ಮೈಸೂರು,ಫೆಬ್ರವರಿ,25,2021(www.justkannada.in): ನಿನ್ನೆಯಷ್ಟೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆದು ಜೆಡಿಎಸ್-ಕಾಂಗ್ರೆಸ್ ಮೈತ್ರಿಯೇ ಮುಂದುವರೆದಿದೆ.
ಮೇಯರ್ ಆಗಿ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ, ಉಪಮೇಯರ್ ಆಗಿ ಕಾಂಗ್ರೆಸ್ ನ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ. ಈ ಮೂಲಕ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೇರಬೇಕೆಂದು ಆಸೆ ಇಟ್ಟುಕೊಂಡಿದ್ದ ಬಿಜೆಪಿಗೆ ನಿರಾಸೆ ಉಂಟಾಯಿತು. ಬಿಜೆಪಿಯ ಮೇಯರ್ ಆಸೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ತಣ್ಣೀರು ಹಾಕಿತು.
ಹೀಗಾಗಿ ಮೇಯರ್ ಸ್ಥಾನ ಕೈತಪ್ಪಿದ ಹಿನ್ನಲೆ, ಪಾಲಿಕೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿ ಸದಸ್ಯೆ ಸುನಂದ ಪಾಲನೇತ್ರ ಮುಂದಾಗಿದ್ದಾರೆ. ಕುವೆಂಪುನಗರದ ವಾರ್ಡ್ ನಂ.59ರ ಪಾಲಿಕೆ ಸದಸ್ಯೆಯಾಗಿರುವ ಸುನಂದ ಪಾಲನೇತ್ರ ರಾಜಿನಾಮೆ ನೀಡುವ ಕುರಿತು ಸಿಎಂಗೆ ಪತ್ರ ಬರೆದಿದ್ದಾರೆ.
ಪಕ್ಷದಿಂದ ಸ್ಫರ್ಧಿಸಿ ಪರಾಭವಗೊಂಡಿದ್ದೇನೆ. ಇದರದ ಬೇಸರವಾಗಿದೆ. ಪಾಲಿಕೆ ಸದಸ್ಯೆಯಾಗಿ ಮುಂದುವರೆಯಲು ಮಾನಸಿಕ ಹಿಂಸೆ ಆಗುತ್ತಿದೆ.ಹಾಗಾಗಿ ರಾಜಿನಾಮೆ ನೀಡುವ ಉದ್ದೇಶ ಹೊಂದಿದ್ದೇನೆ. ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸಿಎಂಗೆ ಸುನಂದ ಪಾಲನೇತ್ರ ಮನವಿ ಮಾಡಿದ್ದಾರೆ.
Key words: Mysore- Mayor –mysore city corporation-resign-letter-CM