ನೀರಿನ ಬಿಲ್ ಪಾವತಿಗೆ 3 ತಿಂಗಳ ಗಡುವು ನೀಡಲಾಗಿದೆ : ಸಚಿವ ಬಸವರಾಜು

 

ಮೈಸೂರು, ಮೇ 07, 2020 : (www.justkannada.in news ) ನಗರ ಪ್ರದೇಶದಲ್ಲಿ ನೀರಿನ ಕಂದಾಯ ಪಾವತಿಗೆ ಯಾವುದೇ ಒತ್ತಡ ಹೇರಲ್ಲ. ಮೂರು ತಿಂಗಳು ಸಮಯ ನೀಡಿದ್ದೇವೆ ಎಂದು ಸಚಿವ ಬಸವರಾಜ್ ಸ್ಪಷ್ಟಪಡಿಸಿದರು.

ಮೈಸೂರು ನಗರ ಪಾಲಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ತಸ್ನೀಂ ಜತೆಗೂಡಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದರು.

ದೇಶದಲ್ಲೆ ಲಾಕ್ ಡೌನ್ ಇದೆ. ಆದ್ದರಿಂದ ನಾವೀಹ ಜನತೆಯನ್ನು ಕಂದಾಯ ಪಾವತಿಸಿ ಎಂದು ಕೇಳಲಾಗಲ್ಲ. ಜತೆಗೆ ಈಗ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ನಾವು ಜನರನ್ನ‌ ಒತ್ತಾಯ ಮಾಡಲಾಗದು. ಅದಕ್ಕಾಗಿ ನೀರಿನ ಬಿಲ್ ಪಾವತಿಗೆ ಮೂರು ತಿಂಗಳು ಕಾಲವಕಾಶ ನೀಡಲಾಗಿದೆ ಎಂದರು.

 mysore-mcc-basavaraju-water-tax-karnataka

ಇಂದಿನ ಈ ಸಭೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಮುಖವಾಗಿ ನೀರಿನ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ನಾನು ಈ ವಿಚಾರವನ್ನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಮೈಸೂರು ವಿಶಾಲವಾದ ನಗರ. ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ನಾನು ಮತ್ತೊಮ್ಮೆ ಬರುತ್ತೇನೆ‌. ಆಗ ಸಂಪೂರ್ಣವಾಗಿ ಮತ್ತಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಯಾವುದೆ ಸಮಸ್ಯೆಗಳು ಉಂಟಾಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ. ಸಭೆ ಬಳಿಕ ಸಚಿವ ಭೈರತಿ ಬಸವರಾಜು ಹೇಳಿಕೆ.

ಇನ್ನೂ ಅಕ್ರಮ ಸಕ್ರಮ ಯೋಜನೆ ಜಾರಿ ಮಾಡುವ ವಿಚಾರ. ಅಕ್ರಮ ಸಕ್ರಮ ಯೋಜನೆ ಜಾರಿ ಸಂಬಂಧ ಸಿಎಂ ಇದರ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ‌. ಹೇಗೆ,ಯಾವ ರೀತಿ ಜಾರಿ ಮಾಡಬೇಕು ಎಂಬುದರ ಬಗ್ಗೆ ಸಿಎಂ ಕೆಲವೇ ದಿನಗಳಲ್ಲಿ ತಿಳಿಸುತ್ತಾರೆ‌. ನಾವು ಸಹ ಸಿಎಂಗೆ ಇದರ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಮೈಸೂರಿನಲ್ಲಿ ಸಚಿವ ಭೈರತಿ ಬಸವರಾಜು ಹೇಳಿಕೆ.

key words : mysore-mcc-basavaraju-water-tax-karnataka