ಮೈಸೂರು ಮೇಯರ್ ಚುನಾವಣೆ: ಮೂರು ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ.

ಮೈಸೂರು,ಆಗಸ್ಟ್,25,2021(www.justkannada.in): ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಚುನಾವಣೆ ಹಿನ್ನೆಲೆ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು.

ಮೇಯರ್ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ  ಅಶ್ವಿನಿ ಅನಂತು, ಬಿಜೆಪಿ ಅಭ್ಯರ್ಥಿಯಾಗಿ ಸುನಂದಾ ಪಾಲನೇತ್ರಾ, ಕಾಂಗ್ರೆಸ್ ಅಭ್ಯರ್ಥಿಯಾಗಿ  ಶಾಂತಕುಮಾರಿ  ಸ್ಪರ್ಧಿಸಿದ್ದಾರೆ.  ಪ್ರಾದೇಶಿಕ ಆಯುಕ್ತ ಪ್ರಕಾಶ್ ಗೆ ಜೆಡಿಎಸ್ ಅಭ್ಯರ್ಥಿ ಅಶ್ವಿನಿ ಅನಂತು  ನಾಮಪತ್ರ ಸಲ್ಲಿಕೆ ಮಾಡಿದರು. ಇವರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಚಲುವೇಗೌಡ, ಮಾಜಿ‌ ಮೇಯರ್ ಚಿನ್ನಿ ರವಿ, ಪಾಲಿಕೆ ಸದಸ್ಯ ಎಸ್ ಬಿಎಂ ಮಂಜು ಸೇರಿ ಮತ್ತಿತರರು ಸಾಥ್ ನೀಡಿದರು. ಅಶ್ವಿನಿ ಅನಂತು ವಾರ್ಡ್ ನಂ.37ರ ಪಾಲಿಕೆ ಸದಸ್ಯೆಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರಾ, ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ  ಅವರು ಸಹ ಪ್ರಾದೇಶಿಕ ಆಯುಕ್ತ ಪ್ರಕಾಶ್‌ಗೆ ನಾಮಪತ್ರ  ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರಾಗೆ ಸದಸ್ಯರಾದ ಶಿವಕುಮಾರ್, ಬಿ.ವಿ ಮಂಜುನಾಥ್ ಸೇರಿದಂತೆ ಇತರರ ಸಾಥ್ ನೀಡಿದರು. ಸುನಂದಾ ಪಾಲನೇತ್ರಾ ಪಾಲಿಕೆಯ 59 ನೇ ವಾರ್ಡ್‌ನ ಸದಸ್ಯೆಯಾಗಿದ್ದಾರೆ. ಶಾಂತಕುಮಾರಿ ಪಾಲಿಕೆ 32ನೇ ವಾರ್ಡ್ ಸದಸ್ಯೆಯಾಗಿದ್ದಾರೆ.

Key words: Mysore –mayor- election-Nomination- submission – three party -candidates.