನಾವಣೆಯ ನಡೆಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಈ ಕುರಿತು ಇಂದ ಮೈಸೂರಿನಲ್ಲಿ ಮಾತನಾಡಿರುವ ಸಚಿವ ಎಸ್.ಟಿ ಸೋಮಶೇಖರ್, ಸಹಕಾರ ಕ್ಷೇತ್ರದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಲು ಮಾತ್ರ ತೀರ್ಮಾನಿಸಲಾಗಿದೆ. ಅಭಿವೃದ್ಧಿ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನವರಿಗೆ ಜಿಲ್ಲಾ ಪಂಚಾಯತ್ , ತಾಲ್ಲೂಕು ಪಂಚಾಯತ್ ಚುನಾವಣೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.
GSLR ಘಟಕವನ್ನು ಉದ್ಘಾಟನೆ…
ಮೈಸೂರು ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ GSLR ಘಟಕವನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ. ಬೈರತಿ ಬಸವರಾಜ್ ಉದ್ಘಾಟಿಸಿದರು. ಸಚಿವದ್ವಯರಿಗೆ ಶಾಸಕ ಎಲ್ ನಾಗೇಂದ್ರ ಸಾಥ್ ನೀಡಿದರು. ಜಿಲ್ಲಾಧಿಕಾರಿ ಬಗಾದಿ ಗೌತಮ್.ಸ್ಥಳೀಯ ಮುಖಂಡರು ಅಧಿಕಾರಿಗಳು ಭಾಗಿಯಾಗಿದ್ದರು.
ENGLISH SUMMARY…..
MCC Mayor elections put off as of now
Mysuru, July 16, 2021 (www.justkannada.in): The membership of former Mysuru mayor Rukmini Madegowda was canceled due to the non-submission of Income certificate during the elections. Hence, the Deputy Mayor is performing the duty presently.
The Mayoral election was scheduled for June 11, which was postponed. But now the District In-charge Minister S.T. Somashekar has informed that the mayoral elections will not be held as of now.
Speaking in Mysuru about this the Minister informed that the government has decided to conduct elections only in the cooperative sector for president and vice-president posts. “The decision has been taken keeping in mind development. The ZP, TP elections will be most probably held in January 2022,” he said.
GSLR unit inaugurated
Mysuru District In-charge Minister S.T. Somashekar today inaugurated the GSLR unit in the Mysuru city police station limits. He was accompanied by Urban Development Minister B.A. Byrati Basavaraj. MLA Nagendra, Deputy Commissioner Bagadi Gowtham, and local leaders were present.
Keywords: Mysuru/ District In-charge Minister/ Mayor elections/ put off
Key words: Mysore -Mayor- Election-minster-ST Somashekar