ಮೈಸೂರು,ಮಾ,4,2020(www.justkannada.in): ಕಟ್ಟಡ ನಕ್ಷೆ ಅನುಮೋದನೆಗೆ ಇನ್ನೂ ಮುಂದೆ ಮನೆಯಲ್ಲೆ ಕುಳಿತು ಅರ್ಜಿ ಸಲ್ಲಿಸಬಹುದು. ಹೌದು ಕಟ್ಟಡ ನಕ್ಷೆ ಅನುಮೂದನೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನ ಮೈಸೂರು ಮಹಾನಗರ ಪಾಲಿಕೆ ಇಂದಿನಿಂದ ಜಾರಿ ಮಾಡಿದೆ.
ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಲ್ಯಾಂಡ್ ಅಂಡ್ ಬಿಲ್ಡಿಂಗ್ ಫ್ಲಾನ್ ಅಪ್ರೂವಲ್ ಸಿಸ್ಟಮ್ – ನಿರ್ಮಾಣ್ 2 ತಂತ್ರಾಂಶಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಚಾಲನೆ ನೀಡಿದರು. ಈ ವೇಳೆ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಹಾಗೂ ಪಾಲಿಕೆ ಸ್ಥಾಯಿಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
ಕಟ್ಟಡ ನಕ್ಷೆ ಅನುಮೋದನೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಇನ್ನೂ ಮುಂದೆ ಪಾಲಿಕೆಗೆ ಅಲಿಯಬೇಕಿಲ್ಲ. ಇಂದಿನಿಂದ ಆನ್ ಲೈನ್ ಮಂಜುರಾತಿ ವ್ಯವಸ್ಥೆ ಆರಂಭವಾಗಿದ್ದು, ಈಗ ಮನೆಯಲ್ಲೆ ಕುಳಿತ ಕಟ್ಟಡ ನಕ್ಷೆ ಅನುಮೋದನೆಗೆ ಅರ್ಜಿ ಸಲ್ಲಿಸಬಹುದು. ದಾಖಲೆ ಸರಿ ಇದ್ದಲ್ಲಿ ಏಳೇ ದಿನದಲ್ಲಿ ಎನ್.ಒ.ಸಿ ಸಿಗಲಿದೆ.
ಚಾಲನೆ ಬಳಿಕ ಮಾತನಾಡಿದ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಆನ್ ಲೈನ್ ಮೂಲಕ ನಕ್ಷೆ ಅನುಮೂದನೆ ಅರ್ಜಿ ಸಲ್ಲಿಸಬೇಕು. www.mrc.gov.in ವೆಬ್ ಸೈಟ್ ಗೆ ಲಾಗಿನ ಆಗಿವು ಮೂಲಕ ಅರ್ಜಿ ಸಲ್ಲಿಸಬಹುದು. ಇನ್ಮುಂದೆ ನೇರವಾಗಿ ಅರ್ಜಿ ತೆಗೆದುಕೊಳ್ಳುವುದು ಇಂದಿನಿಂದಲೆ ಸ್ಥಗಿತಗೊಳ್ಳಲಿದೆ. ಪಾರಂಪರಿಕ ವ್ಯಾಪ್ತಿಯಲ್ಲಿ ನಿರ್ಮಿಸಿರುವ ವಸತಿ ಹಾಗೂ ವಾಣಿಜ್ಯ ಕಟ್ಟೆಗಳಿಗೆ ಪಾರಂಪರಿಕ ಸಮಿತಿ ಅನುಮತಿ ಬೇಕಿರುತ್ತದೆ. ಅಂತಹ ಅರ್ಜಿಗಳನ್ನು ಮಾತ್ರ ನೇರವಾಗಿ ಸ್ವೀಕರಿಸಲಾಗುವುದು ಎಂದು ಮಾಹಿತಿ ನೀಡಿದರು.
ಧಾರ್ಮಿಕ ಹಾಗೂ ಶೈಕ್ಷಣಿಕ ಉದ್ದೇಶದ ಕಟ್ಟಡಗಳಿಗೆ ಕೌನ್ಸಿಲ್ ಅನುಮತಿ ಬೇಕಿರುವುದರಿಂದ ಅಂತಹ ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗುವುದು. ಉಳಿದಂಗೆ 30 ದಿನಗಳ ಒಳಗೆ ಕಟ್ಟಡ ಪರವಾನಗೆ ನೀಡಲಾಗವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಹೇಳಿದರು.
Key words: Mysore Mayor – Nirman 2 software-Apply – Building -Map- approval