ಮೈಸೂರು,ಆಗಸ್ಟ್,25,2021(www.justkannada.in): ಇಂದು ನಡೆಯುವ ಮೈಸೂರು ಪಾಲಿಕೆ ಮೇಯರ್ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು, ಈ ಮಧ್ಯೆ ಬಿಜೆಪಿ ಪಾಳಯ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ.
ಬಿಜೆಪಿ ಕಚೇರಿಯಲ್ಲಿ ಇಂದು ಪಾಲಿಕೆ ಸದಸ್ಯರ ತುರ್ತು ಸಭೆ ನಡೆದಿದ್ದು, ಈ ವೇಳೆ ಪಾಲಿಕೆ ಸದಸ್ಯರು, ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಶಾಸಕ ಎಸ್.ಎ ರಾಮದಾಸ್ ಈ ಸಭೆಗೂ ಗೈರಾಗಿದ್ದರು. ಹೀಗಾಗಿ ಮೇಯರ್ ಚುನಾವಣೆಯಲ್ಲಿ ರಾಮದಾಸ್ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಪಾಲಿಕೆ ಮೇಯರ್ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಾ.ರಾ.ಮಹೇಶ್ ಅವರಿಗೆ ಮನವಿ ಮಾಡಿದ್ದೆ. ಎರಡು ಸಲ ನಮಗೆ ತಪ್ಪಿದೆ ಅಂತ ಕೇಳಿದ್ದೆ. ಹೈಕಮಾಂಡ್ ಜೊತೆ ಮಾತನಾಡಿ ಹೇಳುತ್ತೇನೆ ಎಂದು ಹೇಳಿದ್ದರು. ಆದ್ರೆ ಈವರೆಗು ಯಾವುದೇ ಮಾಹಿತಿ ಕೊಟ್ಟಿಲ್ಲ. ನಾಮಪತ್ರ ಸಲ್ಲಿಸಲು ಹೇಳಿದ್ದೆ,ಅದರಂತೆ ಸಲ್ಲಿಸಿದ್ದಾರೆ. 12 ಗಂಟೆವರೆಗೂ ಸಮಯ ಇದೆ. ನಮಗೆ ಮೇಯರ್ ಸಿಗಬೇಕು ಎಂಬ ಆಸೆ ಕಾರ್ಯಕರ್ತರಲ್ಲಿದೆ. ಕಾದು ನೋಡೋಣ ಎಂದರು.
ENGLISH SUMMARY….
BJP confident of bagging Mayor post in Mysuru: Whip issued to Corporators, MLAs
Mysuru, August 25, 2021 (www.justkannada.in): The mayoral elections of Mysuru which is scheduled to be held today have triggered much curiosity among the people, whereas the BJP is confident of bagging it.
An emergency meeting of the members was held at the BJP office in Mysuru today, where a whip was issued to the Corporators and MLAs. MLA S.A. Ramdas who is visibly upset about not getting a berth in the cabinet remained away from this program also. Hence, his move has triggered curiosity in the Mysuru mayoral elections.
In his response to the mayoral elections, District In-charge Minister S.T. Somashekar informed that he had appealed to the JDS leader Sa. Ra.Mahesh. “He had informed that he would discuss with the high command and come back to me. But he has not given any information till now. I had asked to submit a nomination and he has done. There is time till 12.00 noon. Our members want to grab the Mayor’s seat. Let us wait and see,” he added.
Keywords: Mayoral elections/ today/ Mysuru/ BJP confident
Key words: Mysore -mayor –election- Whip –bkjp-members -MLA