ಮೈಸೂರು,ಜೂನ್,12,2023(www.justkannada.in): ಮೈಸೂರಿನಲ್ಲಿ ಕೇಬಲ್ ವೈರ್ ಕಟ್ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಅವರಿಗೆ ಕೇಬಲ್ ಟಿವಿ ಅಸೋಸಿಯೇಷನ್ ಮನವಿ ಸಲ್ಲಿಸಿದ್ದು, ಕೇಬಲ್ ವೈರ್ ಗಳನ್ನ ಕತ್ತರಿಸದಂತೆ ಮನವಿ ಮಾಡಿತು.
ಈ ಬಗ್ಗೆ ಸ್ಪಷ್ಟನೆ ಕೊಟ್ಟ ಮೈಸೂರು ಮೇಯರ್ ಶಿವಕುಮಾರ್. ತಪ್ಪು ತಿಳುವಳಿಕೆಯಿಂದ ಕೇಬಲ್ ಗಳನ್ನ ಕಟ್ ಮಾಡಲಾಗಿದೆ. ತಕ್ಷಣವೇ ಇದನ್ನು ನಿಲ್ಲಿಸಲು ಆದೇಶಿಸಿದ್ದೇನೆ. ದೂರವಾಣಿ ಕೇಬಲ್ ಗಳನ್ನ ಅಂಡರ್ ಗ್ರೌಂಡ್ ನಲ್ಲಿ ಅಳವಡಿಸಲು ಸೂಚಿಸಿದ್ದು ಕೆಲವು ದೂರವಾಣಿ ಸಂಸ್ಥೆಗಳು ಅದನ್ನು ನಿರ್ಲಕ್ಷಿಸಿದ್ದವು. ಹೀಗಾಗಿ ದೂರವಾಣಿ ವೈರ್ ಕಟ್ ಮಾಡಲು ನಾವೇ ಹೇಳಿದ್ದೇವೆ. ಇದನ್ನ ತಪ್ಪಾಗಿ ಅರ್ಥೈಸಿಕೊಂಡು ಕೇಬಲ್ ವೈರ್ ಕಟ್ ಮಾಡಲಾಗಿದೆ. ಇನ್ನು ಮುಂದೆ ಈ ತಪ್ಪು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದರು.
ನಂತರ ಕೇಬಲ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಮಾತನಾಡಿ, ಪಾಲಿಕೆ ನಿರ್ಧಾರದಿಂದ ಕೇಬಲ್ ಆಪರೇಟರ್ ಗಳಿಗೆ ತೊಂದರೆಯಾಗುತ್ತಿದೆ. ಪಾಲಿಕೆ ಹಾಗೂ ಕೆಇಬಿ ಜಗಳದಿಂದ ಕೇಬಲ್ ಆಪರೇಟರ್ ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಾಂತಾಗಿದೆ. ನಾವು ಮನವಿ ಕೊಟ್ಟ ನಂತರ ಮೇಯರ್ ಅವರು ಸ್ಪಂದಿಸಿದ್ದಾರೆ. ಪಾಲಿಕೆಯಿಂದ ಇದೇ ರೀತಿ ಸಮಸ್ಯೆ ಉಂಟಾದರೆ ನಾವು ಸಹ ನಮ್ಮ ದಾರಿ ನೋಡಿಕೊಳ್ಳಬೇಕಾಗುತ್ತೆ. ಇನ್ನೂ ಕೆಲವೇ ತಿಂಗಳುಗಳಲ್ಲಿ ಪಾಲಿಕೆ ಚುನಾವಣೆ ಬರಲಿದೆ. ಆಗ ನಮ್ಮ ಶಕ್ತಿಯನ್ನ ನಾವು ಪಾಲಿಕೆಗೆ ತೋರಿಸಬೇಕಗುತ್ತೆ ಎಂದು ಎಚ್ಚರಿಕೆ ನೀಡಿದರು.
Key words: Mysore Mayor -Shivakumar -orders -not – cut- cable- wires.